Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರಬಲಗೊಂಡ ಸೂಪರ್‌ ಎಲ್‌ ನಿನೋ – 2026ರ ಉತ್ತರಾರ್ಧದಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಾ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಪ್ರಬಲಗೊಂಡ ಸೂಪರ್‌ ಎಲ್‌ ನಿನೋ – 2026ರ ಉತ್ತರಾರ್ಧದಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಾ?

Latest

ಪ್ರಬಲಗೊಂಡ ಸೂಪರ್‌ ಎಲ್‌ ನಿನೋ – 2026ರ ಉತ್ತರಾರ್ಧದಲ್ಲಿ ಗರಿಷ್ಠ ತಾಪಮಾನ ದಾಖಲಾಗುತ್ತಾ?

Public TV
Last updated: May 2, 2026 7:38 am
Public TV
Share
4 Min Read
Super El Nino 2026
SHARE

ದೇಶದಲ್ಲಿ ಬಿರುಬೇಸಿಗೆಗೆ ಜನರು ಈಗಾಗಲೇ ತತ್ತರಿಸಿದ್ದಾರೆ. ಇದರ ನಡುವೆ ಭಾರತಕ್ಕೆ ಭೀಕರ ಬರಗಾಲ ತಟ್ಟುವ ಆತಂಕ ಎದುರಾಗಿದೆ. ರಣ ಬಿಸಿಲಿನ ಮಧ್ಯೆಯು ಜನರಿಗೆ ಈ ಎಲ್‌ ನಿನೋ (El Nino) ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ. 

ಹೌದು, ಸೂಪರ್ ಎಲ್‌ ನಿನೋ (Super El Nino) ಎಂಬುದು ಒಂದು ಹವಾಮಾನ ಪ್ರಕ್ರಿಯೆಯಾಗಿದೆ. ಸಾಮಾನ್ಯವಾಗಿ ಮಹಾಸಾಗರದ ನೀರಿನ ತಾಪಮಾನ ಹೆಚ್ಚಾಗುವುದರೊಂದಿಗೆ ಈ ಎಲ್‌ ನಿನೋ ಉದ್ಭವಿಸುತ್ತದೆ. ಈ ತಾಪಮಾನ ಹೆಚ್ಚಾದಾಗ ಜಗತ್ತಿನ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಎಲ್‌ ನಿನೋ ಹೆಚ್ಚಿನ ತಾಪಮಾನವನ್ನು ಉಂಟುಮಾಡುತ್ತದೆ. ಆದರೆ ಸೂಪರ್ ಎಲ್‌ ನಿನೋ ಅದಕ್ಕಿಂತ ಹೆಚ್ಚಿನ ತಾಪಮಾನ ಉಂಟು ಮಾಡಿ, ಸಮುದ್ರದ ನೀರನ್ನು ತೀವ್ರವಾಗಿ ಬಿಸಿ ಮಾಡುತ್ತದೆ. ಆಗ ಜಗತ್ತಿನ ಮೇಲಾಗುವ ಪರಿಣಾಮ ತೀವ್ರವಾಗುತ್ತದೆ. ಇದನ್ನೇ ಸೂಪರ್ ಎಲ್‌ ನಿನೋ ಎನ್ನುತ್ತಾರೆ. 

uq contact el nino summer weather headline 2560x1440 1

ಎಲ್‌ ನಿನೋ ಉಂಟಾಗೋದು ಹೇಗೆ?
ಸಾಮಾನ್ಯವಾಗಿ ಟ್ರೇಡ್ ವಿಂಡ್ಸ್ ಪಶ್ಚಿಮಕ್ಕೆ ಬೀಸುತ್ತದೆ. ಟ್ರೇಡ್ ವಿಂಡ್ಸ್ ಎಂದರೆ ಸದಾ ಒಂದೇ ದಿಕ್ಕಿನಲ್ಲಿ ಬೀಸುವ ಗಾಳಿಯಾಗಿದೆ. ಗಾಳಿ ಬೀಸುವುದರಿಂದ ನೀರಿನ ಚಲನೆ ಉಂಟಾಗುತ್ತದೆ. ಆಗ ಹವಾಮಾನ ಹಾಗೂ ಮಳೆಯ ಮೇಲೆ ಪರಿಣಾಮ ಬೀರುತ್ತದೆ. ಆದರೆ ಎಲ್‌ ನಿನೋ ಸಮಯದಲ್ಲಿ ಈ ಗಾಳಿ ದುರ್ಬಲವಾಗಿ ಬೀಸುತ್ತವೆ. ಎಲ್‌ ನಿನೋನಿಂದಾಗಿ ಸಮುದ್ರದ ತಾಪಮಾನ ಹೆಚ್ಚಾಗಿ ಹವಾಮಾನದಲ್ಲಿ ಬದಲಾವಣೆ ಉಂಟಾಗುತ್ತದೆ.

