Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆಯನ್ನ ತಿಹಾರ್ ಜೈಲಿಗೆ ಹಾಕಬೇಕು: ಛಲವಾದಿ ನಾರಾಯಣಸ್ವಾಮಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆಯನ್ನ ತಿಹಾರ್ ಜೈಲಿಗೆ ಹಾಕಬೇಕು: ಛಲವಾದಿ ನಾರಾಯಣಸ್ವಾಮಿ

Bengaluru City

ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆಯನ್ನ ತಿಹಾರ್ ಜೈಲಿಗೆ ಹಾಕಬೇಕು: ಛಲವಾದಿ ನಾರಾಯಣಸ್ವಾಮಿ

Public TV
Last updated: April 8, 2026 4:48 pm
Public TV
Share
3 Min Read
Chalavadi Narayaswamy
SHARE

ಬೆಂಗಳೂರು: BJP-RSS ಅವರನ್ನ ಕೊಲ್ಲಬೇಕು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಅವರನ್ನ ಸಮರ್ಥನೆ ಮಾಡಿಕೊಂಡ ಪುತ್ರ ಪ್ರಿಯಾಂಕ್ ಖರ್ಗೆ (Priyank Kharge) ಅವರನ್ನು ತಿಹಾರ್ ಜೈಲಿಗೆ ಹಾಕಬೇಕು ಅಂತ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಒತ್ತಾಯ ಮಾಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ BJP-RSS ಅವರನ್ನ ಕೊಲ್ಲಿ ಅಂತ ಹೇಳಿದ್ದಾರೆ. ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಅವರಿಗೆ ಹಿಡಿಶಾಪ ಹಾಕ್ತಿದ್ದಾರೆ. ಖರ್ಗೆ ಕುರಾನ್‌ನಲ್ಲಿ ಇರುವ ಒಂದು ವಿಷಯ ಪ್ರಸ್ತಾಪ ಮಾಡಿದ್ದಾರೆ. ವಿಷಕಾರಿ ಹಾವನ್ನು ಸಾಯಿಸಬೇಕು ಅಂತ ಹೇಳಿದ್ದಾರೆ. BJP-RSS ವಿಷಕಾರಿ ಹಾವು ಅಂದಿದ್ದಾರೆ. ಅವರೇನು ನೋಡಿದ್ದಾರಾ? ಖರ್ಗೆ ನಾಲಿಗೆ ಹದ್ದುಬಸ್ತಿನಲ್ಲಿ ಇರಬೇಕಿತ್ತು. ನಿಮಗೆ ಅರಳು-ಮರಳೋ ಅಥವಾ ಮಾನಸಿಕ ಆರೋಗ್ಯ ಕೆಟ್ಟಿದೆಯಾ? ಇದು ದ್ವೇಷ ಭಾಷಣ ಆಗುತ್ತದೆ. ಕರ್ನಾಟಕದಲ್ಲಿ ದ್ವೇಷ ಭಾಷಣ ಬಿಲ್ ಪಾಸ್ ಆಗಿದೆ. ಬಿಜೆಪಿ ಈಗಾಗಲೇ ಖರ್ಗೆ ವಿರುದ್ಧ ದೂರು ಕೊಟ್ಟಿದ್ದಾರೆ. ರಜಾಕಾರರ ನಮ್ಮ ಕುಟುಂಬದವರನ್ನ ಕೊಂದರು ಅಂತ ಖರ್ಗೆ ಹೇಳಿದ್ರು. ನಿಮಗೆ ಯಾರ ಮೇಲೆ ಕೋಪ ಇರಬೇಕಿತ್ತು? ರಜಾಕಾರರ ಮೇಲೆ ಕೋಪ ಇರಬೇಕಿತ್ತು. ಆದರೆ, ಅವರನ್ನ ಎತ್ತಿಕಟ್ಟಿ BJP-RSS ಕೊಲ್ಲಬೇಕು ಅಂತೀರಾ. ನಾಚಿಕೆ ಆಗೊಲ್ಲವಾ ಎಂದು ಕಿಡಿಕಾರಿದರು. ಇದನ್ನೂ ಓದಿ: ಗುಜರಾತಿಗಳು ಅನಕ್ಷರಸ್ಥರು ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ ಖರ್ಗೆ

