ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಸೇಬು ಸಾಗಿಸುತ್ತಿದ್ದ ಗೂಡ್ಸ್ ವಾಹನ ಪಲ್ಟಿಯಾದ ಬೆಳಗಾವಿ (Belagavi) ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ(National Highway)ನಡೆದಿದೆ.
ಗೂಡ್ಸ್ ವಾಹನ ಮುಂಬೈನಿಂದ ದಾವಣಗೆರೆಗೆ ಸೇಬು(Apple) ಸಾಗಿಸುತ್ತಿತ್ತು. ವಾಹನ ಪಲ್ಟಿಯಾಗಿದ್ದರಿಂದ ಲಕ್ಷಾಂತರ ಮೌಲ್ಯದ ಸೇಬು ಹಣ್ಣಿನ ಬಾಕ್ಸ್ ಗಳು ರಸ್ತೆಪಾಲಾಗಿದೆ.
ಅಪಘಾತದಲ್ಲಿ ಗೂಡ್ಸ್ ವಾಹನ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ. ವಾಹನ ಪಲ್ಟಿಯಾದ ಕೆಲಕಾಲ ಟ್ರಾಫಿಕ್ ಸಮಸ್ಯೆಯಾಗಿತ್ತು. ಘಟನಾ ಸ್ಥಳಕ್ಕೆ ಉತ್ತರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

