ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಭಾಗಗಳಲ್ಲಿ ಇಂದು ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಇದರ ನಡುವೆ ಸಂಜೆ ವೇಳೆಗೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿಯಲ್ಲಿ ಇಂದು ಬಿಸಿಗಾಳಿ ಬೀಸುವ ಸೂಚನೆ ನೀಡಿದ್ದು, ಅಧಿಕ ಉಷ್ಣಾಂಶ ದಾಖಲಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಈ ಹಿನ್ನಲೆಯಲ್ಲಿ ಕರಾವಳಿ ಭಾಗದ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ
ಬೆಂಗಳೂರು: 34-22
ಮಂಗಳೂರು: 32-26
ಶಿವಮೊಗ್ಗ: 34-21
ಬೆಳಗಾವಿ: 34-20
ಮೈಸೂರು: 35-22

ಮಂಡ್ಯ: 35-23
ಮಡಿಕೇರಿ: 29-19
ರಾಮನಗರ: 35-23
ಹಾಸನ: 33-20
ಚಾಮರಾಜನಗರ: 34-22
ಚಿಕ್ಕಬಳ್ಳಾಪುರ: 33-22

ಕೋಲಾರ: 33-22
ತುಮಕೂರು: 34-22
ಉಡುಪಿ: 32-25
ಕಾರವಾರ: 30-26
ಚಿಕ್ಕಮಗಳೂರು: 32-19
ದಾವಣಗೆರೆ: 36-22

ಹುಬ್ಬಳ್ಳಿ: 36-22
ಚಿತ್ರದುರ್ಗ: 34-22
ಹಾವೇರಿ: 36-22
ಬಳ್ಳಾರಿ: 37-25
ಗದಗ: 36-23
ಕೊಪ್ಪಳ: 36-24

ರಾಯಚೂರು: 38-26
ಯಾದಗಿರಿ: 37-26
ವಿಜಯಪುರ: 36-25
ಕಲಬುರಗಿ: 37-25
ಬಾಗಲಕೋಟೆ: 37-24

