– 10 ಲಕ್ಷ ಜನ ಸೇರುವ ನಿರೀಕ್ಷೆ
ಮೈಸೂರು: ಮೇ 8 ರಂದು ಸಂಜೆ ಮಿನಿ ದಸರಾ ಮಾದರಿಯಲ್ಲಿ ಯಡಿಯೂರಪ್ಪನವರ (BS Yediyurappa) ಪುರ ಪ್ರವೇಶ ಆಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ (BY Vijayendra) ಹೇಳಿದರು.
ಮೈಸೂರಿನ (Mysuru) ಚಾಮುಂಡಿ ಬೆಟ್ಟದ (Chamundi Hills) ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು ಸಮಾವೇಶದ ಕುರಿತು ಹಲವು ವಿಷಯಗಳನ್ನು ಹಂಚಿಕೊಂಡರು.ಇದನ್ನೂ ಓದಿ: ಮಧ್ಯಪ್ರಾಚ್ಯ ಯುದ್ಧ ಎಫೆಕ್ಟ್; ಉತ್ತರ ಕನ್ನಡದಲ್ಲಿ ಮತ್ತೆ ಪೆಟ್ರೋಲ್, ಡೀಸೆಲ್ ಕೊರತೆ
ಕರ್ನಾಟಕದಲ್ಲಿನ ಪ್ರಸ್ತುತ ರಾಜಕೀಯ ಸ್ಥಿತಿಯ ಬಗ್ಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕೆಲವರು ಅದೃಷ್ಟದಿಂದ ಮುಖ್ಯಮಂತ್ರಿಗಳಾಗಿದ್ದಾರೆ. ಆದರೆ ಯಡಿಯೂರಪ್ಪ ಅದೃಷ್ಟದಿಂದ ಮುಖ್ಯಮಂತ್ರಿಯಾದವರಲ್ಲ. ಬದಲಾಗಿ ಅವರು ಸತತ ಹೋರಾಟದಿಂದ ಸಿಎಂ ಆದವರು. ತಮ್ಮ 50 ವರ್ಷ ರಾಜಕಾರಣದಲ್ಲಿ 45 ವರ್ಷ ಯಡಿಯೂರಪ್ಪ ಬರಿ ಹೋರಾಟವನ್ನೇ ಮಾಡಿದ್ದಾರೆ. ಇದೇ ಕಾರಣಕ್ಕೆ ಈ ಸಮಾವೇಶವನ್ನು ಕೈಗೊಂಡಿದ್ದು ಇದರಿಂದ ಯಾವುದೇ ರಾಜಕೀಯದ ಲಾಭದ ಆಸೆ ನನಗಾಗಲಿ ನಮ್ಮ ಪಕ್ಷಕ್ಕಾಗಲಿ ಇಲ್ಲ ಎಂದು ಹೇಳಿದರು.
ಚುನಾವಣೆ ಆರು ತಿಂಗಳಿದ್ದಾಗ ಸಮಾವೇಶ ಕೈಗೊಂಡಿದ್ದರೆ ಈ ರೀತಿಯ ಪ್ರಶ್ನೆಗಳು ಬರುತ್ತಿದ್ದವು. ಆದರೆ ಈಗ ಈ ರೀತಿಯ ಪ್ರಶ್ನೆಗಳಿಗೆ ಅವಕಾಶವಿಲ್ಲ. ಮೇ 8 ರಂದು ಸಂಜೆ ಮಿನಿ ದಸರಾ ಮಾದರಿಯಲ್ಲಿ ಯಡಿಯೂರಪ್ಪನವರ ಪುರ ಪ್ರವೇಶ ಆಗುತ್ತದೆ. ಸಮಾವೇಶದಲ್ಲಿ ರಾಜಕಾರಣಿಗಳಷ್ಟೇ ಅಲ್ಲ ರಾಜ್ಯದ ಬಹುತೇಕ ಮಠಾಧೀಶರು ಭಾಗವಹಿಸಲಿದ್ದಾರೆ. ಈ ಸಮಾವೇಶದ ಸಂದೇಶ ಏನು ಎಂಬುವುದು ಸಮಾವೇಶ ಮುಗಿದ ಬಳಿಕ ಗೊತ್ತಾಗಲಿದೆ. ಸುಮಾರು 10 ಲಕ್ಷ ಜನ ಸೇರುವ ನಿರೀಕ್ಷೆಯಲ್ಲಿದ್ದೇವೆ. ಎಂದು ಅವರು ಮಾತನಾಡಿದರು.ಇದನ್ನೂ ಓದಿ: ಇರಾನ್ ಡ್ರೋನ್ ನಾಶ ಮಾಡಲು ಯುಎಇಗೆ ‘ಐರನ್ ಬೀಮ್’ ಲೇಸರ್ ಆಯುಧ ಕೊಟ್ಟ ಇಸ್ರೇಲ್
ಮಾನವೀಯತೆ ಇಲ್ಲದ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ
ಇನ್ನು ರಾಜ್ಯ ರಾಜಕೀಯದಲ್ಲಿ ಕುರ್ಚಿ ಕಾಳಗದ ಕುರಿತು ಮಾತನಾಡಿದ ಅವರು, ಮಾನವೀಯತೆ ಇಲ್ಲದ ಭ್ರಷ್ಟ ಸರ್ಕಾರ ರಾಜ್ಯದಲ್ಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಕುರ್ಚಿಗಾಗಿ ದಿನವೂ ಕಿತ್ತಾಡುತ್ತಿದ್ದಾರೆ. ಸಿದ್ದರಾಮಯ್ಯ ಗ್ಯಾಂಗ್ ಮೊದಲು ದೆಹಲಿಗೆ ಹೋದರೆ ಆಮೇಲೆ ಡಿಕೆ ಗ್ಯಾಂಗ್ ಹೋಗುತ್ತಿದೆ. ಇವರ ನಡುವೆ ಡಿ.ಕೆ ಸಿದ್ದರಾಮಯ್ಯ ಜಗಳದಲ್ಲಿ ನಮಗೆನಾದರೂ ಲಾಭವಾಗುತ್ತಾ ಎಂದು ಮಲ್ಲಿಕಾರ್ಜುನ ಖರ್ಗೆ ಸಹ ಟವಲ್ ಹಾಕಿದ್ದಾರೆ. ಇಡೀ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ ಎಂದು ಅವರು ಕಿಡಿಕಾರಿದರು.
ಕೈಪಾಳಯದಲ್ಲಿನ ಒಗ್ಗಟ್ಟಿನ ಬಗ್ಗೆ ಮಾತನಾಡಿದ ಅವರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಿದ್ದಾರೆ.ಇದು ಆ ಪಕ್ಷದ ಸ್ಥಿತಿ. ಮುಖ್ಯಮಂತ್ರಿ ಬದಲಾಗುವ ಸಮಯ ಬಂದಿದೆ. ಅದನ್ನೇ ಖರ್ಗೆ ಅವರು ಹೇಳಿದ್ದಾರೆ. ಅಲ್ಲಿಗೆ ಮುಖ್ಯಮಂತ್ರಿ ಬದಲಾಗಬಹುದು ಎಂದು ವಿಜಯೇಂದ್ರ ಮಾತನಾಡಿದರು.ಇದನ್ನೂ ಓದಿ: ಶೃಂಗೇರಿ | ಮರು ಎಣಿಕೆಯಲ್ಲೂ ಕಾಂಗ್ರೆಸ್ ಅಭ್ಯರ್ಥಿಗೆ ಜಯ – ಲೀಡ್ ಹೆಚ್ಚಿಸಿಕೊಂಡ ರಾಜೇಗೌಡ

