ಮುಂಬೈ: ಐಪಿಎಲ್ 2026ರಲ್ಲಿ (IPL 2026) ಒಂದು ಪಂದ್ಯ ಗೆದ್ದು, ಉಳಿದ ಮೂರು ಪಂದ್ಯಗಳಲ್ಲಿ ಸೋಲುಂಡ ಮುಂಬೈ ಇಂಡಿಯನ್ಸ್ (Mumbai Indians) ಗೆಲುವಿಗಾಗಿ ಹೋರಾಡುತ್ತಿರುವಾಗಲೇ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ (Rohit Sharma) ಗಾಯಗೊಂಡಿರುವುದು ತಂಡಕ್ಕೆ ಮತ್ತಷ್ಟು ಹಿನ್ನಡೆಯಾಗಿದೆ. ಮುಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಆಡೋದು ಡೌಟ್ ಎನ್ನಲಾಗುತ್ತಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಪಂದ್ಯದಲ್ಲಿ ರೋಹಿತ್ ಶರ್ಮಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಆದರೆ ರೋಹಿತ್ 19 ರನ್ ಗಳಿಸಿದ್ದಾಗ ಮಂಡಿರಜ್ಜು ಸ್ನಾಯು ಸೆಳೆತದಿಂದಾಗಿ ಗಾಯಗೊಂಡು ನಿವೃತ್ತರಾದರು. ಬಳಿಕ ರೋಹಿತ್ ಬ್ಯಾಟಿಂಗ್‌ಗೆ ಹಿಂತಿರುಗಲಿಲ್ಲ. ಇದೆಲ್ಲದರ ನಡುವೆ ರೋಹಿತ್ ಗಾಯಕ್ಕೆಸಂಬಂಧಿಸಿದಂತೆ ಮಾಹಿತಿ ಹೊರಬಿದ್ದಿದ್ದು, ರೋಹಿತ್ ಸ್ಕ್ಯಾನಿಂಗ್‌ಗೆ ಒಳಗಾಗಲಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: 114 ಎಸೆತ ಹಾಕಿಯೂ ವಿಕೆಟ್ ಪಡೆಯದ ಬುಮ್ರಾ
ಆಸ್ಪತ್ರೆಗೆ ದಾಖಲಾಗಲಿರುವ ರೋಹಿತ್ ಮಂಡಿರಜ್ಜು ಸ್ಕ್ಯಾನಿಂಗ್‌ಗೆ ಒಳಗಾಗಲಿದ್ದಾರೆ. ಸ್ಕ್ಯಾನಿಂಗ್ ವರದಿ ಬಂದ ಬಳಿಕವಷ್ಟೇ ರೋಹಿತ್ ಮುಂದಿನ ಪಂದ್ಯದಲ್ಲಿ ಆಡುವ ಬಗ್ಗೆ ಮಾಹಿತಿ ಹೊರಬೀಳಲಿದೆ. ಇದನ್ನೂ ಓದಿ: ಹಾರ್ದಿಕ್ ವಿಕೆಟ್ ಉರುಳಿದಾಗ ಕುಣಿದು ಕುಪ್ಪಳಿಸಿದ ಅಣ್ಣ ಕೃನಾಲ್ ಪಾಂಡ್ಯ – ಬ್ರದರ್ vs ಬ್ರದರ್ ವಿಡಿಯೋ ವೈರಲ್!
ಮುಂಬೈ ತಮ್ಮ ಮುಂದಿನ ಪಂದ್ಯವನ್ನು ಏಪ್ರಿಲ್ 16ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದಲ್ಲಿ ಮುಂಬೈ ಇಂಡಿಯನ್ಸ್ ಇದುವರೆಗೆ ನಾಲ್ಕು ಪಂದ್ಯಗಳನ್ನು ಆಡಿದೆ. ಮುಂಬೈ ಮೊದಲ ಪಂದ್ಯವನ್ನು ಗೆದ್ದರೆ, ಬಳಿಕ ಸತತ ಮೂರು ಪಂದ್ಯಗಳನ್ನು ಸೋತಿದೆ. ಇದನ್ನೂ ಓದಿ: ಫೋನ್ ಬಳಸಿ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ರೋಮಿ – RR ವ್ಯವಸ್ಥಾಪಕನಿಗೆ ಬಿಸಿಸಿಐ ನೋಟಿಸ್; ಕಾಡ್ತಿದೆಯಾ ಬ್ಯಾನ್ ಭೀತಿ?