Mallikarjun Kharge 2

ನಿಮ್ಮ ತಂದೆ ನಿಮಗೆ ದನ ಕಾದು ಅಕ್ಷರ ಕಲಿಸಿ ವಿದ್ಯೆ ಕೊಟ್ಟರು. ಅವರನ್ನ ನೀವು ಮನೆಗೆ ಸೇರಿಸಿಲ್ಲ ಅಂತ ಅನೇಕರು ಹೇಳ್ತಾರೆ. BJP-RSS ನಿಮಗೆ ಏನು ಮಾಡಿದೆ? ಯಾರನ್ನು ಮೆಚ್ಚಿಸಲು ಹೇಳಿಕೊಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪ್ರಿಯಾಂಕ್ ಖರ್ಗೆ ಅಪ್ಪನನ್ನ ಡಿಫೆಂಡ್ ಮಾಡಿಕೊಂಡಿದ್ದಾರೆ. ಅಸ್ಸಾಂ ಸಿಎಂ ಬಗ್ಗೆ ಬ್ರಾಹ್ಮಣರು ಅಂತಿದ್ದಾರೆ. ಬ್ರಾಹ್ಮಣ ಯಾರು ಹೀಗೆ ಮಾತಾಡೊಲ್ಲ. ನೀವು ಹೀಗೆ ಮಾತಾಡೋದಕ್ಕೆ ನಿಮ್ಮ ಮನೆಯಲ್ಲಿ ಇರೋ ಬ್ರಾಹ್ಮಣರು ಹೇಳಿಕೊಟ್ರಾ? ನಿಮ್ಮ ಮನೆ ತುಂಬ ಬ್ರಾಹ್ಮಣರು ತುಂಬಿಕೊಂಡು ನಮ್ಮದು ದಲಿತ ರಕ್ತ ಅಂತ ಯಾಕೆ ಬೊಗಳುತ್ತೀರಾ? ನಿಮ್ಮ ಮನೆಗೆ ಬ್ರಾಹ್ಮಣರನ್ನ ಮದುವೆ ಮಾಡಿಕೊಂಡು ಬಂದು, ನಿಮ್ಮ ಮಕ್ಕಳನ್ನು ಬ್ರಾಹ್ಮಣರಿಗೆ ಕೊಟ್ಟಿದ್ದೀರಾ. ಮುಸ್ಲಿಮರ ಮೇಲೆ ಪ್ರೀತಿ ಇದ್ದರೆ ನೀವು ಮುಸ್ಲಿಮರನ್ನ ಮದುವೆ ಆಗಬಹುದಿತ್ತು. ನಿಮ್ಮ ಹೆಣ್ಣು ಮಕ್ಕಳನ್ನು ಮುಸ್ಲಿಮರಿಗೆ ಕೊಡಬಹುದಿತ್ತು ಯಾಕೆ ಕೊಡಲಿಲ್ಲ. ಯಾರು ತಡೆದರು. ಅಪ್ಪ-ಮಗನ ಮನಸ್ಥಿತಿ ಒಂದೇ ಆಗಿದೆ. ಇವರ ಸಪೋರ್ಟ್‌ಗೆ ಕಾಂಗ್ರೆಸ್‌‌ನಲ್ಲಿ ಯಾರು ಬಂದಿಲ್ಲ. ವೈಯಕ್ತಿಕ ಹೇಳಿಕೆ ರೀತಿ ಇವರನ್ನ ನೆಗ್ಲೆಟ್ ಮಾಡಿದ್ದಾರೆ. ತಮ್ಮನ್ನ ಯಾವು ಹೆಚ್ಚಿಗೆ ಕಾಣಿಸಿಕೊಳ್ಳಬೇಕು ಅಂತ ಹೀಗೆ ಮಾತಾಡಿದ್ದಾರೆ. ಇವರ ತಲೆಯಲ್ಲಿ ವಿಷಕಾರಿ ಹಾವಿಗಿಂತ ಹೆಚ್ಚು ವಿಷ ಇವರಿಬ್ಬರ ತಲೆಯಲ್ಲಿ ಇದೆ. ಪ್ರಧಾನಿ ಮೋದಿ, ಅಮಿತ್ ಶಾ ಸುಮೋಟೋ ಕೇಸ್ ಹಾಕಿಸಿಕೊಂಡು ಅಪ್ಪ-ಮಗನನ್ನ ತಿಹಾರ್ ಜೈಲಿಗೆ ಹಾಕಬೇಕು. ದ್ವೇಷ ಭಾಷಣಕ್ಕೆ 10 ವರ್ಷ ಜೈಲಿದೆ. ‌ಹೀಗಾಗಿ, ಇಬ್ಬರನ್ನ ತಿಹಾರ್ ಜೈಲಿಗೆ ಕಳಿಸಬೇಕು. ಮಂಗ ತಾನು ಕೆಡೋದಲ್ಲದೆ ವನ ಕೆಡಿಸಿದಂತೆ ಇವರು ಸಮಾಜ ಕೆಡಿಸೋ ಕೆಲಸ ಮಾಡ್ತಾ ಇದ್ದಾರೆ ಅಂತ ಅಪ್ಪ-ಮಗನ ವಿರುದ್ಧ ಛಲವಾದಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಾಕ್‌ ಮಧ್ಯಸ್ಥಿಕೆ|ಭಾರತದ ರಾಜತಾಂತ್ರಿಕತೆಗೆ ದೊಡ್ಡ ಹಿನ್ನಡೆ: ಜೈರಾಮ್‌ ರಮೇಶ್‌