ಉಷ್ಣಾಂಶ ಹೆಚ್ಚಿಸಬಲ್ಲ ಹಾಗೂ ಮುಂಗಾರು ಮಾರುತಗಳಿಗೆ ಅಡ್ಡಿಪಡಿಸಬಲ್ಲ ನೈಸರ್ಗಿಕ ಹವಾಮಾನ ಮಾದರಿ `ಸೂಪರ್ ಎಲ್‌ನಿನೋ’ ಇದೀಗ ಪೆಸಿಫಿಕ್ ಮಹಾಸಾಗರದಲ್ಲಿ ಪ್ರಬಲಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಪೆಸಿಫಿಕ್ ಮಹಾಸಾಗರದಲ್ಲಿ ಹವಾಮಾನ ಪರಿಸ್ಥಿತಿ ಮೇಲೆ ವಿಜ್ಞಾನಿಗಳು ನಿಗಾ ಇಟ್ಟಿದ್ದಾರೆ.

ಯುರೋಪಿಯನ್ ಸೆಂಟರ್ ಫಾರ್ ಮೀಡಿಯಂ ರೇಂಜ್ ವೆದರ್ ಫೋರ್‌ಕಾಸ್ಟ್ ಪ್ರಕಾರ, ಈ ಬಾರಿ ಎಲ್-ನಿನೋ ಕಳೆದ 1 ಶತಮಾನದಲ್ಲೇ ಅತ್ಯಂತ ಪ್ರಬಲಗೊಂಡು ಹೊರಹೊಮ್ಮುವ ಆತಂಕವಿದೆ. 2026 ಉತ್ತರಾರ್ಧದಿಂದಲೇ ಆರ್ಭಟ ಶುರುವಾಗಬಹುದು. ಗರಿಷ್ಠ ತಾಪಮಾನ ಮುರಿದು ಹೊಸ ದಾಖಲೆ ಸೃಷ್ಟಿಸಬಹುದೆಂದು ಹೇಳಲಾಗುತ್ತಿದೆ. ಹೀಗಾಗಿ, ಭಾರತ ಸೇರಿದಂತೆ ಏಷ್ಯಾದ ದೇಶಗಳು ಇದರ ಹೊಡೆತಕ್ಕೆ ಸಿಲುಕಲಿವೆ. ವಿಶ್ವ ಹವಾಮಾನ ಸಂಸ್ಥೆ ಮತ್ತು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಗಳ ಪ್ರಕಾರ ಕೆಲವು ಮಾಡೆಲ್‌ಗಳು ಇದನ್ನು `ಸೂಪರ್’ ಅಥವಾ `ಗಾಡ್ಜಿಲ್ಲಾ’ ಎಲ್‌ನಿನೋ ಎಂದು ವರ್ಣಿಸುತ್ತಿವೆ.

Weather

ಇದರ ಲಕ್ಷಣಗಳೇನು?
* ಪೆಸಿಫಿಕ್ ಮಹಾಸಾಗರದ ಉಷ್ಣವಲಯದಲ್ಲಿ ಸಮುದ್ರದ ಮೇಲ್ಮೈ ನೀರು ಅಸಹಜವಾಗಿ ಬಿಸಿಯಾಗುವುದು
* ಪ್ರತಿ 2-7 ವರ್ಷಕ್ಕೊಮ್ಮೆ ಸಂಭವಿಸುವ ನೈಸರ್ಗಿಕ ಹವಾಮಾನ ಪ್ರಕ್ರಿಯೆ
* ಇದು ಜಾಗತಿಕ ಹವಾಮಾನ ವ್ಯವಸ್ಥೆಯನ್ನು ಬದಲಿಸುತ್ತದೆ
* ಭಾರತದ ನೈಋತ್ಯ ಮುಂಗಾರು ಮಳೆಯನ್ನು ದುರ್ಬಲಗೊಳಿಸುತ್ತದೆ
* 2026ರ ಮಧ್ಯದಿಂದ ಎಲ್‌ನಿನೋ ಸಕ್ರಿಯವಾಗುವ ಸಾಧ್ಯತೆ ಇದೆ

