Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ದೇಶದಲ್ಲೇ ಫಸ್ಟ್‌| ಬೆಂಗ್ಳೂರು ಏರ್ಪೋರ್ಟ್‌ನಲ್ಲಿ ಇಂಡಿಗೋ ʻಡಿಜಿ ಯಾತ್ರಾʼ – ಸ್ಪರ್ಶರಹಿತ ಪ್ರಯಾಣಕ್ಕೆ ಯಶಸ್ವಿ ತಾಂತ್ರಿಕ ಪ್ರಯೋಗ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkaballapur | ದೇಶದಲ್ಲೇ ಫಸ್ಟ್‌| ಬೆಂಗ್ಳೂರು ಏರ್ಪೋರ್ಟ್‌ನಲ್ಲಿ ಇಂಡಿಗೋ ʻಡಿಜಿ ಯಾತ್ರಾʼ – ಸ್ಪರ್ಶರಹಿತ ಪ್ರಯಾಣಕ್ಕೆ ಯಶಸ್ವಿ ತಾಂತ್ರಿಕ ಪ್ರಯೋಗ

Chikkaballapur

ದೇಶದಲ್ಲೇ ಫಸ್ಟ್‌| ಬೆಂಗ್ಳೂರು ಏರ್ಪೋರ್ಟ್‌ನಲ್ಲಿ ಇಂಡಿಗೋ ʻಡಿಜಿ ಯಾತ್ರಾʼ – ಸ್ಪರ್ಶರಹಿತ ಪ್ರಯಾಣಕ್ಕೆ ಯಶಸ್ವಿ ತಾಂತ್ರಿಕ ಪ್ರಯೋಗ

Public TV
Last updated: April 9, 2026 6:22 pm
Public TV
Share
3 Min Read
BENGALURU AIRPORT 8
SHARE

ಚಿಕ್ಕಬಳ್ಳಾಪುರ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Bengaluru Airport) ಲಿಮಿಟೆಡ್, ಇಂಡಿಗೋ ವಿಮಾನಯಾನ ಸಂಸ್ಥೆ, ʻಡಿಜಿ ಯಾತ್ರಾʼ ಪ್ರತಿಷ್ಠಾನ ಹಾಗೂ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆ ಸಹಭಾಗಿತ್ವದಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರಿನಲ್ಲಿ ಟಿಕೆಟ್ ಬುಕ್ಕಿಂಗ್‌ನಿಂದ ಹಿಡಿದು ಪ್ರಯಾಣ ನಿರ್ವಹಣೆ ಹಾಗೂ ಬಯೋಮೆಟ್ರಿಕ್ ಆಧಾರಿತ ಸ್ಪರ್ಶರಹಿತ ಪ್ರಯಾಣದವರೆಗೆ ಸಮಗ್ರ ಅಂತಾರಾಷ್ಟ್ರೀಯ ಪ್ರಯಾಣ ಪ್ರಕ್ರಿಯೆಯನ್ನು ತಾಂತ್ರಿಕ ಪ್ರಯೋಗಗಳ ಮೂಲಕ ಯಶಸ್ವಿಯಾಗಿ ಪ್ರದರ್ಶಿಸಲಾಗಿದೆ.

ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆದ ಈ ವಿನೂತನ ಪ್ರಯೋಗವು ಜಾಗತಿಕ ಮಟ್ಟದಲ್ಲಿ ಅಂತಾರಾಷ್ಟ್ರೀಯ ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಗಳ ಸಾಧ್ಯತೆ ಪರಿಶೀಲನೆಗಾಗಿ ಕೈಗೊಳ್ಳಲಾಗುತ್ತಿರುವ ಮಹತ್ವದ ಹಂತವಾಗಿದೆ. ಈ ವರ್ಷ ಆರಂಭದಲ್ಲಿ ಇಂಡಿಗೋ ಹಾಗೂ ಡಿಜಿ ಯಾತ್ರಾ ಪ್ರತಿಷ್ಠಾನವು ಬಯೋಮೆಟ್ರಿಕ್ ತಂತ್ರಜ್ಞಾನ ಆಧಾರಿತ ಸ್ವಯಂ-ಗುರುತು ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತಂದು, ಪ್ರಯಾಣಿಕರ ಮಾಹಿತಿಯನ್ನು ಅಪ್ಲಿಕೇಶನ್‌ಗಳ ನಡುವೆ ಸುಗಮವಾಗಿ ಹಂಚಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಿತ್ತು. ಈ ಯಶಸ್ಸಿನ ಮುಂದುವರಿದ ಹಂತವಾಗಿ, ಬಿಐಎಎಲ್ ಸಹಯೋಗದಲ್ಲಿ ಇದೇ ತಂತ್ರಜ್ಞಾನವನ್ನು ಅಂತಾರಾಷ್ಟ್ರೀಯ ಪ್ರಯಾಣಕ್ಕೂ ವಿಸ್ತರಿಸುವ ಸಾಧ್ಯತೆಯನ್ನು ಈ ಪ್ರಯೋಗ ತೋರಿಸಿವೆ. ಇದು ಸಂಪೂರ್ಣ ಪ್ರಮಾಣದಲ್ಲಿ ಜಾರಿಗೆ ತರುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

