Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ ಪಡೆದ ಕಂದನ ಮುದ್ದಾಡಿದ ಅಲಿನ್ ಪೋಷಕರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ ಪಡೆದ ಕಂದನ ಮುದ್ದಾಡಿದ ಅಲಿನ್ ಪೋಷಕರು

Latest

ಆಗಷ್ಟೇ ಕಣ್ಬಿಟ್ಟಿದ್ದ ಮಗಳ ಅಂಗಾಂಗ ದಾನದಿಂದ ಮರುಜೀವ ಪಡೆದ ಕಂದನ ಮುದ್ದಾಡಿದ ಅಲಿನ್ ಪೋಷಕರು

Public TV
Last updated: April 24, 2026 3:46 pm
Public TV
Share
2 Min Read
Kerala Aalin Sherin
SHARE

ತಿರುವನಂತಪುರಂ: ಅಂದು ಕುಟುಂಬಸ್ಥರೊಂದಿಗೆ ಹೊರಟಿದ್ದ ಆ ಕಂದಮ್ಮನನ್ನು ಯಮರಾಜ ತಂದೆ, ತಾಯಿ ನೋವನ್ನೂ ಅರಿಯದೇ ತನ್ನೂರಿಗೆ ಕರೆದೊಯ್ದ. ಆದರೆ ಪೋಷಕರು ತಮಗಾದ ನೋವು ಬೇರೆಯವರಿಗೆ ಆಗದಿರಲೆಂದು ಮಗಳ ಅಂಗಾಂಗವನ್ನು ದಾನ ಮಾಡಿ, ಇಂದು ಮರುಜೀವ ಪಡೆದ ಮಗುವನ್ನು ಎತ್ತಿ ಮುದ್ದಾಡಿದ್ದಾರೆ.

ರಸ್ತೆ ಅಪಘಾತದಲ್ಲಿ ಮಗಳು ಅಲಿನ್‌ಳನ್ನು (Aalin Sherin) ಕಳೆದುಕೊಂಡಿದ್ದ ಕೇರಳ (Kerala) ದಂಪತಿ ಅರುಣ್ ಹಾಗೂ ಶೆರಿನ್ ಬೇರೆ ಮಕ್ಕಳ ಜೀವ ಉಳಿಸುವ ಸಲುವಾಗಿ ಅಂಗಾಂಗ ದಾನ ಮಾಡುವ ಮಹತ್ತರ ನಿರ್ಧಾರ ತೆಗೆದುಕೊಂಡಿದ್ದರು. 9 ತಿಂಗಳ ಮಗುವಿನಿಂದ ಯಕೃತ್ತು ದಾನ ಪಡೆದು ಮರುಜೀವ ಪಡೆದ ಮಗು ಇಂದು ಅಲಿನ್ ಪೋಷಕರ ಮಡಿಲಲ್ಲಿ ಆಟವಾಡಿದೆ. ಇದನ್ನೂ ಓದಿ: ಜಗತ್ತು ನೋಡದ ಮಗುವಿನಿಂದ 5 ಮಕ್ಕಳಿಗೆ ಜೀವದಾನ; ಕೇರಳದಲ್ಲಿ ಅತೀ ಕಿರಿಯ ಅಂಗಾಂಗ ದಾನಿ

