ನೆಲಮಂಗಲ: ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ವಿದ್ಯಾರ್ಥಿನಿ 600ಕ್ಕೆ 597 ಅಂಕ ಗಳಿಸುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ನೆಲಮಂಗಲ ಹೊಯ್ಸಳ ಪಿಯು ಕಾಲೇಜಿನ ವಿದ್ಯಾರ್ಥಿನಿ (Hoysala PU College Student) ಬಿಂದು ಎ. ವಿಜ್ಞಾನ ವಿಭಾಗದಲ್ಲಿ 600ಕ್ಕೆ 597 ಅಂಕ ಗಳಿಸುವ ಮೂಲಕ ಕಾಲೇಜಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಬಡ ಕುಟುಂಬದಲ್ಲಿ ಹುಟ್ಟಿ ಸಾಧನೆ ಮಾಡುವ ಮೂಲಕ ತಂದೆ ತಾಯಿ, ಕಾಲೇಜು, ಇಡೀ ತಾಲೂಕಿನ ಕೀರ್ತಿ ತಂದಿದ್ದಾರೆ. ಇದನ್ನೂ ಓದಿ: 2nd PUC Result | ದಕ್ಷಿಣ ಕನ್ನಡದ ದಿಶಾ ರಾಜ್ಯಕ್ಕೆ ಪ್ರಥಮ – 600ಕ್ಕೆ 600 ಅಂಕ

ತಂದೆ ಅಶೋಕ್ ಸಿ ಎಲೆಕ್ಟ್ರಿಶನ್ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದು, ನೆಲಮಂಗಲ ನಗರದ ಸುಭಾಷ್ ನಗರದಲ್ಲಿ ವಾಸವಾಗಿದ್ದಾರೆ. ಇನ್ನೂ ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಮಾಡಿ ಟಾಫರ್ ಆದ ಬಿಂದು ಈ ಸಂತಸವನ್ನ ʻಪಬ್ಲಿಕ್ ಟಿವಿʼ ಜೊತೆಗೆ ಹಂಚಿಕೊಂಡಿದ್ದಾರೆ. ಕಾಲೇಜು ಆಡಳಿತ ಮಂಡಳಿ ಹಾಗೂ ಉಪನ್ಯಾಸಕ ವರ್ಗ ವಿದ್ಯಾರ್ಥಿಯನ್ನ ಗೌರವಿಸಿ ಸನ್ಮಾನಿಸಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ಪುದುಚೇರಿ ವಾಹನ ನೋಂದಣಿಗೆ 2 ಕೋಟಿ ದಂಡ

