Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪ್ರತಿ ಲೀಟರ್‌ ಪೆಟ್ರೋಲ್‌ಗೆ 18 ರೂ., ಡೀಸೆಲ್‌ಗೆ 35 ರೂ. ನಷ್ಟ – ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಭಾರೀ ಲಾಸ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಪ್ರತಿ ಲೀಟರ್‌ ಪೆಟ್ರೋಲ್‌ಗೆ 18 ರೂ., ಡೀಸೆಲ್‌ಗೆ 35 ರೂ. ನಷ್ಟ – ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಭಾರೀ ಲಾಸ್‌

Latest

ಪ್ರತಿ ಲೀಟರ್‌ ಪೆಟ್ರೋಲ್‌ಗೆ 18 ರೂ., ಡೀಸೆಲ್‌ಗೆ 35 ರೂ. ನಷ್ಟ – ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ ಭಾರೀ ಲಾಸ್‌

Public TV
Last updated: April 14, 2026 6:10 pm
Public TV
Share
3 Min Read
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
SHARE

– ಪ್ರತಿ ದಿನ ಅಂದಾಜು 1,600 ಕೋಟಿ ರೂ. ನಷ್ಟ
– ಏಪ್ರಿಲ್ 2022 ರಿಂದ ಭಾರತದಲ್ಲಿ ತೈಲ ದರ ಸ್ಥಿರ

ನವದೆಹಲಿ: ಅಮೆರಿಕ-ಇರಾನ್‌ ಯುದ್ಧದಿಂದ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು (OMCs) ಪ್ರತಿ ಲೀಟರ್ ಪೆಟ್ರೋಲ್ (Petrol) ಮೇಲೆ 18 ರೂ. ಮತ್ತು ಡೀಸೆಲ್‌ (Diesel) ಮೇಲೆ 35 ರೂ. ನಷ್ಟವನ್ನು ಅನುಭವಿಸುತ್ತಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು (Crude Oil Price) ಭಾರೀ ಏರಿಕೆಯಾಗಿದ್ದರೂ ಭಾರತದಲ್ಲಿ ತೈಲ ದರ ಏರಿಕೆಯಾಗಿಲ್ಲ. ಮೂರು ಪ್ರಮುಖ ಸರ್ಕಾರಿ ತೈಲ ಕಂಪನಿಗಳಾದ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌, ಭಾರತ್‌ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂಗೆ ಪ್ರತಿದಿನ ಅಂದಾಜು ಒಟ್ಟು 1,600 ಕೋಟಿ ರೂ. ನಷ್ಟವನ್ನು ಅನುಭವಿಸುತ್ತಿವೆ.

ಕಳೆದ ತಿಂಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್‌(159 ಲೀಟರ್‌) ಕಚ್ಚಾ ತೈಲದ ಬೆಲೆ 115 – 119 ಡಾಲರ್‌ ಗರಿಷ್ಠ ಮಟ್ಟದಲ್ಲಿದ್ದಾಗ ಈ ದೈನಂದಿನ ನಷ್ಟವು ಸುಮಾರು 2,400 ಕೋಟಿ ರೂ.ಗೆ ಏರಿಕೆಯಾಗಿತ್ತು.

ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಏಪ್ರಿಲ್ 2022 ರಿಂದ ಸ್ಥಿರವಾಗಿಡಲಾಗಿದೆ. ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಚುನಾವಣೆಗಳು ನಿಗದಿಯಾಗಿರುವ ಕಾರಣ ಸದ್ಯಕ್ಕೆ ಬೆಲೆ ಏರಿಕೆಯಾಗುವುದು ಅನುಮಾನ ಎನ್ನಲಾಗುತ್ತಿದೆ.

ಲೆಕ್ಕಾಚಾರದ ಪ್ರಕಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ ದರ 10 ಡಾಲರ್‌ ಏರಿಕೆಯಾದರೆ ತೈಲ ಕಂಪನಿಗಳಿಗೆ ಪ್ರತಿ ಲೀಟರ್‌ಗೆ ಸುಮಾರು 6 ರೂ. ಹೆಚ್ಚುವರಿ ನಷ್ಟವಾಗುತ್ತದೆ. ಇದನ್ನೂ ಓದಿ: ಅಮೆರಿಕ – ಇರಾನ್‌ ಮಧ್ಯೆ 2ನೇ ಹಂತದ ಮಾತುಕತೆಗೆ ಪ್ರಸ್ತಾಪ – ಮುಖಭಂಗ ತಪ್ಪಿಸಲು ಪಾಕ್‌ ಶತಪ್ರಯತ್ನ

PETROL 1

ತೈಲ ಕಂಪನಿಗಳಿಗೆ ನಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇಂಧನದ ಮೇಲಿನ ಅಬಕಾರಿ ಸುಂಕವನ್ನು 10 ರೂ. ಕಡಿತಗೊಳಿಸಿದೆ. ಈ ಕಡಿತದ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸದ ಕಾರಣ ತೈಲ ಕಂಪನಿಗಳು ತಮ್ಮ ನಷ್ಟವನ್ನು ಸರಿದೂಗಿಸಿಕೊಳ್ಳಲು ಬಳಸಿಕೊಳ್ಳುತ್ತಿವೆ.

