Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್‌ ರದ್ದು- ಆರ್‌ಬಿಐ ಕಠಿಣ ಕ್ರಮ ಕೈಗೊಂಡಿದ್ದು ಯಾಕೆ?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್‌ ರದ್ದು- ಆರ್‌ಬಿಐ ಕಠಿಣ ಕ್ರಮ ಕೈಗೊಂಡಿದ್ದು ಯಾಕೆ?

Latest

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲೈಸೆನ್ಸ್‌ ರದ್ದು- ಆರ್‌ಬಿಐ ಕಠಿಣ ಕ್ರಮ ಕೈಗೊಂಡಿದ್ದು ಯಾಕೆ?

Public TV
Last updated: April 25, 2026 8:52 am
Public TV
Share
3 Min Read
paytm payments bank
SHARE

ನವದೆಹಲಿ: ನಿಯಮಗಳನ್ನು ನಿರಂತರ ಉಲ್ಲಂಘನೆ ಮಾಡಿದ್ದಕ್ಕೆ ಏಪ್ರಿಲ್ 24 ರಿಂದ ಜಾರಿಗೆ ಬರುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ಗೆ (PPBL) ನೀಡಿದ್ದ ಬ್ಯಾಂಕಿಂಗ್ ಪರವಾನಗಿಯನ್ನು (Licence) ಭಾರತೀಯ ರಿಸರ್ವ್ ಬ್ಯಾಂಕ್ (RBI) ರದ್ದುಗೊಳಿಸಿದೆ.

ಬ್ಯಾಂಕಿನ ವ್ಯವಹಾರಗಳು ಹಾನಿಕಾರಕ ರೀತಿಯಲ್ಲಿ ನಡೆದಿದ್ದು, ಇದು ಠೇವಣಿದಾರರು ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಬ್ಯಾಂಕ್ ಪದೇ ಪದೇ ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ವಿಫಲವಾಗಿದೆ ಎಂದು ಹೇಳಿ ಆರ್‌ಬಿಐ ಬ್ಯಾಂಕಿನ ಪರವಾನಗಿಯನ್ನು ಅಧಿಕೃತವಾಗಿ ರದ್ದುಗೊಳಿಸಿದೆ.

ಈ ಕ್ರಮವು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಮಾತ್ರ ಅನ್ವಯಿಸುತ್ತದೆ. ಪೇಟಿಎಂ ಆಪ್ (Paytm App), ಪೇಟಿಎಂ ಯುಪಿಐ (UPI), ಮತ್ತು ಇತರ ಮರ್ಚೆಂಟ್ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ಏನಿದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಆರ್‌ಬಿಐ ಅಡಿಯಲ್ಲಿ ಬರುವ ವಿಶೇಷ ಬ್ಯಾಂಕ್‌ ಆಗಿತ್ತು.ಇದು ಸಾಮಾನ್ಯ ಬ್ಯಾಂಕುಗಳಿಗಿಂತ ಸ್ವಲ್ಪ ಭಿನ್ನವಾಗಿ ಕಾರ್ಯನಿರ್ವಹಿಸುತ್ತಿತ್ತು.ಇವು ಗ್ರಾಹಕರಿಂದ ಠೇವಣಿ (Deposit) ಸ್ವೀಕರಿಸಲು ಅನುಮತಿ ಇತ್ತು. ಆದರೆ ಸಾಲ (Loan) ನೀಡಲು ಅಥವಾ ಕ್ರೆಡಿಟ್ ಕಾರ್ಡ್ ನೀಡಲು ಇವುಗಳಿಗೆ ಅನುಮತಿ ಇರುವುದಿಲ್ಲ.

ಈ ಬ್ಯಾಂಕ್ ಖಾತೆಯಲ್ಲಿ ಒಬ್ಬ ಗ್ರಾಹಕರು ಗರಿಷ್ಠ 2 ಲಕ್ಷದವರೆಗೆ ಮಾತ್ರ ಹಣವನ್ನು ಇಟ್ಟುಕೊಳ್ಳಲು ಅವಕಾಶವಿತ್ತು. ಇದು ಉಳಿತಾಯ ಖಾತೆ (Savings Account), ಡೆಬಿಟ್ ಕಾರ್ಡ್, ಆನ್‌ಲೈನ್ ಬ್ಯಾಂಕಿಂಗ್ ಮತ್ತು ವ್ಯಾಲೆಟ್ ಸೇವೆಗಳನ್ನು ನೀಡುತ್ತಿತ್ತು. ಇದಕ್ಕೆ ಸಾಮಾನ್ಯ ಬ್ಯಾಂಕುಗಳಂತೆ ಹೆಚ್ಚಿನ ಭೌತಿಕ ಶಾಖೆಗಳಿರಲಿಲ್ಲ. ಮೊಬೈಲ್ ಆಪ್ ಮೂಲಕವೇ ಎಲ್ಲ ವ್ಯವಹಾರಗಳು ನಡೆಯುತ್ತಿದ್ದವು.

