Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಡ್ರೆಸ್ಸಿಂಗ್‌ ರೂಮ್‌ನಲ್ಲೇ ವೇಪಿಂಗ್‌ – ರಿಯಾನ್‌ ಪರಾಗ್‌ಗೆ ಪಂದ್ಯ ಶುಲ್ಕದ 25% ದಂಡ, 1 ಡೀಮೆರಿಟ್ ಪಾಯಿಂಟ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Sports | Cricket | ಡ್ರೆಸ್ಸಿಂಗ್‌ ರೂಮ್‌ನಲ್ಲೇ ವೇಪಿಂಗ್‌ – ರಿಯಾನ್‌ ಪರಾಗ್‌ಗೆ ಪಂದ್ಯ ಶುಲ್ಕದ 25% ದಂಡ, 1 ಡೀಮೆರಿಟ್ ಪಾಯಿಂಟ್

Cricket

ಡ್ರೆಸ್ಸಿಂಗ್‌ ರೂಮ್‌ನಲ್ಲೇ ವೇಪಿಂಗ್‌ – ರಿಯಾನ್‌ ಪರಾಗ್‌ಗೆ ಪಂದ್ಯ ಶುಲ್ಕದ 25% ದಂಡ, 1 ಡೀಮೆರಿಟ್ ಪಾಯಿಂಟ್

Public TV
Last updated: April 30, 2026 4:42 pm
Public TV
Share
3 Min Read
IPL 2026 Riyan Parag Caught Vaping In Rajasthan Royals Dressing Room As Fresh Controversy
SHARE

– ಇನ್ನೂ ಕಠಿಣ ಕ್ರಮಕ್ಕೆ ಬಿಸಿಸಿಐ ಚಿಂತನೆ

ಜೈಪುರ: ಡ್ರೆಸ್ಸಿಂಗ್ ರೂಮ್‌ನಲ್ಲಿ ಇ-ಸಿಗರೇಟ್ (Vaping) ಸೇವಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜಸ್ಥಾನ್ ರಾಯಲ್ಸ್ (RR) ತಂಡದ ನಾಯಕ ರಿಯಾನ್ ಪರಾಗ್ (Riyan Parag) ಅವರಿಗೆ ಬಿಸಿಸಿಐ ಭಾರೀ ದಂಡ ವಿಧಿಸಿದೆ.

ಏ.28 ರಂದು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಂಜಾಬ್ ಕಿಂಗ್ಸ್ (PBKS) ವಿರುದ್ಧ ನಡೆಯುತ್ತಿದ್ದ ಪಂದ್ಯದ ವೇಳೆ ರಿಯಾನ್‌ ಪರಾಗ್‌ ವೇಪಿಂಗ್‌ ಮಾಡಿದ್ದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಐಪಿಎಲ್‌ನ ನೀತಿ ಸಂಹಿತೆಯ ಲೆವೆಲ್-1 ಉಲ್ಲಂಘನೆಯಾಗಿತ್ತು. ಇದು ದೊಡ್ಡಮಟ್ಟದ ವಿವಾದಕ್ಕೂ ಕಾರಣವಾಗುತ್ತಿದ್ದಂತೆ ಬಿಸಿಸಿಐ ಕ್ರಮ ಕೈಗೊಂಡಿದೆ.

riyan parag

ರಿಯಾನ್‌ ಪರಾಗ್ ಅವರಿಗೆ ಅಂದಿನ ಪಂದ್ಯಶುಲ್ಕದ ಶೇ.25 ರಷ್ಟು ದಂಡ ವಿಧಿಸಿದೆ. 1 ಡೀಮೆರಿಟ್‌ ಪಾಯಿಂಟ್‌ ಕೂಡ ನೀಡಲಾಗಿದ್ದು, ಇನ್ನೂ ಕಠಿಣ ಕ್ರಮಕ್ಕೆ ಚಿಂತನೆ ನಡೆಸಿದೆ.