ನೀವು ದಲಿತ ಕಾರ್ಡ್ ಯಾಕೆ ಬಳಕೆ ಮಾಡ್ತೀರಾ? ನೀವು ರಾಷ್ಟ್ರೀಯ ಪಕ್ಷದ ಅಧ್ಯಕ್ಷರು. ನೀವು ಜಾತಿ ‌ಬಿಟ್ಟು ಮಾತಾಡಬೇಕು. ಮನುಸ್ಮೃತಿ ಮೇಲೆ ಈ ದೇಶ ನಡೆಯುತ್ತಿಲ್ಲ. ಮನುಸ್ಮೃತಿ ಸತ್ತು ಹೋಗಿದೆ. ಅಂಬೇಡ್ಕರ್ ಸಂವಿಧಾನ ಈಗ ಇರೋದು. ಸಂವಿಧಾನದ ಅಡಿಯಲ್ಲಿ ನೀವು ಕೆಲಸ ಮಾಡಬೇಕು. ಜನರ ಮಧ್ಯೆ ವಿಷಬೀಜ ಬಿತ್ತೋ ಕೆಲಸ ಕಾಂಗ್ರೆಸ್ ಮಾಡ್ತಿದೆ. ಕಾಂಗ್ರೆಸ್ ಅನ್ನ ವಿಸರ್ಜನೆ ಮಾಡಿ ಅಂತ ಹೇಳಿದ್ರು, ಮಾಡಲಿಲ್ಲ. ನನಗೆ ಅನ್ನಿಸುತ್ತೆ ಕಾಂಗ್ರೆಸ್ ಬಾಗಿಲನ್ನ ಖರ್ಗೆಯಿಂದ ಮುಚ್ಚಿಸಿ ದಲಿತರಿಗೆ ಕೆಟ್ಟ ಹೆಸರು ತರೋಕೆ ಕಾಂಗ್ರೆಸ್ ಹೊರಟಿದ್ದಾರೆ. ಹೀಗಾಗಿ, ಸೋನಿಯಾ, ರಾಹುಲ್, ‌ಪ್ರಿಯಾಂಕ್ ಅವರು ದಲಿತರಿಗೆ ಕೆಟ್ಟ ಹೆಸರು ತರಿಸಬೇಡಿ. ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಇಳಿಸಿ ಅಂತ ಮನವಿ ಮಾಡ್ತೀನಿ ಎಂದರು.

