Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: LPG ಸ್ಟೌ ಮಾದರಿಯ ವಿದ್ಯುತ್ ಸ್ಟೌ – ಸಚಿವ ಪ್ರಹ್ಲಾದ್ ಜೋಶಿ ಪ್ರದರ್ಶನ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | LPG ಸ್ಟೌ ಮಾದರಿಯ ವಿದ್ಯುತ್ ಸ್ಟೌ – ಸಚಿವ ಪ್ರಹ್ಲಾದ್ ಜೋಶಿ ಪ್ರದರ್ಶನ

Latest

LPG ಸ್ಟೌ ಮಾದರಿಯ ವಿದ್ಯುತ್ ಸ್ಟೌ – ಸಚಿವ ಪ್ರಹ್ಲಾದ್ ಜೋಶಿ ಪ್ರದರ್ಶನ

Public TV
Last updated: April 10, 2026 5:48 pm
Public TV
Share
2 Min Read
lpg stove model electric stove pralhad joshi
SHARE

– ದೇಶದಲ್ಲೇ ಬೃಹತ್ ಪ್ರಮಾಣದಲ್ಲಿ ಈ ಒಲೆ ತಯಾರಿಕೆಗೆ ಕರೆ
– LPG ಯಂತೆ ಜ್ವಾಲೆ ಹರಡುವ ಸ್ಟೌ ಇದು

ನವದೆಹಲಿ: ಮಧ್ಯಪ್ರಾಚ್ಯ ಯುದ್ಧ ಪರಿಣಾಮ ಗ್ಯಾಸ್, ಪೆಟ್ರೋಲಿಯಂ ಉತ್ಪನ್ನಗಳಿಲ್ಲದೆ ಜಗತ್ತೇ ತತ್ತರಿಸುತ್ತಿದ್ದರೆ, ಇತ್ತ ಭಾರತ ಹೊಸ ಹೊಸ ತಂತ್ರಜ್ಞಾನ, ಆವಿಷ್ಕಾರದೊಂದಿಗೆ ಒಂದೊಂದೇ ಸ್ವಾವಲಂಬನೆ ಹೆಜ್ಜೆ ಇರಿಸುತ್ತಿದೆ.

ಇಂಧನ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರ ಸಲಹೆಯಂತೆ ಕೇಂದ್ರ ಸರ್ಕಾರ ದೇಶದೆಲ್ಲೆಡೆ 50 ಲಕ್ಷ PNG ಸಂಪರ್ಕಕ್ಕೆ ಪ್ರಾಶಸ್ತ್ಯ ನೀಡಿದ ಬೆನ್ನಲ್ಲೇ ಇದೀಗ ಗ್ಯಾಸ್ ಸ್ಟೌ ಮಾದರಿಯಲ್ಲೇ ಜ್ವಾಲೆ ಹರಡುವ ‌’ವಿದ್ಯುತ್ ಸ್ಟೌ’ ಅನ್ನು ಪರಿಚಯಿಸಿ ಅದರ ಉತ್ಪಾದನೆಗೆ ಆದ್ಯತೆ ನೀಡುವ ಚಿಂತನೆ ಸಹ ನಡೆಸುತ್ತಿದೆ. ಇದನ್ನೂ ಓದಿ: ಭಾರತ ತಲುಪಿದ ʻಗ್ರೀನ್ ಆಶಾʼ – 15,000 ಟನ್ LPG ಹೊತ್ತು ತಂದ ನೌಕೆ

ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಆಗಿರುವ ಪ್ರಹ್ಲಾದ್ ಜೋಶಿ ಅವರು LPG ಇಲ್ಲದೆ ಜ್ವಾಲೆಯನ್ನು ಉತ್ಪಾದಿಸುವ ವಿನೂತನ ಮಾದರಿ, ತಂತ್ರಜ್ಞಾನದ ವಿದ್ಯುತ್ ಸ್ಟೌ ಅನ್ನು ಪ್ರದರ್ಶಿಸಿ, ಪರಿಚಯಿಸಿದ್ದಾರೆ. ಗ್ಯಾಸ್ ಸ್ಟೌ ರೀತಿಯೇ ಜ್ವಾಲೆ ಹರಡುವ ಈ ವಿದ್ಯುತ್ ಸ್ಟೌ ನೋಡಿ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಇದರ ಉತ್ಪಾದನೆಗೆ ಸಿದ್ಧತೆ ನಡೆಸುವಂತೆ ಗಮನ ಸೆಳೆದಿದ್ದಾರೆ.

