– ಇಸ್ಲಾಮಾಬಾದ್‌ನಲ್ಲಿ ಫುಲ್ ಸೆಕ್ಯೂರಿಟಿ; ಇರಾನ್‌ಗೆ ಲೆಬನಾನ್ ಮೇಲಿನ ದಾಳಿಯದ್ದೇ ಚಿಂತೆ
ಇಸ್ಲಾಮಾಬಾದ್/ವಾಷಿಂಗ್ಟನ್/ಟೆಹ್ರಾನ್: ಕೊಲ್ಲಿಯುದ್ಧ ಕದನ ವಿರಾಮ (Ceasefire) ಸಂಬಂಧ ಇಸ್ಲಾಮಾಬಾದ್‌ನಲ್ಲಿ ಫಿಕ್ಸ್ ಆಗಿರುವ ಸಂಧಾನಸಭೆ ಶುರುವಾಗುವ ಮುನ್ನವೇ ವಿಘ್ನ ಎದುರಾಗಿದೆ. ಲೆಬನಾನ್ ಮೇಲಿನ ಇಸ್ರೇಲ್ ದಾಳಿ ಖಂಡಿಸಿರುವ ಇರಾನ್, ಲೆಬನಾನ್ ಮೇಲೆ ಯುದ್ಧ ನಿಲ್ಲುವವರೆಗೂ ಇಸ್ಲಾಮಾಬಾದ್‌ನಲ್ಲಿ ಅಮೆರಿಕದೊಂದಿಗೆ ಶಾಂತಿ ಮಾತುಕತೆಯಲ್ಲಿ (Islamabad Talks) ಭಾಗವಹಿಸುವುದಿಲ್ಲ ಎಂದಿದೆ.
ಹೀಗಾಗಿ ಅಮೆರಿಕ-ಇರಾನ್ (US Iran War) ನಡುವಿನ ಕದನ ವಿರಾಮ ಒಪ್ಪಂದ ಮಾತುಕತೆ ಮೇಲೆ ಕಾರ್ಮೋಡ ಆವರಿಸಿದೆ. ಇರಾನ್-ಅಮೆರಿಕ ಶಾಂತಿ ಮಾತುಕತೆಗೆ ಪಾಕಿಸ್ತಾನ ವೇದಿಕೆಯಾಗಿದೆ. ಈ ಸಭೆ ಪಾಕಿಸ್ತಾನಕ್ಕೂ ಜಾಗತಿಕವಾಗಿ ಪ್ರತಿಷ್ಠೆಯಾಗಿದೆ. ಕದನ ವಿರಾಮಕ್ಕೆ ಇರಾನ್ ಹಾಕಿರುವ ಷರತ್ತುಗಳಲ್ಲಿ ಲೆಬನಾನ್ ಮೇಲಿನ ದಾಳಿ ನಿಲ್ಲಬೇಕು ಎನ್ನುವುದೂ ಸೇರಿದೆ. ಕದನ ವಿರಾಮಕ್ಕೆ ರಾಜತಾಂತ್ರಿಕ ಪ್ರಯತ್ನಗಳ ಹೊರತಾಗಿಯೂ ಇಸ್ರೇಲ್ ಲೆಬನಾನ್ ಮೇಲೆ ದಾಳಿ ತೀವ್ರಗೊಳಿಸಿದ್ದರಿಂದ ಇರಾನ್, ಅಮೆರಿಕದೊಂದಿಗೆ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದಿದೆ. ಇದನ್ನೂ ಓದಿ: ಶಾಂತಿ ಮಾತುಕತೆ ಮಧ್ಯೆ ಪಾಕ್, ಇಸ್ರೇಲ್ ಮಧ್ಯೆ ಭಯಂಕರ ಕಿತ್ತಾಟ

ಮಾತುಕತೆಗಾಗಿ ಟೆಹ್ರಾನ್ ನಿಯೋಗ ಇಸ್ಲಾಮಾಬಾದ್ ತಲುಪಿದೆ ಎಂಬ ವರದಿ ತಳ್ಳಿ ಹಾಕಿದೆ. ಕದನ ವಿರಾಮಕ್ಕೆ ಲೆಬನಾನ್ (Lebanon) ಒಳಗೊಂಡಿಲ್ಲ ಅಂತ ಹೇಳ್ತಲೇ ಬಂದಿರುವ ಇಸ್ರೇಲ್ ದಾಳಿ ಮುಂದುವರಿಸಿದೆ. ಇದು ಕದನ ವಿರಾಮ ಮಾತುಕತೆಗೂ ಅಡ್ಡಿ ಆಗಿದೆ. ಶಾಂತಿಸಭೆಗೆ ಮಧ್ಯಸ್ಥಿಕೆ ವಹಿಸಿರುವ ಪಾಕ್‌ನಿಂದಲೂ ವಿರೋಧ ವ್ಯಕ್ತವಾಗಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಇಸ್ರೇಲ್ ಅನ್ನು ಕ್ಯಾನ್ಸರ್ ಕಾರಕ ರಾಷ್ಟ್ರ ಎಂದು ಜರಿದಿದ್ದಾರೆ.