Kerala Aalin Sherin 2

ಅಂಗಾಂಗ ದಾನ ಮಾಡಿದ ಬಳಿಕ ಮೊದಲ ಬಾರಿಗೆ ದಾನ ಪಡೆದ ಮಗುವನ್ನು ಶೆರಿನ್ ದಂಪತಿ ಭೇಟಿ ಮಾಡಿದ್ದು, ಅಲಿನ್ ತಾಯಿ ಹಾಗೂ ಮಗುವಿನ ಭೇಟಿಯ ಭಾವನಾತ್ಮಕ ಕ್ಷಣಕ್ಕೆ ಕೇರಳದ ತಿರುವಂತನಂತಪುರಂನ ಕಿಮ್ಸ್‌ ಹೆಲ್ತ್‌ ಆಸ್ಪತ್ರೆಯಲ್ಲಿ ಸಾಕ್ಷಿಯಾಗಿದೆ. ಇತ್ತ ಅಂಗಾಂಗ ದಾನ ಮಾಡಿ ಜೀವ ಉಳಿಸಿದ್ದಕ್ಕಾಗಿ ತಮ್ಮ ಮಗುವನ್ನು ಅಲಿನ್ ತಾಯಿಯ ಮಡಿಲಲ್ಲಿಟ್ಟು ಹೆತ್ತವರು ಕೃತಜ್ಞತೆ ಸಲ್ಲಿಸಿದ್ದಾರೆ. ತಮ್ಮ ಮಗುವನ್ನೇ ಕಣ್ಣಾರೆ ಕಂಡಂತೆ ಶೆರಿನ್ ದಂಪತಿ ಕಣ್ಣೀರಿಟ್ಟಿದ್ದಾರೆ.

Kerala Aalin Sherin 3

ಸಾಮಾನ್ಯವಾಗಿ ಅಂಗಾಂಗ ದಾನ ಪಡೆದುಕೊಳ್ಳುವವರ ವಿವರವನ್ನು ಅಂಗಾಂಗ ದಾನ ಮಾಡಿರುವ ಕುಟುಂಬಕ್ಕೆ ಬಹಿರಂಗಪಡಿಸುವುದಿಲ್ಲ. ಆದರೆ ಮಾನವೀಯ ದೃಷ್ಟಿಯಿಂದ ಅಲಿನ್ ಹೆತ್ತವರ ಬಹುದೊಡ್ಡ ತ್ಯಾಗಕ್ಕೆ ಪ್ರತಿಯಾಗಿ ಅವರ ನೋವು ಕಡಿಮೆ ಮಾಡಲು ವೈದ್ಯರು ಹಾಗೂ ಕುಟುಂಬಸ್ಥರು ಕಂದನನ್ನು ತೋರಿಸಿದ್ದಾರೆ.

ಪ್ರಪಂಚ ನೋಡುವ ಮುನ್ನವೇ ಕಣ್ಮುಚ್ಚಿದ ಕಂದಮ್ಮ – ಅಂದು ಆಗಿದ್ದೇನು?
2025ರ ಫೆ.5ರಂದು ಮಧ್ಯಾಹ್ನ ಸುಮಾರು 2:30ರ ವೇಳೆಗೆ ಅಲಿನ್ ಶೆರಿನ್ ತನ್ನ ಕುಟುಂಬದೊಂದಿಗೆ ಕೊಟ್ಟಾಯಂನಿಂದ ಎಂ.ಸಿ ರಸ್ತೆ ಮೂಲಕ ತಿರುವಲ್ಲಾಗೆ ಪ್ರಯಾಣಿಸುತ್ತಿದ್ದಳು. ಆದ್ರೆ ಆ ದಿನ ಅಲಿನ್ ಬಾಳಲ್ಲಿ ವಿಧಿ ಆಟ ಆಡಿತ್ತು.

Kerala Aalin Sherin 1

ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾರು ಕೊಟ್ಟಾಯಂನ ಪಲ್ಲಂ ಜಂಕ್ಷನ್ ಬಳಿ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದಲ್ಲಿ ಅಲಿನ್‌ಗೆ ಗಂಭೀರ ಗಾಯವಾಗಿತ್ತು. ಆಕೆಯ ಪೋಷಕರು, ಅಜ್ಜ, ಅಜ್ಜಿ ಸಣ್ಣಪುಟ್ಟ ಗಾಯದಿಂದ ಬದುಕುಳಿದರು. ತಕ್ಷಣವೇ ಅಲಿನ್‌ಳನ್ನ ತಿರುವಲ್ಲದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಮಿದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ತಿಳಿಸಿದ್ದರು. ಬಳಿಕ ಕೊಚ್ಚಿಯ ಅಮೃತಾ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿತ್ತು. ವೈದ್ಯರ, ಪೋಷಕರ ಸತತ ಪ್ರಯತ್ನದಿಂದಲೂ ಅಲಿನ್ ಬದುಕುಳಿಯಲಿಲ್ಲ. ಫೆಬ್ರುವರಿ 10 ರಂದು ಅಲಿನ್ ನಿಧನಳಾದಳು ಎಂದು ಅಮೃತಾ ಆಸ್ಪತ್ರೆಯ ವೈದ್ಯರು ಘೋಷಿಸಿದರು.