Bengaluru Airports Terminal 2 Makes It To UNESCO Worlds Most Beautiful Airports List 2023

ವಿದೇಶಿ ಪ್ರಯಾಣಿಕರಿಗೂ ಡಿಜಿ ಯಾತ್ರಾ
ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ದೇಶೀಯ ಪ್ರಯಾಣಿಕರಿಗಾಗಿ ಡಿಜಿ ಯಾತ್ರಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದು, ಸುರಕ್ಷಿತ ಮತ್ತು ಸುಗಮ ಪ್ರಯಾಣಕ್ಕೆ ಮಾನದಂಡಗಳನ್ನು ನಿರ್ಮಿಸಿದೆ. ಅಂತಾರಾಷ್ಟ್ರೀಯ ಪ್ರಯಾಣಿಕರ ಸಂಖ್ಯೆಯು ಹೆಚ್ಚುತ್ತಿರುವ ಹಿನ್ನೆಲೆ, ಇದೀಗ ಈ ಬಯೋಮೆಟ್ರಿಕ್ ಆಧಾರಿತ ಸ್ಪರ್ಶರಹಿತ ವ್ಯವಸ್ಥೆಯನ್ನ ಅಂತಾರಾಷ್ಟ್ರೀಯ ಮಟ್ಟಕ್ಕೂ ವಿಸ್ತರಿಸುವತ್ತ ಮುಂದಾಗಿದೆ. ಇದರೊಂದಿಗೆ ಜಾಗತಿಕ ಮಟ್ಟದ ಈ ಯೋಜನೆಯಲ್ಲಿ ಭಾಗವಹಿಸುತ್ತಿರುವ ಭಾರತದ ಏಕೈಕ ವಿಮಾನ ನಿಲ್ದಾಣವಾಗಿ ಇದು ಗುರುತಿಸಿಕೊಂಡಿದೆ. ಈ ಕುರಿತು ಮಾತನಾಡಿದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ನ ಮುಖ್ಯ ತಾಂತ್ರಿಕ ಅಧಿಕಾರಿ ಜಾರ್ಜ್ ಫಾಂಥೋಮ್ ಅವರು, ʻಬಯೋಮೆಟ್ರಿಕ್ ಆಧಾರಿತ ಪ್ರಯಾಣ ವ್ಯವಸ್ಥೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ಪ್ರಯಾಣಿಕರಿಗೆ ಸುಗಮ, ಸುರಕ್ಷಿತ ಹಾಗೂ ತಂತ್ರಜ್ಞಾನ ಆಧಾರಿತ ಅನುಭವ ಒದಗಿಸುವುದು ನಮ್ಮ ಗುರಿಯಾಗಿದೆ. ಈ ತಾಂತ್ರಿಕ ಪ್ರಯೋಗಗಳು ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯನ್ನು ವ್ಯಾಪಕವಾಗಿ ಜಾರಿಗೆ ತರಲು ನೆರವಾಗಲಿವೆʼ, ಎಂದು ಹೇಳಿದರು.

ಇಂಡಿಗೋ ಸಂಸ್ಥೆಯ ಡಿಜಿಟಲ್ ಮತ್ತು ಮಾಹಿತಿ ವಿಭಾಗದ ಮುಖ್ಯಸ್ಥ ನೀತನ್ ಚೋಪ್ರಾ ಅವರು ಮಾತನಾಡಿ, ʻತಂತ್ರಜ್ಞಾನ ಮತ್ತು ಪ್ರಯಾಣಿಕರ ಅನುಭವ ಒಟ್ಟುಗೂಡಿಸುವ ಮೂಲಕ ಭವಿಷ್ಯದ ವಿಮಾನ ಪ್ರಯಾಣವನ್ನ ರೂಪಿಸುವತ್ತ ನಾವು ಬದ್ಧರಾಗಿದ್ದೇವೆ. ಡಿಜಿಟಲ್ ಗುರುತು ಹಾಗೂ ಬಯೋಮೆಟ್ರಿಕ್ ತಂತ್ರಜ್ಞಾನ ಬಳಸಿ ಸ್ಪರ್ಶರಹಿತ ಪ್ರಯಾಣವನ್ನು ಸಾಧ್ಯವಾಗಿಸುವಲ್ಲಿ ಈ ಪ್ರಯೋಗಗಳು ಮಹತ್ವದ ಸಾಧನೆಯಾಗಿವೆʼ, ಎಂದು ಹೇಳಿದರು.