DELHI WEATHER

ಎಲ್ ನಿನೋ ಪರಿಣಾಮ ಏನು?
* ಭಾರತದ ಮೇಲೆ ಶೇ.50ರಷ್ಟು ಎಲ್‌ನಿನೋ ಪರಿಣಾಮ ಸಾಧ್ಯತೆ
* ಮುಂಗಾರು ಮಳೆ ಸಾಮಾನ್ಯಕ್ಕಿಂತ 8-10% ಕಡಿಮೆಯಾಗುವ ಆತಂಕ
* ಮೇನಿಂದ-ಜೂನ್ ಅವಧಿಯಲ್ಲಿ ತೀವ್ರ ಬಿಸಿಲು, ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ
* ರಾತ್ರಿಯ ತಾಪಮಾನವೂ ಸಾಮಾನ್ಯಕ್ಕಿಂತ ಹೆಚ್ಚು
* ಮುಂಗಾರು ಅವಲಂಬಿತ ಕೃಷಿ ಪ್ರದೇಶಗಳು ಹೆಚ್ಚು ತೊಂದರೆಗೆ ಸಿಲುಕುತ್ತವೆ
* ಮುಂಗಾರು ಕೊರತೆಯಿಂದ ಧಾನ್ಯಗಳು, ಬೆಳೆಗಳು, ತರಕಾರಿ ಉತ್ಪಾದನೆ ಕುಸಿಯುವ ಅಪಾಯ
* ಇದರಿಂದಾಗಿ ರೈತರ ಆದಾಯ ಕುಸಿತ
* ಜಲಾಶಯಗಳು, ಕೆರೆಗಳು ಖಾಲಿಯಾಗುವ ಸಾಧ್ಯತೆ
* ಕುಡಿಯುವ ನೀರು, ನೀರಾವರಿಗೆ ಸವಾಲು

WEATHER 1

ಇದಕ್ಕೂ ಮುನ್ನ 1982-83ರಲ್ಲಿ, 1977-78ರಲ್ಲಿ, 2015-16ರಲ್ಲಿ ಈ ಸೂಪರ್  ಎಲ್‌ ನಿನೋ ಕಾಣಿಸಿಕೊಂಡಿತ್ತು. ಈ ಸಮಯದಲ್ಲಿ ಭಾರತ ಸೇರಿದಂತೆ ಆಸ್ಟ್ರೇಲಿಯಾ, ಇಂಡೋನೇಷ್ಯಾ ಹೀಗೆ ಹಲವು ದೇಶಗಳದಲ್ಲಿ ಬರಗಾಲ ಪರಿಸ್ಥಿತಿ ಎದುರಾಗಿತ್ತು. ಮಾನ್ಸೂನ್ ಮಾರುತಗಳ ದುರ್ಬಲಗೊಂಡು ಮಳೆ ಕೊರತೆ ಉಂಟಾಗಿತ್ತು. ಇನ್ನು ಪೆರು, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಭಾರಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಇನ್ನು 2015-16ರಲ್ಲಿ ಉಷ್ಣತೆ ಹೆಚ್ಚಾಗಿ ಜಾಗತಿಕ ಹವಾಮಾನ ಅಸ್ತವ್ಯಸ್ತವಾಗಿತ್ತು.

summmer weather

ಭಾರತದ ಮೇಲೆ ಪರಿಣಾಮ ಏನು?
ಪೂರ್ವ, ಮಧ್ಯ, ವಾಯುವ್ಯ ಮತ್ತು ಆಗ್ನೇಯ ಭಾರತದ ಪರ್ಯಾಯ ದ್ವೀಪದ ಕೆಲವು ಭಾಗಗಳಲ್ಲಿ ಮೇನಿಂದ ಜೂನ್ ವರೆಗೆ ಸಾಮಾನ್ಯಕ್ಕಿಂತ ಹೆಚ್ಚಿನ ಬಿಸಿ ಗಾಳಿ ಅಥವಾ ಶಾಖದ ಅಲೆಗಳು ಬೀಸಲಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. 

ಭಾರತದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕಿಂತ ಹೆಚ್ಚಿನ ತಾಪಮಾನಕ್ಕೆ ಕಾರಣವಾಗುತ್ತದೆ. ಇದರಿಂದ ರಾತ್ರಿಯ ಸಮಯದಲ್ಲಿಯೂ ಬಿಸಿ ಶಾಖದ ಅನುಭವವಾಗಲಿದೆ. ಇದರಿಂದ ಮಳೆಯ ಮೇಲೆ ಪರಿಣಾಮ ಬೀರಲಿದ್ದು, ಬರ ಮತ್ತು ಕೃಷಿ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ವರ್ಷದ ಜನವರಿ ಹಾಗೂ ಫೆಬ್ರವರಿ ನಡುವೆ ಈಗಾಗಲೇ ಶೇಕಡ 60ರಷ್ಟು ಕಡಿಮೆಯಾಗಿದೆ.

Weather

ಭಾರತೀಯರ ಆರೋಗ್ಯದ ಮೇಲೆ ಪರಿಣಾಮ ಏನು?
ಸೂಪರ್ ಎಲ್‌ ನಿನೋ ದಿಂದಾಗಿ ತಾಪಮಾನ ಹೆಚ್ಚಾಗುತ್ತದೆ. ಇದರ ಪರಿಣಾಮ ನಿರ್ಜಲೀಕರಣ, ಅಧಿಕ ತಾಪಮಾನದಿಂದಾಗಿ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತದೆ. ಹೊರಾಂಗಣದಲ್ಲಿ ಕೆಲಸ ಮಾಡುವವರು, ಮಕ್ಕಳು, ವೃದ್ಧರು ಮತ್ತು ಹೃದಯ ಸಂಬಂಧಿ ಕಾಯಿಲೆ, ಮೂತ್ರಪಿಂಡದ ಕಾಯಿಲೆ ಅಥವಾ ಮಧುಮೇಹದಂಥ ಕಾಯಿಲೆ ಎದುರಿಸುತ್ತಿರುವವರಿಗೆ ಇದು ತೀವ್ರ ಪರಿಣಾಮವನ್ನುಂಟು ಮಾಡುತ್ತದೆ. 

ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಪ್ರಕಾರ, ತಾಪಮಾನವು ಜೀವಕ್ಕೆ ಅಪಾಯಕಾರಿಯಾಗುವ ಸಮಸ್ಯೆಗಳನ್ನು ಉಂಟುಮಾಡುತ್ತದೆ. ತಲೆ ತಿರುಗುವಿಕೆ, ಬೆವರುವಿಕೆ, ನಿರ್ಜಲೀಕರಣ ಇಂತಹ ಸಮಸ್ಯೆಗಳನ್ನು ತಂದೊಡ್ಡುತ್ತದೆ. 

weather

ಶಾಖ ಒಂದೇ ಅಲ್ಲದೆ ಅದರೊಂದಿಗೆ ಗಾಳಿಯ ಗುಣಮಟ್ಟ, ವಾಯು ಮಾಲಿನ್ಯ ಹಾಗೂ ಧೂಳು ಇವೆಲ್ಲವೂ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತವೆ. ಇದರಿಂದ ಉಸಿರಾಟದ ಸಮಸ್ಯೆ ಹೆಚ್ಚಾಗಿ, ಮಾನವನ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ. ಅಸ್ತಮಾ, ದೀರ್ಘಕಾಲದ ಶ್ವಾಸಕೋಶ ಸಂಬಂಧಿ ಕಾಯಿಲೆ ಹಾಗೂ ಅಲರ್ಜಿ ಇರುವವರು ಇಂತಹ ಸಮಯದಲ್ಲಿ ಹೆಚ್ಚಿನ ಪರಿಣಾಮವನ್ನು ಅನುಭವಿಸಬಹುದು.