ಎಲ್‌ಪಿಜಿಯ ಅಗತ್ಯವಿಲ್ಲದೆ ಅನಿಲದಂತೆ ಉರಿಯುವ ಶುದ್ಧ ಇಂಧನ ಮೂಲವನ್ನು ಅರಸುತ್ತಿದ್ದ ಭಾರತಿಯರಿಗೆ ಇದೀಗ ಎಲ್‌ಪಿಜಿಯಂತೆ ಜ್ವಾಲೆ ಹರಡುವ ಈ ವಿದ್ಯುತ್ ಸ್ಟೌ ಅಡುಗೆ ಅನಿಲದ ಕೊರತೆ ನೀಗಿಸುವ ಆಶಾಭಾವನೆ ಮೂಡಿಸಿದೆ. ಹೋಟೆಲ್, ಬೇಕರಿ ಮುಂತಾದ ಆಹಾರೋದ್ಯಮಿಗಳಿಗೆ ಒಂದು ಪರ್ಯಾಯ ಇಂಧನ ಮೂಲದ ಒಲೆಯಾಗಿ ಕಾಣಿಸುತ್ತಿದೆ. ಎಲ್‌ಪಿಜಿ ಬಳಸದೆ ಜ್ವಾಲೆಯನ್ನು ಉತ್ಪಾದಿಸುವ ಈ ಸ್ಟೌವ್ ಅಂದುಕೊಂಡಂತೆ ಭಾರತದಲ್ಲೇ ದೊಡ್ಡ ಮಟ್ಟದಲ್ಲಿ ತಯಾರಾದರೆ ಪ್ರಧಾನಿ ನರೇಂದ್ರ ಮೋದಿ ಅವರ ‘ಆತ್ಮನಿರ್ಭರ ಭಾರತ’ ಸಾಕಾರಕ್ಕೆ ಮತ್ತೊಂದು ಗರಿ ಎನ್ನುತ್ತಾರೆ ಸಚಿವ ಜೋಶಿ.

ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಹ್ಲಾದ್ ಜೋಶಿ ಅವರು, ಈ ಜ್ವಾಲೆ ಉತ್ಪಾದಿಸುವ ವಿದ್ಯುತ್ ಸ್ಟೌ ಪ್ರದರ್ಶಿಸಿ, ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಗೆ ಸೂಕ್ತವಾಗುವಂತೆ ವಿವಿಧ ಮಾದರಿಗಳಲ್ಲಿ ಈ ವಿನೂತನ ವಿದ್ಯುತ್ ಸ್ಟೌ ತಯಾರಿಸಿ ಪೂರೈಸಬೇಕಿದೆ ಎಂದಿದ್ದಾರೆ.

ಏನಿದರ ವಿಶೇಷತೆ?
ವಿದ್ಯುತ್ ಚಾಲಿತ ಈ ಸ್ಟೌವ್‌ನಲ್ಲಿ LPG ಇಲ್ಲದೆಯೇ ಗ್ಯಾಸ್ ಒಲೆಯಂತೆಯೇ ಜ್ವಾಲೆ ಉತ್ಪಾದನೆ ಆಗುತ್ತದೆ. ಹೆಚ್ಚು ಶಾಖವೂ ಇರುತ್ತದೆ. ಮಾತ್ರವಲ್ಲದೆ, ಕಾರ್ಬನ್ ಸಹ ಹೊರ ಸೂಸುವುದಿಲ್ಲ. ನಿಜವಾಗಿ ನಾನು ಸಹ ಈ ಹೊಸ ತಂತ್ರಜ್ಞಾನದಿಂದ ಪ್ರಭಾವಿತನಾಗಿದ್ದೇನೆ ಎಂದಿದ್ದಾರೆ ಜೋಶಿ. ‘ಭಾರತೀಯ ತಯಾರಕರು ಈ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಎಲ್‌ಪಿಜಿ ರಹಿತ, ವಿದ್ಯುತ್ ಜ್ವಾಲೆ ಹರಡುವ ನೂತನ ಒಲೆಯನ್ನು ದೇಶದೊಳಗೆ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬೇಕೆಂದು’ ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಪ್ರಮುಖ ವಲಯಗಳಿಗೆ ಹೆಚ್ಚಿನ ಎಲ್‌ಪಿಜಿ ಹಂಚಿಕೆ ಮಾಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ

ಸೂರ್ಯ ಘರ್ ಜತೆ ಸಂಯೋಜನೆ ಅಗತ್ಯ
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಜತೆ ಈ ಸ್ಟೌ ಸಂಯೋಜಿಸಿದರೆ ಎಲ್‌ಪಿಜಿ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಇದರಿಂದ ದೇಶಾದ್ಯಂತ ಒಂದು ಮಹತ್ತರ ಬದಲಾವಣೆ ತರಬಹುದು ಎಂದು ಅಭಿಪ್ರಾಯಿಸಿದ್ದಾರೆ ಸಚಿವರು. Lpg ಗೆ ಪರ್ಯಾಯವಾಗಿ ದೇಶದಲ್ಲಿ ಮತ್ತೊಂದು ತಂತ್ರಜ್ಞಾನದ ಬಗ್ಗೆಯೂ ಚರ್ಚೆ ನಡೆದಿದೆ. LPG ಕೊರತೆ ಮತ್ತು ಬೆಲೆ ಏರಿಕೆ ಪರಿಣಾಮ ಹೈಡ್ರೋಜನ್ ಅಡುಗೆ ಘಟಕದ ಬಗ್ಗೆಯೂ ವ್ಯಾಪಕ ಚಿಂತನೆ ನಡೆದಿದೆ. ನೀರಿನಿಂದ ಅನಿಲ ಉತ್ಪಾದಿಸುವ ವಿಧಾನ ಇದಾಗಿದೆ.

TAGGED:Electric StoveIran WarlpgLPG StovePralhad Joshiಎಲ್‌ಪಿಜಿ ಸ್ಟೌಪ್ರಹ್ಲಾದ್ ಜೋಶಿವಿದ್ಯುತ್‌ ಸ್ಟೌ
Share This Article
Facebook Whatsapp Whatsapp Telegram

Cinema news

Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories

You Might Also Like

Nikhil Kumaraswamy
Bengaluru City

ಹಣೆಬರಹದಲ್ಲಿ ಎಲ್ಲಿ ಬರೆದಿದ್ಯೋ ಅಲ್ಲಿಂದ ಮುಂದಿನ ಚುನಾವಣೆಗೆ ಸ್ಪರ್ಧೆ – ನಿಖಿಲ್ ಕುಮಾರಸ್ವಾಮಿ

Public TV
By Public TV
11 minutes ago
zameer ahmed
Bengaluru City

ದಾವಣಗೆರೆಯಲ್ಲಿ ಪ್ರಚಾರಕ್ಕೆ ನಕಾರ – ಸಚಿವ ಜಮೀರ್ ಅಹ್ಮದ್ ಸೇರಿ ಮೂವರ ವಿರುದ್ಧ ಹೈಕಮಾಂಡ್‌ಗೆ ದೂರು

Public TV
By Public TV
31 minutes ago
Kamal Kaur Bhabhi Murder Case
Crime

ಸೋಷಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ ಕೊಲೆ ಕೇಸ್‌ – ದೆಹಲಿ ಏರ್‌ಪೋರ್ಟ್‌ನಲ್ಲಿ ಆರೋಪಿ ಬಂಧನ

Public TV
By Public TV
39 minutes ago
school children22
Bagalkot

1ನೇ ತರಗತಿ ದಾಖಲಾತಿಗೆ 60 ದಿನಗಳ ವಿನಾಯಿತಿ – ರಾಜ್ಯ ಸರ್ಕಾರ ಅಧಿಕೃತ ಆದೇಶ

Public TV
By Public TV
51 minutes ago
Hulikal Ghat Cm Compensation
Districts

ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ – ಮೃತ ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ

Public TV
By Public TV
1 hour ago
murder case accused karwar
Latest

ಆಸ್ತಿಯಲ್ಲಿ ಪಾಲು ಕೇಳಿದ ವ್ಯಕ್ತಿಯ ಕೊಲೆ ಕೇಸ್‌ – ಮೂವರಿಗೆ ಜೀವಾವಧಿ ಶಿಕ್ಷೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?