– ಮಾವ, ಸೊಸೆಯ ಮಧ್ಯೆ ಆರೋಪ-ಪ್ರತ್ಯಾರೋಪ
ಉಡುಪಿ: ಪ್ರೀತಿಸಿ ಮದುವೆಯಾದ ಒಂದೇ ತಿಂಗಳಲ್ಲೇ ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಉದ್ಯಮಿಯ ಸಾವು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಈ ನಡುವೆ ಮಾವ ಹಾಗೂ ಸೊಸೆಯ ಮಧ್ಯೆ ಆರೋಪ ಪ್ರತ್ಯಾರೋಪಗಳು ಶುರುವಾಗಿದೆ.
ಸುದೀಪ್ ಶೆಟ್ಟಿ ಮೃತ ಉದ್ಯಮಿ. ದಕ್ಷಿಣ ಕನ್ನಡ ಜಿಲ್ಲೆಯ ನೆಲ್ಯಾಡಿ ನಿವಾಸಿ ಸುದೀಪ್ ಶೆಟ್ಟಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿ, ಮೇಕಪ್ ಆರ್ಟಿಸ್ಟ್ ಹಾಗೂ ನಾಟಕ ತಂಡಗಳಲ್ಲಿ ಕಲಾವಿದೆಯಾಗಿದ್ದ ಸೌಮ್ಯ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಇದನ್ನೂ ಓದಿ: ಇರಾನ್ ಮೇಲೆ ಪರಮಾಣು ದಾಳಿಗೆ ಸಿದ್ಧತೆ: ವಿಶ್ವಸಂಸ್ಥೆಯ ರಾಜತಾಂತ್ರಿಕ ರಾಜೀನಾಮೆ
ಈಕೆಯ ಬ್ಯೂಟಿಗೆ ಮಾರುಹೋದ ರಿಯಲ್ ಎಸ್ಟೇಟ್ ಉದ್ಯಮಿ (Real Estate Businessman) ಸುದೀಪ್ ಶೆಟ್ಟಿ ಕಳೆದ ಒಂದು ವರ್ಷದಿಂದ ಸೋಶಿಯಲ್ ಮೀಡಿಯಾ ಮೂಲಕ ಸಂಪರ್ಕಿಸಲು ಪ್ರಯತ್ನ ಮಾಡುತ್ತಿದ್ದ. ಕೊನೆಗೂ ಒಂದು ವರ್ಷದ ನಂತರ ಈಕೆ ಆತನ ಮೆಸೇಜ್‌ಗೆ ರಿಪ್ಲೈ ಮಾಡಿದ್ದೇ ತಡ ಆಕೆಗೆ ಮದುವೆ ಪ್ರಪೋಸಲ್ ಇಟ್ಟಿದ್ದಾನೆ. ಮನೆಯವರನ್ನ ಒಪ್ಪಿಸಿದರೆ ಓಕೆ ಅಂತ ಸೌಮ್ಯ ಹೇಳಿದ್ದೇ ತಡ ಎರಡೂ ಮನೆಯವರನ್ನ ಹೇಗೋ ಒಪ್ಪಿಸಿ ಹೆಣ್ಣು ನೋಡುವ ಶಾಸ್ತ್ರ ಕೂಡ ನಡೆಯಿತು. ಈ ಖುಷಿಯ ಕ್ಷಣ ನಡೆದು ಕೆಲವು ತಿಂಗಳಲ್ಲೇ ಸಂಪೂರ್ಣ ಚಿತ್ರಣವೇ ಬದಲಾಗಿದೆ. ಇದನ್ನೂ ಓದಿ: ಹೊನ್ನಾಳಿಯಲ್ಲಿ ಸಿನಿಮೀಯ ರೀತಿಯ ದರೋಡೆ – ಕಾರು ಅಡ್ಡಗಟ್ಟಿ 38 ಲಕ್ಷ ರಾಬರಿ