RBI

ಲೈಸೆನ್ಸ್‌ ರದ್ದಿಗೆ ಕಾರಣ ಏನು?
ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣಕಾಸು ವಹಿವಾಟು (Money Laundering) ಮತ್ತು ಅದಕ್ಕೆ ಸಂಬಂಧಿಸಿದ ಲೋಪಗಳ ಬಗ್ಗೆ ಆರ್‌ಬಿಐ ಸಾಕಷ್ಟು ಬಾರಿ ಎಚ್ಚರಿಕೆ ನೀಡಿತ್ತು. ಗ್ರಾಹಕರ ಪರಿಶೀಲನೆ (KYC) ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿದ್ದವು. ಉದಾಹರಣೆಗೆ ಒಂದು ಪ್ಯಾನ್ ಕಾರ್ಡ್ ಅನ್ನು ಸಾವಿರಾರು ಖಾತೆಗಳಿಗೆ ಲಿಂಕ್ ಮಾಡಿದ್ದ ವಿಚಾರ ಬೆಳಕಿಗೆ ಬಂದಿತ್ತು. ಇದು ಹಣದ ಮೂಲವನ್ನು ಪತ್ತೆ ಹಚ್ಚಲು ಕಷ್ಟವಾಗುವಂತೆ ಮಾಡಿತ್ತು.

ಲಕ್ಷಾಂತರ ಖಾತೆಗಳಲ್ಲಿ ಸರಿಯಾದ ಗ್ರಾಹಕರ ಮಾಹಿತಿ ಇರಲಿಲ್ಲ. ಬಹಳ ಮುಖ್ಯವಾಗಿ ಪೇಮೆಂಟ್ ಬ್ಯಾಂಕ್‌ಗಳಿಗೆ ನಿಗದಿಪಡಿಸಿದ ವಹಿವಾಟಿನ ಮಿತಿಯನ್ನು ಮೀರಿ ಕೋಟ್ಯಂತರ ರೂಪಾಯಿಗಳ ವಹಿವಾಟು ನಡೆಯುತ್ತಿದ್ದುದ್ದು ಆರ್‌ಬಿಐನ ಸಂಶಯಕ್ಕೆ ಕಾರಣವಾಗಿತ್ತು. ಇದನ್ನೂ ಓದಿ: ಹೊಸ ಗ್ರಾಹಕರನ್ನು ಸೇರಿಸದಂತೆ Paytm ಬ್ಯಾಂಕಿಗೆ ಆರ್‌ಬಿಐ ಸೂಚನೆ

ಯಾವುದೇ ಹಣವಿಲ್ಲದ (Zero Balance) ಲಕ್ಷಾಂತರ ಖಾತೆಗಳನ್ನು ವ್ಯವಸ್ಥಿತವಾಗಿ ಹಣ ವರ್ಗಾವಣೆಗೆ ಬಳಸಿಕೊಳ್ಳಲಾಗುತ್ತಿತ್ತು ಹೆಚ್ಚಿನ ಸಂಖ್ಯೆಯ Dormant ಖಾತೆಗಳನ್ನು ಅಕ್ರಮ ಹಣ ವರ್ಗಾವಣೆಯ ಮಧ್ಯವರ್ತಿ ಖಾತೆಗಳಾಗಿ ಬಳಸುತ್ತಿದ್ದ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಆನ್‌ಲೈನ್ ಜೂಜಿನಂತಹ ಅಕ್ರಮ ಕೃತ್ಯಗಳಲ್ಲಿ ತೊಡಗಿದ್ದ ಸಂಸ್ಥೆಗಳು ಈ ಬ್ಯಾಂಕ್ ಖಾತೆಗಳನ್ನು ಹಣ ವರ್ಗಾವಣೆಗೆ ಬಳಸಿಕೊಂಡಿದ್ದವು. ಈ ಕಾರಣಕ್ಕೆ ಫೈನಾನ್ಷಿಯಲ್ ಇಂಟೆಲಿಜೆನ್ಸ್ ಯೂನಿಟ್ ಬ್ಯಾಂಕಿಗೆ ಈ ಹಿಂದೆ 5.49 ಕೋಟಿ ರೂ. ದಂಡ ವಿಧಿಸಿತ್ತು.

