ಚಾಮರಾಜನಗರ: ಮುಳ್ಳುಹಂದಿ (Porcupine) ಬೇಟೆಯಾಡಲು ಹೋಗಿ ಚಿರತೆ (Leopard) ಸಾವನ್ನಪ್ಪಿರುವ ಘಟನೆ ಗುಂಡ್ಲುಪೇಟೆ (Gundlupet) ತಾಲೂಕಿನ ಬೊಮ್ಮನಹಳ್ಳಿ ಬಳಿ ನಡೆದಿದೆ.
ಮುಳ್ಳುಹಂದಿ ಬೇಟೆಗೆ ಚಿರತೆ ಮುಂದಾಗಿದೆ. ಈ ವೇಳೆ, ಚಿರತೆ ಕಾಲು ಹಾಗೂ ಬಾಯಿಯ ಭಾಗಕ್ಕೆ ಮುಳ್ಳು ಚುಚ್ಚಿಕೊಂಡಿದೆ. ಮುಳ್ಳುಹಂದಿ ಜೊತೆ ಕಾದಾಡಿ ಚಿರತೆ ಮೃತಪಟ್ಟಿದೆ. ಇದನ್ನೂ ಓದಿ: ಬೆಂಗಳೂರು| ಕ್ಯಾಬ್ ಬುಕ್ ಮಾಡಿ ಅರ್ಧಗಂಟೆ ಕಾಯಿಸಿ ಮಹಿಳೆ ಕಿರಿಕ್
ಸ್ಥಳಕ್ಕೆ ಅರಣ್ಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಶುವೈದ್ಯರು ಮರಣೋತ್ತರ ಪರೀಕ್ಷೆ ನಡೆಸಲಿದ್ದಾರೆ.

