ಬೀದರ್: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ(KUWJ) 40ನೇ ರಾಜ್ಯ ಮಟ್ಟದ ಕಾರ್ಯನಿರತ ಪತ್ರಕರ್ತರ ಸಮ್ಮೇಳನದಲ್ಲಿ ಪಬ್ಲಿಕ್ ಟಿವಿಯ (PUBLiC TV) ಹಿರಿಯ ನಿರೂಪಕ ಅರುಣ್ ಸಿ ಬಡಿಗೇರ್ (Arun Badiger) ಅವರಿಗೆ ವಾರ್ಷಿಕ ಅತ್ಯುತ್ತಮ ಆ್ಯಂಕರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಬೀದರ್ ನಗರದ ಝೀರಾ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಪತ್ರಕರ್ತರ ಸಮ್ಮೇಳನದಲ್ಲಿ ಸ್ಪೀಕರ್ ಯುಟಿ ಖಾದರ್, ವಿರೋಧ ಪಕ್ಷದ ನಾಯಕ ಆರ್ ಆಶೋಕ್, ಸಚಿವ ಈಶ್ವರ್ ಖಂಡ್ರೆ ಪ್ರಶಸ್ತಿ ನೀಡಿ ಗೌರವಿಸಿದರು.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅರುಣ್ ಬಡಿಗೇರ್, ಅತ್ಯುತ್ತಮ ಆ್ಯಂಕರ್ ಪ್ರಶಸ್ತಿ ಸಿಕ್ಕಿದ್ದಕ್ಕೆ ಬಹಳ ಖುಷಿಯಿದೆ. ಈ ಕ್ರೆಡಿಟ್ ವಿಕ್ಷಕರಿಗೆ ಮತ್ತು ನನ್ನ ತಂದೆ, ತಾಯಿಗೆ ನೀಡುತ್ತೇನೆ. ನನ್ನ ಗುರುಗಳಾದ ಎಚ್.ಆರ್ ರಂಗನಾಥ ಸರ್ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ಅವರ ಮಾರ್ಗದರ್ಶನ ಇಲ್ಲದೇ ಇದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಾಗಿದ್ದು ಇನ್ನು ಮುಂದೆ ಮಾತನಾಡುವಾಗ ಬಹಳಷ್ಟು ಜವಾಬ್ದಾರಿಯಿಂದ ಮಾತನಾಡಬೇಕು. ಆ್ಯಂಕರ್ ಆಗಬೇಕು ಎಂಬ ಕನಸಿತ್ತು ಇದಕ್ಕಾಗಿ ನಾನು 7-8 ವರ್ಷ ಕಾದಿದ್ದೆನೆ ಎಂದು ಸಂತಸ ಹಂಚಿಕೊಂಡರು.
ಎರಡು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಹಾಗೂ ಮಾಧ್ಯಮ, ಗಾಂಧಿ ಮತ್ತು ಅಂಬೇಡ್ಕರ್, ಎಐ ಮತ್ತು ಡಿಜಿಟಲ್ ಮಾಧ್ಯಮ ಸೇರಿ ನಾಲ್ಕು ಗೋಷ್ಠಿಗಳು ನಡೆಯಿತು. ಇಂದು ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ವಿವಿಧ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.