ಈ ಜೋಡಿ ಕಳೆದ ಫೆಬ್ರವರಿ ತಿಂಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ರಿಜಿಸ್ಟರ್ ಮದುವೆ ಕೂಡ ಆಗಿದ್ದು, ಉಡುಪಿಯ ಕಾರ್ಕಳದಲ್ಲಿರುವ ಸೌಮ್ಯ ಮನೆಯಲ್ಲಿ ಸುದೀಪ್ ಜೊತೆ ಕೆಲ ಸಮಯ ಕಳೆದಿದ್ದರು. ಆ ಮೇಲೆ ತನ್ನ ಮನೆಗೆ ಹೋಗಿದ್ದೇ ತಡ ಸುದೀಪ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದರು. ತನ್ನ ಗಂಡನಿಗೆ ಏನಾಯ್ತು ಅಂತ ಯೋಚನೆಯಲ್ಲಿದ್ದ ಸೌಮ್ಯಳಿಗೆ ಕಾರ್ಕಳದಲ್ಲಿ ತಾಯಿ ಜೊತೆ ಕಾರಲ್ಲಿ ಹೋಗುತ್ತಿರುವುದನ್ನ ಕಂಡು ಪ್ರಶ್ನೆ ಮಾಡಿದ್ದಾಳೆ. ಈ ವೇಳೆ ಅತ್ತೆ ಜೊತೆ ಮಾತುಕತೆ ಆಗಿದೆ. ಅದಾದ ಬಳಿಕ ಸುದೀಪ್ ಕಾರ್ಕಳದಲ್ಲಿರೋ ಪತ್ನಿ ಮನೆಗೆ ಬಂದು ಮರುದಿನ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ. ಪತ್ನಿ ಸೌಮ್ಯ ಆತನನ್ನ ಆಸ್ಪತ್ರೆಗೆ ದಾಖಲಿಸಿದ ಬಳಿಕ ಗೊತ್ತಾಗಿದ್ದು, ಆತ ವಿಷ ಸೇವನೆ ಮಾಡಿದ್ದಾನೆ ಅಂತ. ಕೂಡಲೇ ಸುದೀಪ್ ತಂದೆ ಮಗನನ್ನ ಮಂಗಳೂರಿನ ಯೆನಪೋಯ ಆಸ್ಪತ್ರೆಗೆ ದಾಖಲಿಸಿದ ಬಳಿಕ ಆತ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: 15 ಎಸೆತಗಳಲ್ಲಿ ಫಿಫ್ಟಿ ಹೊಡೆದು 15ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ಸೂರ್ಯವಂಶಿ – ರಾಯಲ್ಸ್‌ಗೆ ಭರ್ಜರಿ ಜಯ
ಈಗ ಮಗನ ಸಾವಿಗೆ ಸೊಸೆಯ ಪ್ರಚೋದನೆ ಕಾರಣ ಅಂತ ಮಾವ ದೂರು ದಾಖಲಿಸಿದ್ದಾರೆ. ಇತ್ತ ನಾನೇನು ತಪ್ಪು ಮಾಡಿಲ್ಲ. ಜೊತೆಯಲ್ಲಿರುವಾಗ ಖುಷಿಯಲ್ಲೇ ಇದ್ದೆವು. ಅತ್ತೆಗೆ ಮಗನ ಪ್ರೀತಿ ಇಷ್ಟವಿರಲಿಲ್ಲ. ಸಾಲದ ಚಿಂತೆಯೂ ಇತ್ತು. ಒಂದು ವೇಳೆ ನಾನು ಕಾರಣ ಆದರೆ ನಾನ್ಯಾಕೆ ಗಂಡನನ್ನು ಎರಡೆರಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೆ. ಈ ಬಗ್ಗೆ ತನಿಖೆಯಾಗಲಿ ಎಂದು ಒತ್ತಾಯಿಸಿ ದೂರನ್ನು ನೀಡಲು ಮುಂದಾಗಿದ್ದಾರೆ ಸೌಮ್ಯ ಶೆಟ್ಟಿ. ಒಟ್ಟಾರೆ ಯುವತಿಯ ಹಿಂದೆ ಬಿದ್ದು ಒಲಿಸಿ ಮದುವೆಯಾಗಿದ್ದ ಉದ್ಯಮಿಯ ಜೀವನ ದುರಂತ ಅಂತ್ಯ ಕಂಡಿದೆ. ಇದನ್ನೂ ಓದಿ: ಗೆಳತಿಯ ಅಪಾರ್ಟ್‌ಮೆಂಟ್‌ನಿಂದ ಜಿಗಿದು ಮೆಡಿಕಲ್ ವಿದ್ಯಾರ್ಥಿ ಆತ್ಮಹತ್ಯೆ