ಮಾನವೀಯತೆಗೆ ಶಾಪ ಎಂದು ಎಕ್ಸ್‌ನಲ್ಲಿ ಪೋಸ್ಟ್ ಟೀಕಿಸಿದ್ದಾರೆ. ಯೂರೋಪಿನ ಯಹೂದಿಗಳಿಂದ ಮುಕ್ತಿ ಪಡೆಯಲು ಪ್ಯಾಲೆಸ್ತೀನ್ ಭೂಮಿಯಲ್ಲಿ ಈ ಕ್ಯಾನ್ಸರ್ ಅನ್ನು ಸೃಷ್ಟಿಸಿದವರು ನರಕದಲ್ಲಿ ಬೆಂದು ಹೋಗಲಿ ಎಂದು ಶಾಪ ಹಾಕಿದ್ದಾರೆ. ಇದಕ್ಕೆ ಬೆಂಜಮಿನ್ ನೆತನ್ಯಾಹು ಕಿಡಿ ಕಾರಿದ್ದಾರೆ. ಒಂದು ಕಡೆ ಶಾಂತಿ ಪ್ರಕ್ರಿಯೆಯ ಭಾಗವೆಂದು ಹೇಳಿಕೊಳ್ಳುವ ದೇಶದ ಸಚಿವರು ಇಂತಹ ಅವಹೇಳನಕಾರಿ ಮತ್ತು ಅಪಾಯಕಾರಿ ಹೇಳಿಕೆ ನೀಡುವುದನ್ನು ಯಾವುದೇ ಸರ್ಕಾರ ಸಹಿಸುವುದಿಲ್ಲ ಎಂದು ಗುಡುಗಿದ್ದಾರೆ.
ಈ ಬೆನ್ನಲ್ಲೆ ಖವಾಜಾ ಆಸೀಫ್ ಪೋಸ್ಟ್ ಡಿಲೀಟ್ ಮಾಡಿದ್ದಾರೆ. ಲೆಬನಾನ್ ಮೇಲೆ ತನ್ನ ದಾಳಿ ಮುಂದುವರೆಸುವ ಎಚ್ಚರಿಕೆ ನೀಡಿರುವ ಇಸ್ರೇಲ್ ಮತ್ತು ಲೆಬನಾನ್ ನಡುವೆ ಮುಂದಿನ ವಾರ ಸಂಧಾನ ಮಾತುಕತೆ ನಡೆಯುವ ಸಾಧ್ಯತೆ ಇದೆ. ಇದನ್ನೂ ಓದಿ: ಟ್ರಂಪ್ ಮಾತಿಗಿಲ್ಲ ಕಿಮ್ಮತ್ತು – ಲೆಬನಾನ್‌ನ 2 ಪಟ್ಟಣಗಳ ಮೇಲೆ ಮತ್ತೆ ಇಸ್ರೇಲ್ ದಾಳಿ

ನೂರ್ ಖಾನ್ ವಾಯುನೆಲೆ ತಲುಪಿದ ಯುಎಸ್ ಜೆಟ್
ಇರಾನ್ ಜೊತೆಗಿನ ಮಾತುಕತೆಗಾಗಿ ಸಿದ್ಧತೆ ನಡೆಯುತ್ತಿರುವಾಗಲೇ ʻಚಾರ್ಲ್ಸ್ಟನ್ʼ ಹೆಸರಿನ ಅಮೆರಿಕ ವಾಯುಪಡೆಯ ಸಾರಿಗೆ ವಿಮಾನವು ಇಸ್ಲಾಮಾಬಾದ್‌ನಲ್ಲಿರುವ ನೂರ್ ಖಾನ್ ವಾಯುನೆಲೆಯನ್ನು ತಲುಪಿದೆ. ಆದ್ರೆ ಲೆಬನಾನ್ ಮೇಲೆ ದಾಳಿ ನಿಲ್ಲುವವರೆಗೆ ಅಮೆರಿಕ ಜೊತೆಗಿನ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಇರಾನ್‌ನ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ಹೇಳಿದ್ದಾರೆ.
ಅಮೆರಿಕನ್ ತಂಡವನ್ನು ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮುನ್ನಡೆಸಲಿದ್ದು, ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಮತ್ತು ಅಧ್ಯಕ್ಷರ ಅಳಿಯ ಜೇರೆಡ್ ಕುಶ್ನರ್ ನಿಯೋಗದಲ್ಲಿದ್ದಾರೆ. ಆದ್ರೆ ಇರಾನ್ ತನ್ನ ನಿಯೋಗ ಸಂಯೋಜನೆಯನ್ನ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಇದನ್ನೂ ಓದಿ: ಚೀನಾ-ತೈವಾನ್ ಐತಿಹಾಸಿಕ ಮಾತುಕತೆ – ಈ ಭೇಟಿಗೆ ಇಷ್ಟೊಂದು ಮಹತ್ವ ಯಾಕೆ?

