ನವದೆಹಲಿ: ಈ ಬಾರಿ ಪಶ್ಚಿಮ ಬಂಗಾಳದಲ್ಲಿ (West Bengal) ಬಿಜೆಪಿ (BJP) ಅಧಿಕಾರಕ್ಕೆ ಏರಲಿದೆ ಎಂದು ರಿಪಬ್ಲಿಕ್ ಟಿವಿ ಚುನಾವಣೋತ್ತರ ಸಮೀಕ್ಷೆ ತಿಳಿಸಿದೆ.
ಬಿಜೆಪಿ 150-175, ಟಿಎಂಸಿ(TMC) 118-138, ಕಾಂಗ್ರೆಸ್ 02-06 ಸ್ಥಾನ ಗಳಿಸಬಹುದು. ಮತಗಳಿಕೆಯಲ್ಲಿ ಬಿಜೆಪಿ 42%, ಟಿಎಂಸಿ 44%, ಕಾಂಗ್ರೆಸ್ 14% ಮತ ಪಡೆಯಲಿದೆ ಎಂದು ಸಮೀಕ್ಷೆ ತಿಳಿಸಿದೆ.
2021 ರ ಚುನಾವಣೆಯಲ್ಲಿ ಒಟ್ಟು 294 ಸ್ಥಾನಗಳ ಪೈಕಿ ಟಿಎಂಸಿ 215 ಗೆದ್ದು ಪ್ರಚಂಡ ಬಹುಮತ ಸಾಧಿಸಿತ್ತು. ಬಿಜೆಪಿ 77 ಸ್ಥಾನಗಳನ್ನು ಗೆಲ್ಲುವ ಮೂಲಕ ವಿರೋಧ ಪಕ್ಷದ ಸ್ಥಾನವನ್ನು ಪಡೆದುಕೊಂಡಿತ್ತು. ರಾಷ್ಟ್ರೀಯ ಸೆಕ್ಯುಲರ್ ಮಜ್ಲಿಸ್ ಪಾರ್ಟಿ (RSMP) 1 ಸ್ಥಾನ ಮತ್ತು ಪಕ್ಷೇತರ ಅಭ್ಯರ್ಥಿ 1 ಸ್ಥಾನ ಗೆದ್ದಿದ್ದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಯಾವುದೇ ಸ್ಥಾನವನ್ನು ಗೆದ್ದಿರಲಿಲ್ಲ.
ಬಂಗಾಳದ ಬಿಗ್ ಬಾಸ್ ಯಾರು?
ಮ್ಯಾಟ್ರಿಜ್ :
ಬಿಜೆಪಿ 146-161
ಟಿಎಂಸಿ 125-140
ಇತರೆ 6-10
ಪಿಮಾರ್ಕ್ :
ಬಿಜೆಪಿ 150-175
ಟಿಎಂಸಿ 116
ಕಾಂಗ್ರೆಸ್ 2-6
ಇತರೆ 00
ಸ್ಮಾರ್ಟ್ ಪೋಲ್:
ಬಿಜೆಪಿ 154
ಟಿಎಂಸಿ 136
ಕಾಂಗ್ 1
ಇತರೆ 3
ಪೀಪಲ್ಸ್ ಪಲ್ಸ್:
ಬಿಜೆಪಿ 95-110
ಟಿಎಂಸಿ 177 – 187
ಕಾಂಗ್ – 1-3
ಇತರೆ 1

