ರೋಮ್: ಇರಾನ್ (Iran War) ವಿರುದ್ಧ ಯುದ್ಧ ನಡೆಸುತ್ತಿರುವ ಅಮೆರಿಕಗೆ ಇಟಲಿ(Italy) ಶಾಕ್ ನೀಡಿದೆ. ಸಿಸಿಲಿಯ ಸಿಗೊನೆಲ್ಲಾ (Sigonella) ವಾಯುನೆಲೆಯನ್ನು ಬಳಸಲು ಅನುಮತಿ ನೀಡುವುದಿಲ್ಲ ಎಂದು ಹೇಳಿದೆ.
ತನ್ನ ಬಾಂಬರ್ ವಿಮಾನಗಳು (US bombers) ಸಿಸಿಲಿಗೆ ಹೋಗುವ ಮಾರ್ಗದಲ್ಲಿದ್ದಾಗ ಅಮೆರಿಕ ಲ್ಯಾಂಡಿಂಗ್‌ಗೆ ಅನುಮತಿ ಕೋರಿತ್ತು. ನಿರಾಕರಣೆಗೆ ಯಾವುದೇ ಕಾರಣವನ್ನು ನೀಡದಿದ್ದರೂ ಅಮೆರಿಕವು ಪ್ರಧಾನಿ ಜಾರ್ಜಿಯಾ ಮೆಲೋನಿ (Georgia Meloni) ಸರ್ಕಾರವನ್ನು ಮುಂಚಿತವಾಗಿ ಸಂಪರ್ಕಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮೆರಿಕದ ವಿಮಾನಗಳು ಇಟಲಿಯ ವಾಯುಪ್ರದೇಶವನ್ನು ಪ್ರವೇಶಿಸುವಾಗ ಅಥವಾ ನೆಲೆಯಲ್ಲಿ ಇಳಿಯುವಾಗ ಪಾಲಿಸಬೇಕಾದ ಅಧಿಕೃತ ಅನುಮತಿಯ ಪ್ರಕ್ರಿಯೆಯನ್ನು ಅನುಸರಿಸಿಲ್ಲ ಎಂದು ಇಟಲಿ ಹೇಳಿದೆ. ಇದನ್ನೂ ಓದಿ: 900 ಕೆಜಿ ಬಂಕರ್ ಬಸ್ಟರ್ ಬಾಂಬ್‌ನಿಂದ ಅಮೆರಿಕ ದಾಳಿ – ಇರಾನ್‌ನ ಇಸ್ಫಹಾನ್‌ನಲ್ಲಿ ಸರಣಿ ಸ್ಫೋಟ!

ಸಿಗೊನೆಲ್ಲಾ ವಾಯುನೆಲೆಯನ್ನು ಕೇವಲ ಲಾಜಿಸ್ಟಿಕಲ್ ಮತ್ತು ತರಬೇತಿ ಉದ್ದೇಶಗಳಿಗಾಗಿ ಬಳಸಲು ದ್ವಿಪಕ್ಷೀಯ ಒಪ್ಪಂದಗಳಿವೆ. ಆದರೆ ಯುದ್ಧಕ್ಕೆ ಸಂಬಂಧಿಸಿದ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಅಥವಾ ಯುದ್ಧ ಕಾರ್ಯಾಚರಣೆಗಳಿಗೆ ಈ ನೆಲೆಯನ್ನು ಬಳಸುವುದು ಒಪ್ಪಂದದ ವ್ಯಾಪ್ತಿಗೆ ಬರುವುದಿಲ್ಲ ಎಂದು ಇಟಲಿ ಸ್ಪಷ್ಟಪಡಿಸಿದೆ.
ಇಟಲಿಯ ಕಾನೂನಿನ ಪ್ರಕಾರ, ಯಾವುದೇ ಯುದ್ಧ ಕಾರ್ಯಾಚರಣೆಗೆ ತನ್ನ ನೆಲೆಗಳನ್ನು ಬಳಸಲು ಅವಕಾಶ ನೀಡಬೇಕಾದರೆ ಸಂಸತ್ತಿನ ಅನುಮೋದನೆ ಅಗತ್ಯವಿರುತ್ತದೆ. ಅಮೆರಿಕದ ವಿನಂತಿಯು ಅನಿರೀಕ್ಷಿತವಾಗಿದ್ದರಿಂದ ಸಂಸತ್ತನ್ನು ಸಂಪರ್ಕಿಸಲು ಸಮಯಾವಕಾಶ ಇರಲಿಲ್ಲ.
ಇಟಲಿ ಈ ಯುದ್ಧದಲ್ಲಿ ಭಾಗಿಯಾಗಲು ಇಚ್ಛಿಸುವುದಿಲ್ಲ ಎಂದು ಪ್ರಧಾನಿ ಜಾರ್ಜಿಯಾ ಮೆಲೋನಿ ತಿಳಿಸಿದ್ದಾರೆ. ಇಟಲಿಯಂತೆಯೇ ಸ್ಪೇನ್ ಕೂಡ ಅಮೆರಿಕದ ವಿಮಾನಗಳಿಗೆ ತನ್ನ ವಾಯುಪ್ರದೇಶ ಮತ್ತು ನೆಲೆಗಳನ್ನು ಬಳಸಲು ನಿರಾಕರಿಸಿದೆ. ಫ್ರಾನ್ಸ್ ಕೂಡ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಸಾಗಿಸುವ ವಿಮಾನಗಳಿಗೆ ತನ್ನ ವಾಯುಪ್ರದೇಶವನ್ನು ನಿರ್ಬಂಧಿಸಿದೆ. ಇದನ್ನೂ ಓದಿ: ನೀವು ಕ್ಯಾಶ್‌ನಲ್ಲಿ ವ್ಯವಹಾರ ಮಾಡ್ತೀರಾ? ಹಾಗಿದ್ರೆ ಹೊಸ ಬದಲಾವಣೆ ಓದಿ – ಇಲ್ದಿದ್ರೆ ಬೀಳುತ್ತೆ ಭಾರೀ ದಂಡ
MARCO RUBIO: “If Europe won’t allow us to use the bases we man and fund for their defense when we need them, we ought to close them down and remove our troops from Europe!”
Europe has been sleeping on our sofa and raiding our fridge for too long.
Time to pay the rent. ⬇️ pic.twitter.com/XiOqG1b5lk
— Bill Mitchell (@mitchellvii) March 31, 2026
ಅಮೆರಿಕ ಕೆಂಡಾಮಂಡಲ:
ಇಟಲಿ ಅನುಮತಿ ನೀಡದ್ದಕ್ಕೆ ಅಮೆರಿಕ ಕೆರಳಿದೆ. ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಪ್ರತಿಕ್ರಯಿಸಿ ಇದು ತುಂಬಾ ನಿರಾಶಾದಾಯಕ ಎಂದು ಹೇಳಿದ್ದಾರೆ. ಇರಾನ್ ಯುದ್ಧದ ಅಂತ್ಯದ ನಂತರ NATO ಮಿತ್ರರಾಷ್ಟ್ರಗಳೊಂದಿಗಿನ ತನ್ನ ಸಂಬಂಧವನ್ನು ಯುಎಸ್ ಮರುಮೌಲ್ಯಮಾಪನ ಮಾಡಬಹುದು ಎಂದಿದ್ದಾರೆ.

