ಹೈದರಾಬಾದ್: ಸನ್‌ರೈಸರ್ಸ್ ಹೈದರಾಬಾದ್(SRH) ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ (LSG) ರೋಚಕ 5 ವಿಕೆಟ್ ಗೆಲುವು ಸಾಧಿಸಿದ ಬಳಿಕ ಮಾಲೀಕ ಸಂಜೀವ್ ಗೋಯೆಂಕಾ ನಾಯಕ ರಿಷಭ್ ಪಂತ್ ಅವರನ್ನು ಬಲವಾಗಿ ಅಪ್ಪಿಕೊಂಡು ಸಂಭ್ರಮಿಸಿದ್ದಾರೆ.
ತಂಡ ಜಯಗಳಿಸಿದ ಬಳಿಕ ಮೈದಾನದ ಒಳಗಡೆ ಪಂತ್(Rishabh Pant) ಅವರನ್ನು ಅಲಂಗಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪಂತ್ ಅವರು ಗೋಯೆಂಕಾ(Sanjiv Goenka) ಅವರ ಮಾತಿಗೆ ನಕ್ಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇಂದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಹೈದರಾಬಾದ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 156 ರನ್ ಹೊಡೆಯಿತು. ಈ ಮೊತ್ತವನ್ನು ಬೆನ್ನಟ್ಟಿದ ಲಕ್ನೋ ಒಂದು ಎಸೆತ ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ 160 ರನ್ ಹೊಡೆದು ಜಯಗಳಿಸಿತು. ಇದನ್ನೂ ಓದಿ: ನಾನು ಐಪಿಎಲ್ ಅಧ್ಯಕ್ಷನಾಗಿದ್ದರೆ ಗೋಯೆಂಕಾ ಬ್ಯಾನ್ – ಲಲಿತ್ ಮೋದಿ ಕೆಂಡಾಮಂಡಲ
Goenka ji heads to the ground! Ufff 🔥 pic.twitter.com/FsXvYGt0p5
— Micro-ambitious (@pal36) April 5, 2026
ಪಂತ್ ಔಟಾಗದೇ 68 ರನ್(50 ಎಸೆತ, 9 ಬೌಂಡರಿ) ಹೊಡೆದರು. ಪಂತ್ ಆಕ್ರಮಣಕಾರಿ ಆಟಕ್ಕೆ ಹೆಸರುವಾಸಿ. ಆದರೆ ಇಂದು ಯಾವುದೇ ಸಿಕ್ಸ್ ಸಿಡಿಸದೇ ಕೇವಲ ಬೌಂಡರಿ ಹೊಡೆಯುವ ಮೂಲಕ ಜವಾಬ್ದಾರಿಯುತ ಆಟವಾಡಿದರು. ಇದನ್ನೂ ಓದಿ: ಶಮಿ ಬೆಂಕಿ ಬೌಲಿಂಗ್, ಕೊನೆಯ ಓವರ್‌ನಲ್ಲಿ ಪಂತ್ 3 ಬೌಂಡರಿ – ಲಕ್ನೋಗೆ ರೋಚಕ ಜಯ