ಬ್ಯಾಂಕಿನ ದತ್ತಾಂಶಗಳು ಮತ್ತು ಸರ್ವರ್‌ಗಳು ವಿದೇಶಿ ಮೂಲದ ಸಂಸ್ಥೆಗಳೊಂದಿಗೆ ಅಥವಾ ಪೇಟಿಎಂನ ಇತರ ಅಂಗಸಂಸ್ಥೆಗಳೊಂದಿಗೆ ಸರಿಯಾದ ಪರವಾನಗಿ ಇಲ್ಲದೆ ಹಂಚಿಕೆಯಾಗುತ್ತಿವೆ ಎಂಬ ಆತಂಕವಿತ್ತು. ಬಹಳ ಮುಖ್ಯವಾಗಿ ಚೀನಾ ಮೂಲದ ಕಂಪನಿಗಳಿಗೆ (ಆಂಟ್ ಗ್ರೂಪ್‌ನಂತಹ ಹೂಡಿಕೆದಾರರು) ಸೋರಿಕೆಯಾಗುತ್ತಿರುವ ಆತಂಕವಿತ್ತು. ಭಾರತೀಯ ಗ್ರಾಹಕರ ಆರ್ಥಿಕ ಮಾಹಿತಿ ವಿದೇಶಕ್ಕೆ ಹೋಗುವುದು ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ಆರ್‌ಬಿಐ ಪರಿಗಣಿಸಿತ್ತು

ಹಣ ವರ್ಗಾವಣೆಯ ಮೇಲೆ ನಿಗಾ ಇಡುವ ವ್ಯವಸ್ಥೆ (Monitoring system) ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಇದರಿಂದ ಸಂಶಯಾಸ್ಪದ ವಹಿವಾಟುಗಳನ್ನು ಗುರುತಿಸಲು ಬ್ಯಾಂಕ್ ವಿಫಲವಾಗಿತ್ತು.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ತನ್ನ ಮಾತೃ ಸಂಸ್ಥೆಯಾದ One97 Communications (OCL) ನೊಂದಿಗೆ ಅತಿಯಾದ ಅವಲಂಬನೆ ಹೊಂದಿತ್ತು. ಬ್ಯಾಂಕಿಂಗ್ ನಿಯಮಗಳ ಪ್ರಕಾರ ಬ್ಯಾಂಕ್ ಒಂದು ಸ್ವತಂತ್ರ ಘಟಕವಾಗಿ ಕಾರ್ಯನಿರ್ವಹಿಸಬೇಕು. ಆದರೆ ಪೇಟಿಎಂನಲ್ಲಿ ಹಣಕಾಸಿನ ನಿರ್ಧಾರಗಳು ಮತ್ತು ದತ್ತಾಂಶಗಳು ಈ ಎರಡು ಸಂಸ್ಥೆಗಳ ನಡುವೆ ಸರಿಯಾದ ಅಂತರವಿಲ್ಲದೆ ಹಂಚಿಕೆಯಾಗುತ್ತಿದ್ದವು.

ಆರ್‌ಬಿಐ ಈ ಬ್ಯಾಂಕಿನ ಮೇಲೆ ಕಣ್ಣಿಟ್ಟಿದ್ದು, ನಿಯಮಗಳನ್ನು ಸರಿಪಡಿಸಿಕೊಳ್ಳಲು ಹಲವು ಅವಕಾಶಗಳನ್ನು ನೀಡಿತ್ತು. ಆದರೆ ಬ್ಯಾಂಕ್ ಈ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ಪದೇ ಪದೇ ವಿಫಲವಾಗಿತ್ತು. ಆರ್‌ಬಿಐ ಕೇಳಿದಾಗಲೆಲ್ಲಾ ಬ್ಯಾಂಕ್ ಎಲ್ಲವೂ ಸರಿಯಿದೆ ಎಂದು ವರದಿ ನೀಡುತ್ತಿತ್ತು. ಆದರೆ ಆರ್‌ಬಿಐ ನಡೆಸಿದ ಆಡಿಟಿಂಗ್‌ನಲ್ಲಿ ಬ್ಯಾಂಕ್ ನೀಡಿದ ವರದಿಗಳು ಸುಳ್ಳು ಎನ್ನುವುದು ಸಾಬೀತಾಗಿತ್ತು.

ಬ್ಯಾಂಕಿನ ಮಾಹಿತಿ ತಂತ್ರಜ್ಞಾನ (IT) ವ್ಯವಸ್ಥೆಯಲ್ಲಿ ಲೋಪಗಳಿದ್ದು ಆನ್‌ಲೈನ್ ವಂಚನೆಗಳನ್ನು ತಡೆಯುವಲ್ಲಿ ವಿಫಲವಾಗಿತ್ತು. ಸೈಬರ್ ಭದ್ರತೆಯ ಕೊರತೆಯಿಂದಾಗಿ ಹಣಕಾಸಿನ ಅಪಾಯಗಳು ಹೆಚ್ಚಿದ್ದವು.

