ಹುಬ್ಬಳ್ಳಿ: ನಗರದ ಜಿಮ್ ಟ್ರೈನರ್ (Gym Trainer) ಸಮೀರ್ (Sameer) ನಮ್ಮ ಮಗಳ ತಲೆ ಕೆಡಿಸಿದ್ದಾನೆ ಎಂದು ಆತನಿಂದ ಕಿರುಕುಳಕ್ಕೊಳಗಾದ ಸಂತ್ರಸ್ತೆಯ ತಾಯಿ ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನನ್ನ ಮಗಳಿಗೂ ಸಮೀರ್ಗೂ ಯಾವುದೇ ಸಂಬಂಧ ಇಲ್ಲ. ನನ್ನ ಮಗಳ ಮೇಲೆ ಹಿಪ್ನೋಟೈಸ್ ಮಾಡಲಾಗಿದೆ. ಕಳೆದ ನಾಲ್ಕೈದು ದಿನದಿಂದ ನನ್ನ ಮಗಳಿಗೆ ಸಮೀರ್ ಮತ್ತು ಅವನ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಜ್ಯೂಸ್ನಲ್ಲಿ ಮತ್ತಿನ ಔಷಧ ಬೆರಸಿಕೊಟ್ಟು ಸಮೀರ್ ಅತ್ಯಾಚಾರ ಮಾಡಿದ್ದಾನೆ – ಸಂತ್ರಸ್ತೆ ಸ್ಫೋಟಕ ಹೇಳಿಕೆ
ಇವತ್ತು (ಏ.3) ನಮ್ಮನ್ನು ಸುಟ್ಟ ಹಾಕಲು ಸಮೀರ್ ಕುಟುಂಬಸ್ಥರು ಬಂದಿದ್ದರು. ಪೆಟ್ರೋಲ್, ಹಾಕಿ ಸ್ಟಿಕ್, ತಲವಾರ್ ತೆಗೆದುಕೊಂಡು ಬಂದು ಹಲ್ಲೆ ಮಾಡಿದ್ದಾರೆ ಎಂದು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಅಜ್ಞಾತ ಸ್ಥಳದಿಂದ ಸಂತ್ರಸ್ತ ಯುವತಿ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದು, ಸಮೀರ್ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ. ಜ್ಯೂಸ್ನಲ್ಲಿ ಮತ್ತಿನ ಔಷಧ ಬೆರಸಿಕೊಟ್ಟು ಸಮೀರ್ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಕೃತ್ಯದ ವಿಡಿಯೋ ಮಾಡಿದ್ದು ನನಗೆ ಗೊತ್ತಿರಲಿಲ್ಲ. ವಿಡಿಯೋ ತೋರಿಸಿದ ಮೇಲೆ ನನಗೆ ಗೊತ್ತಾಯಿತು. ಆ ಮೇಲೆ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಮೋಸ ಮಾಡಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.
ಈ ಸಂಬಂಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಹಿಂದೂಪರ ಸಂಘಟನೆಗಳು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದಾರೆ. ಜಿಮ್ ಟ್ರೈನರ್ ಸಮೀರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಕಮಿಷನರ್ ಎನ್ ಶಶಿಕುಮಾರ್ ಭೇಟಿ ನೀಡಿ ಹಿಂದೂ ಕಾರ್ಯಕರ್ತರ ಜೊತೆಗೆ ಮಾತುಕತೆ ನಡೆಸಿದ್ರು. ಮಾತುಕತೆಗೆ ಜಗ್ಗದ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಯುವತಿ ಜೊತೆಗೆ ಇರುವ ಫೋಟೋ ಮತ್ತು ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಲಾಗ್ತಿದೆ ಎಂದು ಯುವತಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಗಲಾಟೆ – ಜಿಮ್ ಟ್ರೈನರ್ ವಿರುದ್ಧ ಹಿಂದೂ ಸಂಘಟನೆಗಳಿಂದ ಪ್ರತಿಭಟನೆ