TAGGED:bengaluruchalavadi narayanaswamymallikarjun khargePriyank Khargeಛಲವಾದಿ ನಾರಾಯಣಸ್ವಾಮಿಪ್ರಿಯಾಂಕ್ ಖರ್ಗೆಮಲ್ಲಿಕಾರ್ಜುನ ಖರ್ಗೆ
Share This Article
Facebook Whatsapp Whatsapp Telegram

Cinema news

trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema
Rashmika Mandanna Father
ರಶ್ಮಿಕಾಗೆ ಮದುವೆಯ ಉಡುಗೊರೆಯಾಗಿ ತಮ್ಮ ಮನೆಯನ್ನೇ ನೀಡಿದ ತಂದೆ ಮದನ್‌ ಮಂದಣ್ಣ
Cinema Districts Karnataka Kodagu Latest South cinema Top Stories
DARSHAN RENUKASWAMY
ರೇಣುಕಾಸ್ವಾಮಿ ಕೊಲೆ ಕೇಸ್‌ ಆಧರಿತ ಸಿನಿಮಾ ‘ಬಾಸ್’‌ ರಿಲೀಸ್‌ಗೆ ಕೋರ್ಟ್‌ ತಡೆಯಾಜ್ಞೆ
Bengaluru City Cinema Court Latest Sandalwood Top Stories

You Might Also Like

Auto Gas 1
Bagalkot

ರಾಜ್ಯದಲ್ಲಿ ಆಟೋ ಗ್ಯಾಸ್ ಕೊರತೆ ಇಲ್ಲ, ವದಂತಿಗೆ ಕಿವಿಗೊಡಬೇಡಿ: ಆಹಾರ ಇಲಾಖೆ

Public TV
By Public TV
17 minutes ago
LPG refills 3
Latest

ಪ್ರಮುಖ ವಲಯಗಳಿಗೆ ಹೆಚ್ಚಿನ ಎಲ್‌ಪಿಜಿ ಹಂಚಿಕೆ ಮಾಡಿ: ರಾಜ್ಯಗಳಿಗೆ ಕೇಂದ್ರ ಸೂಚನೆ

Public TV
By Public TV
26 minutes ago
no stock at 5 out of 6 petrol stations in soraba
Districts

ಸೊರಬದ 6 ಪೆಟ್ರೋಲ್‌ ಬಂಕ್‌ಗಳಲ್ಲಿ 5ರಲ್ಲಿ ನೋ ಸ್ಟಾಕ್‌ – ಉಳಿದ ಒಂದೇ ಬಂಕ್‌ಗೆ ಮುಗಿಬಿದ್ದ ಜನ

Public TV
By Public TV
29 minutes ago
ಸಾಂದರ್ಭಿಕ ಚಿತ್ರ
Bagalkot

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ – ಮಧ್ಯಾಹ್ನ 3ಕ್ಕೆ ವೆಬ್‌ಸೈಟ್‌ನಲ್ಲಿ ರಿಸಲ್ಟ್ ಲಭ್ಯ

Public TV
By Public TV
36 minutes ago
Karwar Car Acident
Crime

ಕಾರಿನಲ್ಲೇ ಸುಟ್ಟು ಕರಕಲಾದ ಚಾಲಕ – ಸಾವಿನ ಸುತ್ತ ಅನುಮಾನದ ಹುತ್ತ

Public TV
By Public TV
1 hour ago
40 49 kg of Ganja worth Rs 20 24 lakh seized at Ballari railway station accused escape
Bellary

ಬಳ್ಳಾರಿ ರೈಲ್ವೇ ನಿಲ್ದಾಣದಲ್ಲಿ 20.24 ಲಕ್ಷ ಮೌಲ್ಯದ 40.49 ಕೆಜಿ ಗಾಂಜಾ ಜಪ್ತಿ – ಆರೋಪಿಗಳು ಎಸ್ಕೇಪ್

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?