ತಾಪಮಾನದಿಂದಾಗಿ ನಿದ್ರೆ ಕಡಿಮೆಯಾಗುವುದು, ಆಯಾಸ, ಕೆಲಸದ ಸಾಮರ್ಥ್ಯ ಕಡಿಮೆ ಇಂಥವುಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿದ್ರೆಯ ಕಡಿಮೆಯಿಂದಾಗಿ ಮಾನಸಿಕ ಆರೋಗ್ಯ, ರೋಗ ನಿರೋಧಕ ಶಕ್ತಿಯ ಮೇಲೆ ಪರಿಣಾಮ ಬೀರುತ್ತದೆ.

ಇದಲ್ಲದೆ ಈ ಎಲ್‌ ನಿನೋದಿಂದ ತಾಪಮಾನ ಹೆಚ್ಚಾಗಿ ಮಳೆ ಕಡಿಮೆಯಾಗಿ ಬರ ಪರಿಸ್ಥಿತಿಯನ್ನ ಉಂಟು ಮಾಡುವುದರ ಜೊತೆಗೆ ಹೆಚ್ಚಿನ ಮಳೆಯಾಗಿ ಪ್ರವಾಹಕ್ಕೂ ಕೂಡ ಕಾರಣವಾಗಬಹುದು. ಹೆಚ್ಚಿನ ಮಳೆಯಿಂದಾಗಿ ಡೆಂಗ್ಯೂ, ಮಲೇರಿಯಾದಂತಹ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದರಿಂದ ಆಹಾರ ಮತ್ತು ನೀರು ಮಾಲಿನ್ಯದಿಂದಾಗಿ ಕಾಯಿಲೆಗಳು ಉದ್ಭವಿಸುತ್ತದೆ.

TAGGED:2026America Supreme CourtasiaEl NinoindiaPacific Oceanಎಲ್‌ನಿನೋಪೆಸಿಫಿಕ್ ಮಹಾಸಾಗರಸೂಪರ್ ಎಲ್‌ನಿನೋಹವಾಮಾನ
Share This Article
Facebook Whatsapp Whatsapp Telegram

Cinema news

Karen Kshiti Suvarna September 21 set for Cannes market premiere
ಕೇನ್ಸ್‌ನಲ್ಲಿ ಕನ್ನಡ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ ಗೌರವ
Cinema Latest Sandalwood
Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post

You Might Also Like

Supreme Court 1
Court

ಮತ ಎಣಿಕೆಗೂ ಮುನ್ನ ಸುಪ್ರೀಂ ಕೋರ್ಟ್ ಮೊರೆ ಹೋದ ಟಿಎಂಸಿ

Public TV
By Public TV
8 hours ago
Delhi Capitals 2
Cricket

ಕನ್ನಡಿಗ ರಾಹುಲ್‌, ನಿಸ್ಸಂಕಾ ಬ್ಯಾಟಿಂಗ್‌ ಅಬ್ಬರಕ್ಕೆ ರಾಜಸ್ಥಾನ್‌ ತತ್ತರ – ಡೆಲ್ಲಿಗೆ 7 ವಿಕೆಟ್‌ಗಳ ಭರ್ಜರಿ ಜಯ

Public TV
By Public TV
8 hours ago
bengaluru rain
Bengaluru City

ಬೆಂಗಳೂರಿನ ಹಲವೆಡೆ ಸುರಿದ ಮಳೆ – ರಸ್ತೆಗಳು ಜಲಾವೃತ, ಜಯನಗರದಲ್ಲಿ ಆಟೋ ಮೇಲೆ ಉರುಳಿದ ಮರ

Public TV
By Public TV
8 hours ago
Girish Mattannavar
Bengaluru City

ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ಹೇಳಿಕೆ – ಗಿರೀಶ್ ಮಟ್ಟಣ್ಣನವರ್ ವಿರುದ್ಧ FIR

Public TV
By Public TV
10 hours ago
Yadagiri Death
Districts

ಯಾದಗಿರಿಯಲ್ಲಿ ಬಿಸಿಲಿನ ತಾಪಕ್ಕೆ ಕೂಲಿ ಕಾರ್ಮಿಕ ದುರ್ಮರಣ

Public TV
By Public TV
10 hours ago
Peenya Flyover 1
Bengaluru City

ಪೀಣ್ಯ ಫ್ಲೈಓವರ್‌ನಲ್ಲಿ 4 ದಿನ ವಾಹನ ಸಂಚಾರಕ್ಕೆ ನಿರ್ಬಂಧ

Public TV
By Public TV
11 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?