24 ವರ್ಷ ವಯಸ್ಸಿನ ರಿಯಾನ್‌ ಪರಾಗ್‌ ಕ್ರಿಕೆಟ್‌ ಆಟಕ್ಕೆ ಅಪಖ್ಯಾತಿ ತರುವ ನಡವಳಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಅವರು ಐಪಿಎಲ್‌ನ ನೀತಿ ಸಂಹಿತೆಯ ಆರ್ಟಿಕಲ್ 2.21 ಅನ್ನು ಉಲ್ಲಂಘಟನೆ ಮಾಡಿರುವುದು ಸ್ಪಷ್ಟವಾಗಿದೆ. ಅದಕ್ಕಾಗಿ ಇನ್ನೂ ಹೆಚ್ಚಿನ ಕ್ರಮ ಕೈಗೊಳ್ಳಲು ಬಿಸಿಸಿಐ ಎದುರುನೋಡುತ್ತಿದೆ ಎಂದು ಬಿಸಿಸಿಐ ಹೇಳಿದೆ. ಇದನ್ನೂ ಓದಿ: ಶಾಕಿಂಗ್‌! ಡ್ರೆಸ್ಸಿಂಗ್‌ ರೂಮ್‌ನಲ್ಲೇ ವೇಪಿಂಗ್‌ – ಜೈಲಿಗೆ ಹೋಗ್ತಾರಾ ಆರ್‌ಆರ್‌ ನಾಯಕ ರಿಯಾನ್‌ ಪರಾಗ್‌?

ಏನಾಗಿತ್ತು?
ಏ.28 ರಂದು ಪಂಜಾಬ್‌ ಕಿಂಗ್ಸ್‌ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ತಂಡ 223 ರನ್‌ಗಳ ಗುರಿಯನ್ನು ಬೆನ್ನಟ್ಟುತ್ತಿದ್ದಾಗ, ಪಂದ್ಯದ 16ನೇ ಓವರ್‌ನಲ್ಲಿ ರಿಯಾನ್ ಪರಾಗ್ ಅವರು ಡ್ರೆಸ್ಸಿಂಗ್ ರೂಮ್‌ನಲ್ಲಿ ವೇಪಿಂಗ್ ಮಾಡುತ್ತಿರುವುದು ನೇರ ಪ್ರಸಾರದ ವೇಳೆ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಬಿಸಿಸಿಐ ನಿಯಮಗಳ ಪ್ರಕಾರ, ಸ್ಟೇಡಿಯಂನ ಆವರಣದಲ್ಲಿ ಮತ್ತು ಡ್ರೆಸ್ಸಿಂಗ್ ರೂಮ್‌ಗಳಲ್ಲಿ ಧೂಮಪಾನ ಅಥವಾ ವೇಪಿಂಗ್ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

mobile phones are not allowed during matches in the Indian Premier League Rajasthan Royals were seen breaking the rule and using a mobile phone during the match

ಭಾರತದಲ್ಲಿ ‘ಎಲೆಕ್ಟ್ರಾನಿಕ್ ಸಿಗರೇಟ್ ನಿಷೇಧ ಕಾಯ್ದೆ (PECA), 2019’ ಅಡಿಯಲ್ಲಿ ಇ-ಸಿಗರೇಟ್‌ಗಳ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇ-ಸಿಗರೇಟ್ ಮೇಲಿನ ನಿಷೇಧವನ್ನು ಉಲ್ಲಂಘಿಸಿರುವುದರಿಂದ, ಅವರಿಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಸಾಧ್ಯತೆಯೂ ಇದೆ. ಇದನ್ನೂ ಓದಿ: ಫೋನ್‌ ಬಳಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ರೋಮಿ – RR ವ್ಯವಸ್ಥಾಪಕನಿಗೆ ಬಿಸಿಸಿಐ ನೋಟಿಸ್‌; ಕಾಡ್ತಿದೆಯಾ ಬ್ಯಾನ್‌ ಭೀತಿ?

ಫೋನ್‌ ಬಳಸಿ ಸಿಕ್ಕಿಬಿದ್ದಿದ್ದ ರೋಮಿ
ಕೆಲ ದಿನಗಳ ಹಿಂದಷ್ಟೇ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡದ ವಿರುದ್ಧ ಏಪ್ರಿಲ್‌ 10 ರಂದು ನಡೆದ ಪಂದ್ಯದ ವೇಳೆ ಆರ್‌ಆರ್‌ ಫ್ರಾಂಚೈಸಿ ವ್ಯವಸ್ಥಾಪಕ ರೋಮಿ ಭಿಂದರ್‌ ಡಗೌಟ್‌ನಲ್ಲಿ ಮೊಬೈಲ್‌ ಬಳಸಿ ಸಿಕ್ಕಿಬಿದ್ದಿದ್ದರು. ಇದೀಗ ಭಾರತದಲ್ಲಿ ಬಳಕೆಯಲ್ಲಿ ನಿಷೇಧವಿರುವ ಇ-ಸಿಗರೇಟ್‌ ಬಳಸಿ ಫ್ರಾಂಚೈಸಿ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ.

