ಬೆಂಗಳೂರು: ಯಜಮಾನರು ವೇದಿಕೆ ಮೇಲೆ ಯಡಿಯೂರಪ್ಪ (Yediyurappa) ಅವರ ಮಗನನ್ನು ಗೆಲ್ಲಿಸಿ ಎಂದು ಮಾತನಾಡಿದ್ದರು. ಆಗ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪರಿಷತ್ ಸದಸ್ಯ ಅಬ್ದುಲ್ ಜಬ್ಬರ್ (Abdul Jabbar) ಪ್ರಶ್ನಿಸಿ ಸಿಟ್ಟು ಹೊರಹಾಕಿದ್ದಾರೆ.
ಕಾಂಗ್ರೆಸ್ನಿಂದ ತನ್ನನ್ನು ಅಮಾನತು ಮಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅವರು, ನನಗೆ ಇಲ್ಲಿಯವರೆಗೆ ಅಮಾನತು ಪತ್ರ ಬಂದಿಲ್ಲ. ನಿಮ್ಮಿಂದಲೇ ಕೇಳುತ್ತಿರುವುದು. ನನಗೆ ಆದೇಶ ಬರಲಿ ಸರಿಯಾಗಿ ಉತ್ತರ ಕೊಡುತ್ತೇನೆ. ನನ್ನ ಆಡಿಯೋ ವಿಡಿಯೋ ಇದ್ದರೆ ಟಿವಿ ಮೂಲಕ ತೋರಿಸಬೇಕಲ್ಲ. ಯಾವ ಆಧಾರ ಇಟ್ಟುಕೊಂಡು ಅಮಾನತು ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಚುನಾವಣೆಯಲ್ಲಿ ಕಾಂಗ್ರೆಸ್ (Congress) ಸೋಲುತ್ತದೆ ಎಂದು ನನಗೇನು ಅನ್ನಿಸುತ್ತಿಲ್ಲ. ಶಾಮನೂರು ಕುಟುಂಬದ ಒಬ್ಬರು ಮಂತ್ರಿಯಾಗಿದ್ದಾರೆ. ಮತ್ತೊಬ್ಬರು ಸಂಸದರಾಗಿದ್ದಾರೆ. ಅವರಿಗೆ ಯಾಕೆ ಟಿಕೆಟ್ ಕೊಡುತ್ತೀರಿ. ನಮ್ಮ ಸಮುದಾಯ ಜಾಸ್ತಿ ಇದೆ ನಮಗೆ ಕೊಡಿ ಎಂದು ಕೇಳಿದ್ದೆವು ಎಂದು ತಿಳಿಸಿದರು.
ನನಗೆ ಯಾರು ಬಂದು ಪ್ರಚಾರ ಮಾಡಿ ಅಂತ ಕರೆದಿಲ್ಲ. ಮಲ್ಲಿಕಾರ್ಜುನ್ ಅವರು ನಮ್ಮನ್ನು ಕರೆಯದ್ದಕ್ಕೆ ನಾವು ಹೋಗಿಲ್ಲ. ಎಂಎಲ್ಸಿಗೂ ಇದಕ್ಕೂ ಏನು ಸಂಬಂಧ? ನಮ್ಮ ಕ್ಷೇತ್ರ ಆದರೂ ಅಭ್ಯರ್ಥಿ ಅಥವಾ ಅವರ ತಾಯಿ ಯಾರೂ ಸಹ ನನ್ನ ಹತ್ತಿರ ಬಂದು ಮಾತನಾಡಿಲ್ಲ ಅದಕ್ಕೆ ರಾಜೀನಾಮೆ ನೀಡಿದ್ದೇನೆ ಎಂದರು. ಇದನ್ನೂ ಓದಿ: ಅಯೋಧ್ಯೆ ಶ್ರೀರಾಮನ ದರ್ಶನ ಪಡೆದ ರಾಜ್ಯದ ಕಾಂಗ್ರೆಸ್ ಶಾಸಕರು

