ಚಿಕ್ಕಬಳ್ಳಾಪುರ: ಈಜಾಡಲು ತೆರಳಿದ್ದ ಇಬ್ಬರು ಕ್ಯಾಬ್ ಚಾಲಕರು (Cab Driver) ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿಡ್ಲಘಟ್ಟ (Shidlaghatta) ತಾಲೂಕಿನ ರಾಮಸಮುದ್ರ ಕೆರೆಯಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರು (Bengaluru) ಮೂಲದ ಕಿಶೋರ್ ಹಾಗೂ ಗಿರೀಶ್ ಎಂದು ಗುರುತಿಸಲಾಗಿದೆ. 8 ಮಂದಿ ಸ್ನೇಹಿತರು ತಮ್ಮ ಎರಡು ಕಾರುಗಳಲ್ಲಿ ಗಡಿಮಿಂಚೇನಹಳ್ಳಿ ಗ್ರಾಮದ ಸ್ನೇಹಿತರ ಮನೆಗೆ ಜಾತ್ರೆಗೆ ಬಂದಿದ್ದರು. ಜಾತ್ರೆಗೆ ಬಂದವರು ಕೆರೆಯಲ್ಲಿ ಈಜಾಡಲು ತೆರಳಿದ್ದ ವೇಳೆ ದುರಂತ ಸಂಭವಿಸಿದೆ. ಇದನ್ನೂ ಓದಿ: ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿಮೀ ಎಳೆದೊಯ್ದ ಟ್ರಕ್ – ಮಹಿಳೆ ಸಾವು, ಪತಿಗೆ ಗಾಯ
ಇಬ್ಬರ ಮೃತದೇಹಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಲಾಗಿದೆ. ಪೇರೆಸಂದ್ರ ಹಾಗೂ ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಗಂಡು ಮಗು ಆಗ್ಲಿಲ್ಲ ಅಂತ ಗರ್ಭಿಣಿ ಪತ್ನಿ, ಇಬ್ಬರು ಹೆಣ್ಣುಮಕ್ಕಳ ಹತ್ಯೆಗೈದ ಪಾಪಿ

