ರಾಹುಕಾಲ – 12.21 ರಿಂದ 1:55
ಗುಳಿಕಕಾಲ – 11.47 ರಿಂದ 12:21
ಯಮಗಂಡಕಾಲ – 7:39 ರಿಂದ 9:13
ವಾರ : ಬುಧವಾರ, ತಿಥಿ : ತ್ರಯೋದಶಿ, ನಕ್ಷತ್ರ : ಹಸ್ತ,
ಶ್ರೀ ಪರಭಾವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲ ಪಕ್ಷ
ಮೇಷ: ಈ ದಿನ ಮಾನಸಿಕ ಒತ್ತಡ, ಪಾಲುದಾರಿಕೆಯ ಮಾತುಕತೆ, ಧನ ಲಾಭ, ಸರ್ಕಾರಿ ಅಧಿಕಾರಿಗಳಿಗೆ ಒತ್ತಡ.
ವೃಷಭ: ಮಧ್ಯಸ್ಥಿಕೆಯಿಂದ ಉತ್ತಮ ಲಾಭ, ವೃದ್ಧರಿಗೆ ತ್ರಾಸು, ನೌಕರಿಯಲ್ಲಿ ಕಿರಿಕಿರಿ, ಮಕ್ಕಳ ಬಗ್ಗೆ ಕಾಳಜಿ, ಶತ್ರು ನಾಶ.
ಮಿಥುನ: ಈ ದಿನ ವಿಪರೀತ ವ್ಯಸನಗಳು, ಆದಾಯ ಮೂಲ ಹೆಚ್ಚಳ, ಗುರಿ ಸಾಧಿಸಲು ಶ್ರಮ, ಮುಂಗೋಪ ದ್ವೇಷಕ್ಕೆ ಕಾರಣ.
ಕಟಕ: ಈ ದಿನ ಚಂಚಲ ಮನಸ್ಸು, ನೀಚ ಜನರಿಂದ ತೊಂದರೆ, ಮನಸ್ಸಿನಲ್ಲಿ ಆತಂಕ, ಪಿತ್ರಾರ್ಜಿತ ಆಸ್ತಿ ವಾದ ವಿವಾದ.
ಸಿಂಹ: ಪರರಿಗೆ ಸಹಾನುಭೂತಿ ತೋರುವಿರಿ, ಆರೋಗ್ಯದಲ್ಲಿ ವ್ಯತ್ಯಾಸ, ಸ್ವಯಂಕೃತ ಅಪರಾಧ, ಮಹಿಳೆಯರಿಗೆ ಶುಭ.
ಕನ್ಯಾ: ಈ ದಿನ ಯಾರಿಗೂ ಹೆದರುವುದಿಲ್ಲ, ಮೋಸ ವಂಚನೆಗಳ ಕಡೆ ಗಮನವಿರಲಿ, ಹಿಡಿದ ಕೆಲಸ ಸಾಧಿಸುವಿರಿ, ದಾಂಪತ್ಯದಲ್ಲಿ ಪ್ರೀತಿ.
ತುಲಾ: ಸಂದರ್ಭಕ್ಕೆ ತಕ್ಕಂತೆ ಮಾತನಾಡುವಿರಿ, ಕೆಟ್ಟ ಸ್ತ್ರೀಯಿಂದ ತೊಂದರೆ, ಚಂಚಲ ಮನಸ್ಸು, ಇತರರನ್ನು ನಿಂದಿಸುವಿರಿ.
ವೃಶ್ಚಿಕ: ಈ ದಿನ ಮಾತಿನಿಂದ ಲಾಭ, ಧೈರ್ಯದಿಂದ ಎದುರಿಸುವಿರಿ, ಕೋಪ ಜಾಸ್ತಿ, ವಿಪರೀತ ಖರ್ಚು ಮಾಡುವಿರಿ.
ಧನಸ್ಸು: ನಿಮ್ಮ ಗುಣ ಎಲ್ಲರನ್ನು ಆಕರ್ಷಿಸುತ್ತದೆ, ದಾಂಪತ್ಯದಲ್ಲಿ ಪ್ರೀತಿ, ದುಃಖದಲ್ಲಿರುವವರಿಗೆ ಸಾಂತ್ವನ ಹೇಳುವಿರಿ.
ಮಕರ: ಉದ್ಯೋಗದಲ್ಲಿ ಬದಲಾವಣೆ, ಕಠಿಣ ಸಮಸ್ಯೆ, ಚಂಚಲ ಬುದ್ಧಿ, ಯಾರಿಗೂ ಹೆದರುವುದಿಲ್ಲ.
ಕುಂಭ: ಈ ದಿನ ಮಾನಸಿಕ ಚಿಂತೆ, ಆಳವಾಗಿ ಯೋಚಿಸಿ ದುಃಖ ಪಡುವಿರಿ, ಕೋಪ ಜಾಸ್ತಿ, ಸಹನೆ ಒಳ್ಳೆಯದು, ಶತ್ರು ಭಾದೆ.
ಮೀನ: ಈ ದಿನ ವಿರೋಧಿಗಳಿಂದ ಕುತಂತ್ರ, ಮಕ್ಕಳ ಅಗತ್ಯಕ್ಕೆ ಖರ್ಚು ಜಾಸ್ತಿ, ಸಲ್ಲದ ಅಪವಾದ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

