-15 ದಿನಗಳಲ್ಲಿ 4ನೇ ಬಾರಿ ದರ ಏರಿಕೆ
ಬೆಂಗಳೂರು: ಪೆಟ್ರೋಲ್, ಡೀಸೆಲ್ ಕೊರತೆ ವದಂತಿ ಬೆನ್ನಲ್ಲೇ ಖಾಸಗಿ ಸ್ವಾಮ್ಯದ ಶೆಲ್ ಪೆಟ್ರೋಲ್ ಬಂಕ್ (Shell Petrol Bunk) ಜನತೆಗೆ ಮತ್ತೆ ಶಾಕ್ ಕೊಟ್ಟಿದೆ. ಕಳೆದ 15 ದಿನಗಳಲ್ಲಿ ಮೂರು ಬಾರಿ ದರ ಏರಿಕೆ ಮಾಡಿದ್ದ ಶೆಲ್ ಇದೀಗ ಮತ್ತೆ ಪೆಟ್ರೋಲ್, ಡೀಸೆಲ್ ದರ (Petrol – Diesel Price) ಏರಿಕೆ ಮಾಡಿದೆ.
ಪ್ರೀಮಿಯಂ ಜೊತೆಗೆ ಸಾಮಾನ್ಯ ಪೆಟ್ರೋಲ್, ಡೀಸೆಲ್ ದರವೂ ಏರಿಕೆಯಾಗಿದೆ. ಸಾಮಾನ್ಯ ಪೆಟ್ರೋಲ್ ದರ ಮೊದಲು 106 ರೂ.ನಿಂದ 108.50 ರೂ. ಆಗಿತ್ತು. ನಾಲ್ಕು ದಿನದ ಹಿಂದೆ 112 ರೂ.ಗೆ ಏರಿಕೆ ಆಗಿತ್ತು. ಈಗ 119.8 ರೂ.ಗೆ ಏರಿಕೆಯಾಗಿದೆ. ಸಾಮಾನ್ಯ ಪೆಟ್ರೋಲ್ ದರ ಲೀಟರ್‌ಗೆ 7 ರೂ.ನಷ್ಟು ಹೆಚ್ಚಳವಾಗಿದೆ. ಪ್ರೀಮಿಯಂ ಪೆಟ್ರೋಲ್ ದರ ಲೀಟರ್‌ಗೆ 122.42 ರೂ.ನಿಂದ 129.8ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇ ನಲ್ಲಿ ಇಂದಿನಿಂದ ಟೋಲ್ ದರ ಏರಿಕೆ; ಯಾವ ವಾಹನಕ್ಕೆ ಎಷ್ಟು?
ಸಾಮಾನ್ಯ ಡೀಸೆಲ್ 91 ರೂ.ನಿಂದ 93.50 ರೂ.ಗೆ ಏರಿಕೆ ಆಗಿತ್ತು. ನಾಲ್ಕು ದಿನದ ಹಿಂದೆ ಲೀಟರ್ ಡಿಸೇಲ್ 98 ರೂ. ಆಗಿತ್ತು. ಇಂದು 123ಕ್ಕೆ ಏರಿಕೆಯಾಗಿದೆ. ಡೀಸೆಲ್ ದರ 25 ರೂ. ಹೆಚ್ಚಳವಾಗಿದೆ. ಪ್ರೀಮಿಯಂ ಡೀಸೆಲ್ ಪ್ರತಿ ಲೀಟರ್‌ಗೆ 108.50 ರಿಂದ 133ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಶಿವೈಕ್ಯ ಶಿವಕುಮಾರ ಶ್ರೀಗಳ 119ನೇ ಜಯಂತ್ಯೋತ್ಸವ – ಸಿದ್ದಗಂಗಾ ಮಠದಲ್ಲಿ ಕಳೆಗಟ್ಟಿದ ಸಂಭ್ರಮ