2018 ರಿಂದಲೂ ಆರ್‌ಬಿಐ ಹಲವು ಬಾರಿ ಬ್ಯಾಂಕಿಗೆ ದಂಡ ವಿಧಿಸಿತ್ತು ಮತ್ತು ಸುಧಾರಿಸಿಕೊಳ್ಳಲು ಕಾಲಾವಕಾಶ ನೀಡಿತ್ತು. ಆದರೂ ಬ್ಯಾಂಕ್ ತನ್ನ ಕಾರ್ಯವೈಖರಿಯಲ್ಲಿ ಯಾವುದೇ ಗಂಭೀರ ಬದಲಾವಣೆ ಮಾಡಿಕೊಂಡಿರಲಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಬ್ಯಾಂಕ್ ಮೂಲಕ ನಡೆಯುವ ಹಣಕಾಸು ವ್ಯವಹಾರಗಳು ದೇಶದ ಆರ್ಥಿಕ ಭದ್ರತೆಗೆ ಮತ್ತು ಠೇವಣಿದಾರರಿಗೆ ಅಪಾಯಕಾರಿ ಎಂದು ಪರಿಗಣಿಸಿ ಈಗ ಕಠಿಣ ಕ್ರಮ ಕೈಗೊಂಡಿದೆ.‌

TAGGED:indiapaytmPaytm Bankrbiಆರ್‍ಬಿಐಪೇಟಿಎಂಪೇಟಿಎಂ ಬ್ಯಾಂಕ್‌ಭಾರತ
Share This Article
Facebook Whatsapp Whatsapp Telegram

Cinema news

ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories
Akshay Kumar 1
ನಟ ಅಕ್ಷಯ್ ಕುಮಾರ್ ಅಪ್ರಾಪ್ತ ಪುತ್ರಿಯ ಬೆತ್ತಲೆ ಫೋಟೋಗೆ ಬೇಡಿಕೆಯಿಟ್ಟಿದ್ದ ವ್ಯಕ್ತಿ ಅರೆಸ್ಟ್
Bollywood Cinema Crime Latest Top Stories
ranveer singh 2
ದೈವಕ್ಕೆ ಅಪಮಾನ – ಇನ್ಮುಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲ್ಲ: ಕ್ಷಮೆಯಾಚಿಸಿದ ರಣವೀರ್ ಸಿಂಗ್
Cinema Court Latest South cinema Top Stories

You Might Also Like

Chinnaswamy Stadium RCB
Bengaluru City

ಆರ್‌ಸಿಬಿ ಪಂದ್ಯದಂದೇ 240 ಸಿಸಿಟಿವಿ ಕೇಬಲ್‌ ಕಟ್‌ – ಚಿನ್ನಸ್ವಾಮಿಯಲ್ಲಿ ಭಾರೀ ಭದ್ರತಾ ಲೋಪ!

Public TV
By Public TV
31 minutes ago
kunal ghosh TMC
Latest

ಬಿಜೆಪಿಗಾಗಿ ರಾಹುಲ್‌ ಗಾಂಧಿ ಕೆಲಸ, ಪಪ್ಪು ಅನ್ನೋದ್ರಲ್ಲಿ ತಪ್ಪಿಲ್ಲ: ಕುನಾಲ್ ಘೋಷ್ ಕಿಡಿ

Public TV
By Public TV
2 hours ago
kea
Bengaluru City

2026ರ ಸಿಇಟಿ ಪರೀಕ್ಷೆ ಕೀ ಉತ್ತರ ಪ್ರಕಟಿಸಿದ ಕೆಇಎ

Public TV
By Public TV
2 hours ago
Reading newspapers is now mandatory in all schools in Karnataka Department of Public Education order
Bagalkot

ರಾಜ್ಯದ ಎಲ್ಲಾ ಶಾಲೆಗಳಲ್ಲಿ ನ್ಯೂಸ್ ಪೇಪರ್ ಓದುವುದು ಇನ್ನು ಕಡ್ಡಾಯ!

Public TV
By Public TV
2 hours ago
Mangaluru BC Road Woman Gave Birth to Child In Train
Dakshina Kannada

ರೈಲಿನಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ – ವೈದ್ಯರಿಲ್ಲದೆ ಮಹಿಳೆಯರಿಂದಲೇ ಹೆರಿಗೆ

Public TV
By Public TV
3 hours ago
Hormuz First Nukes Later Iran Offers US a Bold Deal to Reopen Global Oil Route Strait of Hormuz
Latest

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್ ರೆಡಿ: ಅಮೆರಿಕ ಮುಂದೆ ಹೊಸ ‘ಶಾಂತಿ’ ಸಂಧಾನ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?