ಅಬಕಾರಿ ಸುಂಕಗಳನ್ನು ಸಂಪೂರ್ಣವಾಗಿ ತೆಗೆದುಹಾಕಿದರೂ ತೈಲ ಮಾರುಕಟ್ಟೆ ಕಂಪನಿಗಳು ಎದುರಿಸುತ್ತಿರುವ ನಷ್ಟವನ್ನು ಸರಿದೂಗಿಸಲು ಇದು ಸಾಕಾಗುವುದಿಲ್ಲ. 2025ರಲ್ಲಿ ಭಾರತದ ಸುಮಾರು ಶೇ. 45 ರಷ್ಟು ಆಮದುಗಳು ಮಧ್ಯಪ್ರಾಚ್ಯದಿಂದ, ಶೇ. 35 ರಷ್ಟು ರಷ್ಯಾದಿಂದ ಮತ್ತು ಶೇ. 6 ರಷ್ಟು ಅಮೆರಿಕದಿಂದ ಬಂದಿವೆ.

ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?
ಇಂದು ಬ್ರೆಂಟ್‌ ಕಚ್ಚಾ ತೈಲದ ಒಂದು ಬ್ಯಾರೆಲ್‌ಗೆ 98.58 ಡಾಲರ್‌(8,329 ರೂ.) ತಲುಪಿದ್ದರೆ ಅಮೆರಿಕ ವೆಸ್ಟ್‌ ಟೆಕ್ಸಾಸ್‌ ಇಂಟರ್‌ಮೀಡಿಯೆಟ್‌(WTI) ದರ 96.25 ಡಾಲರ್‌ (8,133 ರೂ.) ಇತ್ತು. ರಷ್ಯಾದ ಪ್ರಮುಖ ಕಚ್ಚಾ ತೈಲವಾದ ಯುರಲ್ಸ್ (Urals) ಬೆಲೆಯು ಪ್ರತಿ ಬ್ಯಾರೆಲ್‌ಗೆ ಸುಮಾರು 97.38 ಡಾಲರ್‌(8,228 ರೂ.) ನಷ್ಟಿದೆ. ಇದನ್ನೂ ಓದಿ: ಹಾರ್ಮುಜ್‌ಗೆ ಬಂದ್ರೆ ಕತೆ ಮುಗಿಸಿಬಿಡ್ತೀನಿ – ದಿಗ್ಬಂಧನ ಮುರಿಯುವ ಯಾವ್ದೇ ಪ್ರಯತ್ನ ಬೇಡ: ಟ್ರಂಪ್‌ ಬಿಗ್‌ ವಾರ್ನಿಂಗ್‌

ಇರಾನ್‌ ಯುದ್ಧ ಆರಂಭಗೊಳ್ಳುವ ಮುನ್ನಾ ದಿನ ಅಂದರೆ ಫೆ.27 ರಂದು ಬ್ರೆಂಟ್‌ ಕಚ್ಚಾ ತೈಲದ ದರ 72.48 ಡಾಲರ್‌ (6,015 ರೂ.) ಇದ್ದರೆ WTI ದರ 67.02 ಡಾಲರ್‌(5,562 ರೂ.) ಇತ್ತು. ಮಾರ್ಚ್‌ 31 ರಂದು ಬ್ರೆಂಟ್‌ ಕಚ್ಚಾ ತೈಲದ ದರ 119 ಡಾಲರ್‌(10,055 ರೂ.) ತಲುಪಿದ್ದರೆ ಏ.7 ರಂದು WTI ದರ 117 ಡಾಲರ್‌(9,886 ರೂ.) ತಲುಪಿತ್ತು.

