ರಾಯಚೂರು: ಇರಾನ್ ಇಸ್ರೇಲ್ ಯುದ್ಧದ (Iran Israel War) ಎಫೆಕ್ಟ್ ರಾಯಚೂರಿನ ರೊಟ್ಟಿ ಕೇಂದ್ರಕ್ಕೂ ತಟ್ಟಿದೆ. ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಿಗದೇ ಇಲ್ಲಿನ ರೊಟ್ಟಿ ಕೇಂದ್ರಗಳು ಒಂದೊಂದಾಗೇ ಬೀಗ ಹಾಕುತ್ತಿವೆ.
ಪ್ರತಿನಿತ್ಯ ಗ್ರಾಹಕರಿಗೆ ಜೋಳದ ರೊಟ್ಟಿ, ಚಪಾತಿ, ರೈಸ್ ಬಗೆಬಗೆಯ ತರಕಾರಿ ಪಲ್ಯ, ಚಟ್ನಿ ಬಡಿಸುತ್ತಿದ್ದ ರೊಟ್ಟಿ ಕೇಂದ್ರಗಳು ಗ್ಯಾಸ್ ಸಿಲಿಂಡರ್ ಇಲ್ಲದೇ ಬಾಗಿಲು ಮುಚ್ಚಿವೆ. ರೂಂ. ನಲ್ಲಿದ್ದುಕೊಂಡು ಓದುವ ವಿದ್ಯಾರ್ಥಿಗಳು, ಬ್ಯಾಚುಲರ್ಗಳಿಗೆ ಆಸರೆಯಾಗಿದ್ದ ರೊಟ್ಟಿ ಕೇಂದ್ರಗಳಿಗೆ ಗ್ಯಾಸ್ ಸಿಲಿಂಡರ್ ಎಫೆಕ್ಟ್ ಬಲವಾಗಿ ತಟ್ಟಿದೆ.

ಇಷ್ಟು ದಿನ ಒಂದೊಂದು ಅಡುಗೆ ಕಡಿಮೆ ಮಾಡಿಕೊಂಡು ಬಂದಿದ್ದ ರೊಟ್ಟಿ ಕೇಂದ್ರಗಳು ಈಗ ಸಂಪೂರ್ಣವಾಗಿ ಮುಚ್ಚಬೇಕಾಗಿದೆ. ಹೀಗಾಗಿ ಹೊಟೆಲ್ ನಲ್ಲಿ ಊಟ ಮಾಡದೇ ರೊಟ್ಟಿ ಊಟ ಪಾರ್ಸಲ್ ತೆಗೆದುಕೊಂಡು ಹೋಗುತ್ತಿದ್ದವರಿಗೆ ಕಷ್ಟವಾಗುತ್ತಿದೆ. ಇದನ್ನೂ ಓದಿ: ಆಪರೇಷನ್ ಅರಹಮಾ | ಜಮ್ಮು ಕಾಶ್ಮೀರದಲ್ಲಿ ಎನ್ಕೌಂಟರ್ – ಓರ್ವ ಪಾಕ್ ಉಗ್ರನ ಹತ್ಯೆ

ಎಲ್ಪಿಜಿ ಸಿಲಿಂಡರ್ ಸಿಗದ ಕಾರಣ ರೊಟ್ಟಿ ಕೇಂದ್ರ ಬಂದ್ ಮಾಡಿರುವುದಾಗಿ ಮಾಲಿಕರು ಪೋಸ್ಟರ್ ಅಂಟಿಸಿದ್ದಾರೆ. ಸಿಲಿಂಡರ್ ಪೂರೈಕೆ ಹೆಚ್ಚಳ ಬಗ್ಗೆ ಸಚಿವರ ಹೇಳಿಕೆ ಬಳಿಕವೂ ರಾಯಚೂರಿನಲ್ಲಿ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಸಿಗುತ್ತಿಲ್ಲ. ಗ್ಯಾಸ್ ಸಿಲಿಂಡರ್ ಸಿಕ್ಕಮೇಲೆ ಅಡುಗೆ ತಯಾರಿಕೆ ಆರಂಭಿಸುವುದಾಗಿ ರೊಟ್ಟಿ ಕೇಂದ್ರಗಳ ಮಾಲೀಕರು ಹೇಳುತ್ತಿದ್ದಾರೆ. ಇದನ್ನೂ ಓದಿ: ಇಂದಿನಿಂದ ʻದುಬಾರಿ ದುನಿಯಾʼ; ಕರ್ನಾಟಕದಲ್ಲಿ ಯಾವುದೆಲ್ಲಾ ಏರಿಕೆ? ನಗದು ವ್ಯವಹಾರ ಹೇಗೆ..?