Bengaluru Kempegowda International Airport 4

ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಘಟನೆಯ ಮಾಹಿತಿ ಮತ್ತು ದತ್ತಾಂಶ ವಿಭಾಗದ ಮುಖ್ಯಸ್ಥ ಕಿಮ್ ಮಕಾಲೇ ಅವರು ಮಾತನಾಡಿ, ʻಭಾರತವು ಡಿಜಿಟಲ್ ಹಾಗೂ ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯಲ್ಲಿ ಜಾಗತಿಕ ನಾಯಕತ್ವದತ್ತ ಸಾಗುತ್ತಿದೆ. ಇಂಡಿಗೋ, ಡಿಜಿ ಯಾತ್ರಾ ಮತ್ತು ಬೆಂಗಳೂರು ವಿಮಾನ ನಿಲ್ದಾಣದ ಸಹಭಾಗಿತ್ವವು ಜಾಗತಿಕ ಮಟ್ಟದಲ್ಲಿ ಅನುಸರಿಸಬಹುದಾದ ಮಾದರಿಯನ್ನು ನಿರ್ಮಿಸಿದೆʼ, ಎಂದು ಹೇಳಿದರು.

ಡಿಜಿ ಯಾತ್ರಾ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಖಡಕ್‌ಭಾವಿ ಅವರು ಮಾತನಾಡಿ, ʻಪ್ರಯಾಣಿಕರ ಗುರುತನ್ನು ಮುಂಚಿತವಾಗಿ ದೃಢೀಕರಿಸಿ, ಮುಖದ ಗುರುತಿನ ಮೂಲಕ ಸಂಪೂರ್ಣ ಪ್ರಯಾಣ ಪ್ರಕ್ರಿಯೆಯನ್ನ ನಿರ್ವಹಿಸುವ ವ್ಯವಸ್ಥೆಯನ್ನ ನಾವು ಯಶಸ್ವಿಯಾಗಿ ಪ್ರದರ್ಶಿಸಿದ್ದೇವೆ. ಇದು ಸುರಕ್ಷತೆ, ವೇಗ ಮತ್ತು ಸುಗಮತೆಯನ್ನು ಒಟ್ಟುಗೂಡಿಸುವ ಭವಿಷ್ಯದ ಪ್ರಯಾಣ ಮಾದರಿಯಾಗಿದೆʼ ಎಂದು ಹೇಳಿದರು.

ಈ ತಾಂತ್ರಿಕ ಪ್ರಯೋಗವು ಡಿಜಿಟಲ್ ಗುರುತು, ದತ್ತಾಂಶ ಸುರಕ್ಷತೆ ಹಾಗೂ ಜಾಗತಿಕ ಮಾನದಂಡಗಳಿಗೆ ಹೊಂದಿಕೊಳ್ಳುವ ಸ್ಪರ್ಶರಹಿತ ಪ್ರಯಾಣ ವ್ಯವಸ್ಥೆಯನ್ನು ರೂಪಿಸುವತ್ತ ಮಹತ್ವದ ಹೆಜ್ಜೆಯಾಗಿದೆ. ಮುಂದಿನ ದಿನಗಳಲ್ಲಿ ಈ ವ್ಯವಸ್ಥೆಯನ್ನು ಹೆಚ್ಚಿನ ವಿಮಾನ ನಿಲ್ದಾಣಗಳಿಗೆ ವಿಸ್ತರಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಉದ್ದೇಶ ಹೊಂದಿದೆ.

TAGGED:bengaluru airportBiometricDigi Yatraಡಿಜಿ ಯಾತ್ರಾಬಯೋಮೆಟ್ರಿಕ್ಬೆಂಗಳೂರು ಏರ್‌ಪೋರ್ಟ್‌
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

Yelahanka Suicide
Bengaluru City

ಪ್ರೀತಿ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆ

Public TV
By Public TV
35 minutes ago
IMF
Latest

Iran-US-Israel War | ಮಧ್ಯಪ್ರಾಚ್ಯ ಯುದ್ಧಕ್ಕೆ 4.62 ಲಕ್ಷ ಕೋಟಿ ಡಾಲರ್‌ ನೆರವು ಅಗತ್ಯ: ಐಎಂಎಫ್‌

Public TV
By Public TV
49 minutes ago
lebanon
Latest

ಕದನ ವಿರಾಮವಿದ್ದರೂ ಲೆಬನಾನ್ ಮೇಲೆ ಭಯಾನಕ ದಾಳಿ – ಪಾಕ್ ಸಂಧಾನ ಸಭೆ ನಡೆಯೋದೇ ಡೌಟ್!

Public TV
By Public TV
1 hour ago
Voting
Latest

Assembly Elections – ಕೇರಳದಲ್ಲಿ 75%, ಪುದುಚೇರಿಯಲ್ಲಿ 86.92% & ಅಸ್ಸಾಂನಲ್ಲಿ 84.42% ಮತದಾನ

Public TV
By Public TV
1 hour ago
baithkol port karwar
Latest

ಕಾರವಾರದಲ್ಲಿ ಮೀನುಗಾರಿಕಾ ಚಟುವಟಿಕೆ ಸಂಪೂರ್ಣ ಸ್ತಬ್ಧ

Public TV
By Public TV
2 hours ago
By Poll
Bagalkot

ಬೈ ಎಲೆಕ್ಷನ್ ಅಖಾಡದಲ್ಲಿ ಕುರುಡು ಕಾಂಚಾಣ – ಬಾಗಲಕೋಟೆಯಲ್ಲಿ 65.68%, ದಾವಣಗೆರೆಯಲ್ಲಿ 63.04% ಮತದಾನ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?