ಹಾಯ್ ನನ್ನವ್ನೇ!
ನೀನು ಪರಿಚಯವಾಗಿ ಇವತ್ತಿಗೆ ಮೂರು ವರ್ಷ. ಈ ಮೂರು ವರ್ಷ ಹೇಗೆಲ್ಲ ಕಳೆದು ಹೋಯ್ತು ಅಲ್ವಾ? ಮೊನ್ನೆ ಬಸ್‌ಲ್ಲಿ ಸಿಕ್ಕು ಮಾತಾಡಿ, ಪರಿಚಯ ಆದ ಹಾಗೆ ಇದೆ. ನೀನು ಪರಿಚಯ ಆದ್ಮೇಲೆ ನಾನು ಕೆಲಸಕ್ಕೆ ಹೋಗುವ ಪ್ರತಿ ದಿನವೂ ನಿನ್ನ ಪಕ್ಕದಲ್ಲೇ ಕೂತು ಜರ್ನಿ ಮಾಡ್ತಿದಿನಿ. ನಾನಗಾಗಿ ಬಸ್‌ಲ್ಲಿ ನೀನು, ನಿನಗಾಗಿ ನಾನು ಸೀಟ್ ಹಿಡ್ಕೊಂಡು ಕಾಯೋದು ಎಷ್ಟು ಚೆಂದ ಅಲ್ವಾ..?
ಒಂದೆರಡು ದಿನ ಹೇಳದೆ ಕೇಳದೆ ಬಸ್‌ಗೆ ನೀನು ಬರದೇ ಇದ್ದಾಗ ಮನಸ್ಸು ಎಷ್ಟು ಒದ್ದಾಡಿತ್ತು ಗೊತ್ತಾ? ಮಾರನೇ ದಿನ ಯಾಕೆ ಬರಲಿಲ್ಲ ಅಂತ ಸಿಟ್ಟು ಮಾಡೋಣ ಅಂದ್ಕೊಂಡಿದ್ದೆ. ಆ ಕೋಪ ನಿನ್ನ ಕಂಡಾಗ ಕರಗಿ ಹೋಗಿತ್ತು. ದಿನ ಬೆಳಗ್ಗೆ ಸಂಜೆ ಅರ್ಧ ಗಂಟೆ ಜರ್ನಿ, ಅದೆಷ್ಟು ಚೆಂದ ನಿನ್ನ ಜೊತೆ. ಆ ಮಾತು, ತುಂಟಾಟ, ಮೈ ಕೈ ತಾಕುವ ರೋಮಾಂಚನ! ಇದು ಒಂತರಾ ಗೊತ್ತಿದ್ದು ಗೊತ್ತಿಲ್ಲದಂತೆ ನಡೆವ ರೋಮ್ಯಾನ್ಸ್! ಇದನ್ನೂ ಓದಿ: ಒಪ್ತಿದ್ನೋ.. ಬಿಡ್ತಿದ್ನೋ.. ನೀನು ನನಗೆಲ್ಲಾ ಹೇಳ್ಬಿಡ್ಬೇಕಿತ್ತು..!

ನಾಮ್ಮಿಬ್ರ ಮರೆ ಮಾಚಿದ ಪ್ರಣಯ ಪ್ರಯಾಣ, ಆಗಾಗ ಸುತ್ತಾಟ ಇದೆಲ್ಲ ಇದ್ರೂ ಒಮ್ಮೆಯೂ ಫ್ರೆಂಡ್ ಶಿಪ್ ಅಂತ ಆಗಲಿ, ಲವ್ ಅಂತ ಆಗಲಿ ನಮ್ಮಿಬ್ರ ಮಧ್ಯೆ ಚರ್ಚೆಯೇ ಆಗ್ಲಿಲ್ಲ ನೋಡು. ಆ ತುಂಬಿ ತುಳುಕೋ ಬಸ್‌ಲ್ಲಿ ಯಾರೂ ನಮ್ಮನ್ನ ಇಷ್ಟೊಂದು ಕ್ಲೋಸ್ ಆಗಿ ಇದಾರೆ, ಏನಾದ್ರೂ ಲವ್ವಾ? ಅಂತ ಪ್ರಶ್ನೆನೂ ಮಾಡಿಲ್ಲ. ಆದ್ರೆ ನನಗ್ಯಾಕೋ ನಿನ್ನ ಜೊತೆ ಚೆಂದದ ಬದುಕು ಕಟ್ಕೋಬೇಕು ಅಂತ ಆಸೆ ಆಗ್ತಿದೆ. ಆಗಲೂ ನಾವಿಬ್ರೂ ಇಷ್ಟೇ ಚೆನ್ನಾಗಿ ಇರ್ಬೇಕು ಏನಂತಿಯಾ? ಇದನ್ನೂ ಓದಿ: ಎದೆಯ ರೇಡಿಯೋದಲ್ಲಿ ಅವಳ ಹಾಡು ಇನ್ನೂ ಮುಗಿದಿಲ್ಲ!
ನನಗೆ ನೀನು ಆಕಸ್ಮಿಕವಾಗಿ ಸಿಕ್ಕ ಅಪರೂಪದ ವ್ಯಕ್ತಿತ್ವ. ನನ್ನ ಎಲ್ಲಾ ವಿಚಾರ ನಿನಗೊಬ್ಬನಿಗೆ ಹೇಳಿದ್ದು. ಯಾಕಂದ್ರೆ ನಿನ್ನ ಹತ್ರ ಹೇಳೊದ್ರಿಂದ ಅದೇನೋ ಮನಸ್ಸಿಗೆ ಸಮಾಧಾನ. ಈಗಲೂ ಅಷ್ಟೇ ಏನೇ ಆದ್ರೂ ಮೊದಲು ನಿನ್ನ ಹತ್ರನೇ ಹೇಳ್ಬೇಕು ಅಂತನೇ ನಾನು ಕಾದು ಹೇಳ್ತಿನಿ. ನನ್ನ ಈ ಡ್ರೆಸ್, ಸರ, ಲಿಪ್‌ಸ್ಟಿಕ್ ಚೆನ್ನಾಗಿದಿಯಾ ಅಂತ ನಾನ್ ಕೇಳೋದು ನಿನ್ನೊಬ್ಬನ ಹತ್ರ ಮಾತ್ರ. ನನಗೆ ನಿನ್ನ ಬಿಟ್ರೆ ಬೇರೆ ಯಾರೂ ಸ್ಪೆಷಲ್ ಅಂತ ಇಲ್ಲ. ನನಗೆ ನೀನೇ ಎಲ್ಲಾ.. ಹೀಗೆ ಎಲ್ಲಿ ಬೇಕಾದ್ರೂ ಹೇಳಬಲ್ಲೆ. ಆ ಧೈರ್ಯ ನನಗಿದೆ.
ನೀನು ನನಗಾಗಿ ಬಸ್‌ಲ್ಲಿ ಸೀಟು ಹಿಡಿದು ಕಾಯೋ ಹಾಗೇ, ಈ ಹೃದಯಾನೂ ನಿನಗಾಗಿ ಕಾಯ್ದಿರಿಸಿದ್ದು ಅಂತ ಯಾಕೆ ಹೇಳ್ತಿಲ್ಲ? ಯಾವಾಗ ಈ ಮಾತು ಹೇಳ್ತೀಯಾ ಅಂತ ಕಾಯ್ತಾ ಇದಿನಿ. ತುಂಬಾ ಕಾಯಿಸ್ಬೇಡ..! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ ನಿನ್ನ ಮುದ್ದಿನ ಅಮ್ಮು