ಇ-ಸಿಗರೇಟ್‌ ಅಂದ್ರೆ ಏನು?
E Cigeretteಗಳನ್ನು ವೇಪ್ಸ್‌, ವೇಪ್‌ ಪೆನ್‌, ಹುಕ್ಕ ಪೆನ್‌ ಇ-ಸಿಗಾರ್‌, ಇ-ಪೈಪ್‌ ಎಂಬ ಹೆಸರುಗಳಿಂದ ಕರೆಯುತ್ತಾರೆ. ಈ ಸಾಧನಗಳು E-ದ್ರವವನ್ನು ಉಪಯೋಗ ಮಾಡಿಕೊಂಡು ಏರಸಾಲ್‌ಗಳನ್ನ ಉತ್ಪತ್ತಿಮಾಡುತ್ತವೆ. E-ದ್ರವದಲ್ಲಿ ಸಾಮಾನ್ಯವಾಗಿ ತಂಬಾಕಿನಿಂದ ಉತ್ಪತ್ತಿಯಾಗುವ ನಿಕೋಟಿನ್‌ ಅಂಶ, ಪ್ರೊಪಿಲೀನ್‌, ಗ್ಲೈಕಾಲ್‌, ಗ್ಲಿಸರೀನ್‌, ಪರಿಮಳ ಸೂಸುವಂತಹ ವಸ್ತುಗಳನ್ನು ಬಳಕೆ ಮಾಡಲಾಗುತ್ತದೆ.

e cigarettes B

ಭಾರತದಲ್ಲಿ ಇ-ಸಿಗರೇಟ್‌ ಬಳಕೆ ಹೇಗಿದೆ?
2019ರಲ್ಲೇ ಇ-ಸಿಗರೇಟ್‌ ಬಳಕೆ ಭಾರತದಲ್ಲಿ ಸಂಪೂರ್ಣ ನಿಷೇಧ ಹೇರಲಾಗಿದ್ದರೂ ಬಳಕೆಯಲ್ಲಿ ಗಮನಾರ್ಹ ಬೆಳವಣಿಗೆ ಕಂಡುಬಂದಿದೆ. ಆನ್‌ಲೈನ್‌ ಮಾರುಕಟ್ಟೆ, ಇತರ ಅಕ್ರಮ ಮಾರ್ಗಗಳ ಮೂಲಕ ಯುವ ಜನರು ಖರೀದಿಸಿ ಬಳಸುತ್ತಿದ್ದಾರೆ. 2022ರ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 18 ರಿಂದ 30 ವರ್ಷ ವಯಸ್ಸಿನ 23% ಶಿಕ್ಷಿತರು ಇ-ಸಿಗರೇಟ್‌ ಬಳಕೆ ಮಾಡ್ತಿದ್ದಾರೆ. ದೇಶದ ಶೇ.8 ರಷ್ಟು ಜನ ಮಾತ್ರ ದಿನನಿತ್ಯ ಇ-ಸಿಗರೇಟ್‌ ಬಳಕೆ ಮಾಡ್ತಿದ್ದಾರೆ. ಈ ಪ್ರಮಾಣ 2025ರಲ್ಲಿ ಬಹಳಷ್ಟು ಹೆಚ್ಚಾಗಿದೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ.

ವಿಶ್ವ ಆರೋಗ್ಯ ಸಂಸ್ಥೆಯ (WHO) ವರದಿ ಪ್ರಕಾರ, ವಿಶ್ವಾದ್ಯಂತ 13 ರಿಂದ 15 ವರ್ಷ ವಯಸ್ಸಿನ ಸುಮಾರು 15 ಲಕ್ಷ ಮಕ್ಕಳು ಇ-ಸಿಗರೇಟ್‌ ಬಳಸುತ್ತಿದ್ದಾರೆ. ಇದು ವಯಸ್ಕರಿಗಿಂತ 9% ಹೆಚ್ಚಾಗಿದೆ. ಒಟ್ಟಾರೆಯಾಗಿ 91 ಲಕ್ಷ ಪುರುಷರು, 56 ಲಕ್ಷ ಹುಡುಗಿಯರು ಇ-ಸಿಗರೇಟ್‌ ಸೇದುತ್ತಿದ್ದಾರೆ. ಅಮೆರಿಕದಲ್ಲಿ 40% ಜನರು ತಿಂಗಳಿಗೆ 20 ಅಥವಾ ಅದಕ್ಕಿಂತಲೂ ಹೆಚ್ಚಿನ ದಿನಗಳಲ್ಲಿ ಇ-ಸಿಗರೇಟ್‌ ಬಳಸುತ್ತಿದ್ದಾರೆ.

