ಬೆಂಗಳೂರು: ನಾಳೆ (ಏ.7) ದ್ವಿತೀಯ ಪಿಯುಸಿ (2nd PUC) ಫಲಿತಾಂಶ ಪ್ರಕಟವಾಗಲ್ಲ ಎಂದು ಎಕ್ಸಾಂ ಬೋರ್ಡ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ಮೊದಲು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಏ.7ರಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಿಸುವುದಾಗಿ ಘೋಷಿಸಿದ್ದರು. ಆದರೆ ಇದೀಗ ಎಕ್ಸಾಂ ಬೋರ್ಡ್ ಅಧಿಕಾರಿಗಳು ನಾಳೆ ಫಲಿತಾಂಶ ಪ್ರಕಟವಾಗುವುದಿಲ್ಲ. ಇನ್ನೂ ಯಾವಾಗ ಫಲಿತಾಂಶ ಪ್ರಕಟಿಸಬೇಕು ಎನ್ನುವ ಕುರಿತು ದಿನಾಂಕ ನಿಗದಿಪಡಿಸಿಲ್ಲ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಶೃಂಗೇರಿ ವಿಧಾನಸಭಾ ಚುನಾವಣೆಯ ಪೋಸ್ಟಲ್ ಬ್ಯಾಲೆಟ್ ಮತ ಮರುಪರಿಶೀಲಿಸಿ, ಹೊಸದಾಗಿ ಫಲಿತಾಂಶ ಪ್ರಕಟಿಸುವಂತೆ ಹೈಕೋರ್ಟ್ ಆದೇಶ
ಎಕ್ಸಾಂ ಬೋರ್ಡ್ ಅಧಿಕಾರಿಗಳು ಸ್ಪಷ್ಟನೆ ನೀಡುವ ಮುನ್ನ ಚುನಾವಣೆ ಆಯೋಗಕ್ಕೆ ಫಲಿತಾಂಶವನ್ನು ಪ್ರಕಟಿಸಲು ಅನುಮತಿಗಾಗಿ ಕಡತವನ್ನು ರವಾನಿಸಿತ್ತು. ರಾಜ್ಯದಲ್ಲಿ ಉಪಚುನಾವಣೆ ಹಿನ್ನೆಲೆ ಚುನಾವಣೆ ನೀತಿ ಸಂಹಿತೆ ಜಾರಿಯಿದ್ದು, ಹೀಗಾಗಿ ಅನುಮತಿ ಕೇಳಿತ್ತು. ಸದ್ಯ ಚುನಾವಣೆ ಬಳಿಕ ಪಿಯು ಫಲಿತಾಂಶ ಪ್ರಕಟವಾಗುತ್ತಾ? ಅಥವಾ ಏ.8ಕ್ಕೆ ಆಗುತ್ತಾ? ಎನ್ನುವ ಕುರಿತು ಎಕ್ಸಾಂ ಬೋರ್ಡ್ ಅಧಿಕಾರಿಗಳು ಮಾಹಿತಿ ನೀಡಬೇಕಿದೆ.