2008 ರಲ್ಲಿ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ 1 ಬ್ಯಾರೆಲ್‌ ಕಚ್ಚಾ ತೈಲ ದರ ಸಾರ್ವಕಾಲಿಕ ದಾಖಲೆಯಾದ ಸುಮಾರು 147 – 150 ಡಾಲರ್‌ ಮಟ್ಟವನ್ನು ತಲುಪಿತ್ತು

ಮಧ್ಯಪ್ರಾಚ್ಯ ಯುದ್ಧ ಆರಂಭವಾದ ಬಳಿಕ ಕಳೆದ ಒಂದೂವರೆ ತಿಂಗಳಿನಲ್ಲಿ ಪ್ರತಿ ಬ್ಯಾರೆಲ್‌ ಕಚ್ಚಾ ತೈಲದ ಬೆಲೆ ಸುಮಾರು 2,300 ರೂ. ರಿಂದ 2,500 ರಷ್ಟು ಏರಿಕೆಯಾಗಿದೆ. ಡಾಲರ್‌ ಮುಂದೆ ರೂಪಾಯಿ ಮೌಲ್ಯ ಕುಸಿಯುತ್ತಿರುವ ಕಾರಣ ತೈಲ ಕಂಪನಿಗಳು ದುಬಾರಿ ಬೆಲೆಯಲ್ಲಿ ತೈಲವನ್ನು ಖರೀದಿಸುವ ಸ್ಥಿತಿ ನಿರ್ಮಾಣವಾಗಿದೆ.

TAGGED:dieselIndia Crude Oilpetrolಕಚ್ಚಾ ತೈಲಡೀಸೆಲ್ಪೆಟ್ರೋಲ್ಭಾರತ
Share This Article
Facebook Whatsapp Whatsapp Telegram

Cinema news

Asha Bhosle Funeral
ಸರ್ಕಾರಿ ಗೌರವಗಳೊಂದಿಗೆ ನೆರವೇರಿದ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest National Top Stories
Jogi Prem
ಕನ್ನಡ ಸಿನಿಮಾ ಅಂತಲೇ ರಾಜಕಾರಣ – ಸೆನ್ಸಾರ್ ಬೋರ್ಡ್ ವಿರುದ್ಧ ಪ್ರೇಮ್ ಕಿಡಿ
Cinema Latest Sandalwood Top Stories
Dhruva Sarja
LPG ಗ್ಯಾಸ್‌ ಬಿಕ್ಕಟ್ಟಿನಿಂದ ಕಂಗಾಲಾದ ಆಟೋ ಚಾಲಕರಿಗೆ ಆಸರೆ – 25 ಲಕ್ಷ ನೆರವು ನೀಡಿದ ಧ್ರುವ ಸರ್ಜಾ!
Bengaluru City Cinema Latest Sandalwood Top Stories
Asha Bhosle 3
`ಅಭೀ ನಾ ಜಾವೋ ಛೋಡ್ ಕರ್’ ಗಾಯಕಿ ಸಂಗೀತದಲ್ಲಿ ಲೀನ – ಇಂದು ಆಶಾ ಭೋಸ್ಲೆ ಅಂತ್ಯಕ್ರಿಯೆ
Cinema Latest Main Post Top Stories

You Might Also Like

Tamil Nadu Poll BJP Manifesto
Latest

ಮಹಿಳೆಯರಿಗೆ ಮಾಸಿಕ 2,000 ರೂ., ವರ್ಷಕ್ಕೆ 3 ಸಿಲಿಂಡರ್ ಉಚಿತ – ತಮಿಳುನಾಡಲ್ಲಿ ಬಿಜೆಪಿ ಗ್ಯಾರಂಟಿ

Public TV
By Public TV
10 minutes ago
chamarajanagara accident
Chamarajanagar

ಕಾರು, ಟಿಪ್ಪರ್ ನಡುವೆ ಡಿಕ್ಕಿ – ಕೇರಳ ಮೂಲದ ಇಬ್ಬರು ಸಾವು

Public TV
By Public TV
41 minutes ago
Vijayapura Father Kills Son
Crime

ನೋಡಲು ತನ್ನಂತೆ ಇಲ್ಲ ಎಂದು ಮಗನನ್ನೇ ಕೊಲೆಗೈದ ತಂದೆ

Public TV
By Public TV
54 minutes ago
Samrat Choudhary Nitish Kumar
Latest

ಬಿಹಾರದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿಯ ಸಾಮ್ರಾಟ್ ಚೌಧರಿ ಆಯ್ಕೆ

Public TV
By Public TV
2 hours ago
Whitefield Mother Kills Daughter And Commits Suicide
Bengaluru City

17 ವರ್ಷದ ಮಗಳನ್ನು ಕೊಂದು ತಾಯಿ ಆತ್ಮಹತ್ಯೆ

Public TV
By Public TV
2 hours ago
Nitish Kumar Bihar
Latest

ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್‌ ಕುಮಾರ್‌ ರಾಜೀನಾಮೆ – ನಾಳೆ ಹೊಸ ಸಿಎಂ ಪ್ರಮಾಣವಚನ ಸಾಧ್ಯತೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?