ನವದೆಹಲಿ: ದೆಹಲಿ ವಿಧಾನಸಭೆಯನ್ನು (Delhi Assembly) ಸ್ಫೋಟಿಸುವುದಾಗಿ ಇಮೇಲ್ ಮೂಲಕ ಮತ್ತೆ ಬಾಂಬ್ ಬೆದರಿಕೆ (Bomb Threat) ಬಂದಿದೆ.
ಈ ಹಿಂದೆ ವಿಧಾನಸಭೆಯಲ್ಲಿ ಬಿಜೆಟ್ ಅಧಿವೇಶನ ನಡೆಯುತ್ತಿದ್ದ ವೇಳೆಯೂ ಬಾಂಬ್ ಬೆದರಿಕೆ ಬಂದಿತ್ತು. ಇಂದು (ಏ.9) ಬೆಳಗ್ಗೆ 8:14ಕ್ಕೆ ವಿಧಾನಸಭೆಗೆ ಸಂಬಂಧಿಸಿದ ಹಲವು ಸರ್ಕಾರಿ ಮತ್ತು ಇತರ ಇನ್ಬಾಕ್ಸ್ಗಳಿಗೆ ಸಂದೇಶ ಬಂದಿತ್ತು. ಈ ಇಮೇಲ್ನಲ್ಲಿ ಇಂದು ಯಾವುದೇ ಸಮಯದಲ್ಲಾದರೂ ವಿಧಾನಸಭೆ, ಸಚಿವಾಲಯ, ಕೆಲ ಶಾಲೆಗಳು ಮತ್ತು ಯಾವುದಾದರೊಂದು ಮೆಟ್ರೋ ಸ್ಟೇಷನ್ಗಳಲ್ಲಿ ಸ್ಫೋಟಗಳಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದೆ. ಆದರೆ ಸ್ಫೋಟಕಗಳ ವಿವರ, ನಿಖರ ಸಮಯ ಅಥವಾ ಬೇರೆ ಯಾವುದೇ ನಿರ್ದಿಷ್ಟ ಮಾಹಿತಿ ಉಲ್ಲೇಖಿಸಿಲ್ಲ. ಇದನ್ನೂ ಓದಿ: ಆಟೋ ಚಾಲಕರ ಕಷ್ಟಕ್ಕೆ ಮಿಡಿದ ನಟ ವಿನೋದ್ ರಾಜ್
ಬೆದರಿಕೆ ಮಾಹಿತಿ ಬಂದ ತಕ್ಷಣ ದೆಹಲಿ ಪೊಲೀಸರು ತ್ವರಿತ ಕ್ರಮ ಕೈಗೊಂಡಿದ್ದಾರೆ. ಬಾಂಬ್ ನಿಷ್ಕ್ರೀಯ ತಂಡಗಳೊಂದಿಗೆ ವಿಧಾನಸಭೆ ಪರಿಸರ, ಸಚಿವಾಲಯ, ಶಾಲೆಗಳು ಮತ್ತು ಮೆಟ್ರೋ ಸ್ಟೇಷನ್ಗಳಲ್ಲಿ ತಪಾಸಣೆ ಮಾಡಲಾಗಿದೆ. ಈ ಘಟನೆಯ ನಂತರ ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಹೆಚ್ಚಿಸಲಾಗಿದೆ.