TAGGED:bcciIPLPunjab KingsRiyan ParagRRVapingಇ ಸಿರಗೇಟ್‌ಡ್ರೆಸ್ಸಿಂಗ್‌ ರೂಮ್‌ರಾಜಸ್ಥಾನ್ ರಾಯಲ್ಸ್ರಿಯಾನ್ ಪರಾಗ್ವೇಪಿಂಗ್‌
Share This Article
Facebook Whatsapp Whatsapp Telegram

Cinema news

Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post
Pooja Hegde Udupi
ಉಡುಪಿಯಲ್ಲಿ ನಾಗದೇವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟಿ ಪೂಜಾ ಹೆಗ್ಡೆ
Cinema Districts Karnataka Latest Top Stories Udupi

You Might Also Like

Siddaramaiah 1 7
Bengaluru City

ಬೌರಿಂಗ್‌ ಆಸ್ಪತ್ರೆ ಬಳಿ ಗೋಡೆ ಕುಸಿದು 7 ಮಂದಿ ಬಲಿ – ಸಂಬಂಧಪಟ್ಟ ಎಂಜಿನಿಯರ್‌ನ ಕೂಡಲೇ ಅಮಾನತು ಮಾಡಿ: ಸಿಎಂ ಆದೇಶ

Public TV
By Public TV
57 seconds ago
MC SUDHAKAR
Bengaluru City

ಹಿಜಬ್‌, ಜನಿವಾರದಿಂದ ಸಮಸ್ಯೆಗೊಳಗಾದ ಪರೀಕ್ಷಾರ್ಥಿಗಳಿಗೆ ಸಿಟಿಇ ಮರುಪರೀಕ್ಷೆ: ಎಂ.ಸಿ ಸುಧಾಕರ್‌

Public TV
By Public TV
26 minutes ago
SUPREME COURT
Latest

ಅವಳ ನೋವು, ಅವಮಾನ ಊಹಿಸಿ – ಅತ್ಯಾಚಾರ ಕೇಸಲ್ಲಿ 20 ವಾರ ಮೀರಿದ ಗರ್ಭಪಾತಕ್ಕೆ ಅವಕಾಶ ನೀಡಿ: ಕೇಂದ್ರಕ್ಕೆ ಸುಪ್ರೀಂ ತರಾಟೆ

Public TV
By Public TV
30 minutes ago
Google Gemini Misused in AI Deepfake Loan Scam Ahmedabad Police Expose Aadhaar OTP Bypass four arrested Cyber Crime
Crime

ಒಟಿಪಿ ಬರಲ್ಲ ಆದ್ರೂ ಬ್ಯಾಂಕ್‌ ಖಾತೆ ಓಪನ್‌| AI, ಡೀಪ್‌ಫೇಕ್‌ ಬಳಸಿ ಆಧಾರ್‌ ಬೈಪಾಸ್‌ – ಕೊನೆಗೂ ಹೈಟೆಕ್‌ ಕಳ್ಳರು ಅರೆಸ್ಟ್‌

Public TV
By Public TV
46 minutes ago
grapes
Chikkaballapur

ದ್ರಾಕ್ಷಿಗೆ ಬಂಪರ್ ಬೆಲೆ – ರೈತರ ಮೊಗದಲ್ಲಿ ನಗು, ಕೈಗೆ ಕಾಂಚಾಣ ತಂದ ಬೆಳೆ

Public TV
By Public TV
1 hour ago
ipac vinesh chandel
Court

ಪಶ್ಚಿಮ ಬಂಗಾಳ ಕಲ್ಲಿದ್ದಲು ಹಗರಣ| I-PAC ನಿರ್ದೇಶಕನಿಗೆ ಜಾಮೀನು ಮಂಜೂರು

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?