ಅತೀವ ದುಃಖದ ನಡುವೆಯೂ ಆಲಿನ್ ಪೋಷಕರು ಆಂಗಾಂಗ ದಾನಕ್ಕೆ ಸಮ್ಮತಿಸಿದರು. ಕಣ್ಣು, ಹೃದಯ, ಕಿಡ್ನಿ ಮತ್ತೀತರ ಉಪಯುಕ್ತ ಅಂಗಾಂಗಗಳನ್ನ ತಿರುವನಂತಪುರದ ಆಸ್ಪತ್ರೆಗಳಿಗೆ ದಾನ ಮಾಡಲಾಗಿದೆ. ಅಂಗಾಂಗಗಳ ರವಾನೆಗೆ ಕೊಚ್ಚಿ ಪೊಲೀಸರು ಜಿರೋ ಟ್ರಾಫಿಕ್ ವ್ಯವಸ್ಥೆ ಮಾಡಿದ್ದರು.ಇದನ್ನೂ ಓದಿ: ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಯ ದತ್ತು ಪಡೆದ ದುಬೈ ದಂಪತಿ

 

TAGGED:Aalin SherinkeralaKerala CoupleKIMS HealthOrgan DonorThiruvananthapuramYoungest Organ Donorಕಿಮ್ಸ್‌ ಹೆಲ್ತ್‌ಕೇರಳತಿರುವಂತನಂತಪುರಂ
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

visl worker dies after falling iron billet 8 lakh compensation before funeral job guarantee letter for wife
Districts

ಕಬ್ಬಿಣದ ಬಿಲ್ಲೆಟ್ ಬಿದ್ದು VISL ಕಾರ್ಮಿಕ ಸಾವು – ಅಂತ್ಯಸಂಸ್ಕಾರಕ್ಕೂ ಮುನ್ನವೇ 8 ಲಕ್ಷ ಪರಿಹಾರ, ಪತ್ನಿಗೆ ಉದ್ಯೋಗ ಭರವಸೆ

Public TV
By Public TV
12 minutes ago
Weather
Bengaluru City

ಬೆಂಗಳೂರಿನ ಹಲವೆಡೆ ತಂಪೆರೆದ ವರುಣ – ರಾಜ್ಯದಲ್ಲಿ ಏ.30ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ

Public TV
By Public TV
28 minutes ago
Nitin Gadkari
Latest

ಪೆಟ್ರೋಲ್, ಡೀಸೆಲ್ ವಾಹನಗಳಿಗೆ ಭವಿಷ್ಯವಿಲ್ಲ: ನಿತಿನ್ ಗಡ್ಕರಿ

Public TV
By Public TV
36 minutes ago
Vaibhav Sooryavanshi 4
Cricket

ನನ್ನ ಜೊತೆ ಸೆಲ್ಫಿ ಬೇಕಾ? ಹಾಗಾದ್ರೆ 100 ರೂಪಾಯಿ ಕೊಡಿ – ಪುಟಾಣಿಗಳ ಜೊತೆ ವೈಭವ್ ಸೂರ್ಯವಂಶಿ ತುಂಟಾಟ!

Public TV
By Public TV
2 hours ago
k.h.muniyappa delhi
Latest

ದೆಹಲಿಗೆ ಸಚಿವರ ದಂಡು – ಮುಖ್ಯಮಂತ್ರಿ ಗೊಂದಲ ಇತ್ಯರ್ಥಪಡಿಸಲು ಸಚಿವರ ಒತ್ತಡ

Public TV
By Public TV
2 hours ago
GBA
Bengaluru City

ಜಿಬಿಎ ಚುನಾವಣೆ ನಡೆಸುವಂತೆ ರಾಜ್ಯಪಾಲರಿಗೆ ಜೆಡಿಎಸ್ ನಿಯೋಗ ದೂರು

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?