ಮಂಗಳೂರು: ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ಜಿಗಿದು ಮೆಡಿಕಲ್ ವಿದ್ಯಾರ್ಥಿ (Medical Student) ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನ (Mangaluru) ಅತ್ತಾವರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ಉತ್ತರ ಭಾರತ ಮೂಲದ ಸಾರ್ಥಕ್ ಮೌರ್ಯ (23) ಎಂದು ಗುರುತಿಸಲಾಗಿದೆ. ಗೆಳತಿಯೊಬ್ಬಳು ವಾಸವಾಗಿದ್ದ ಅಪಾರ್ಟ್ಮೆಂಟ್ಗೆ ಬಂದಿದ್ದ ಯುವಕ, 12ನೇ ಮಹಡಿ ತೆರಳಿ ಅಲ್ಲಿಂದ ಜಿಗಿದಿದ್ದಾನೆ. ಈತ ಅತ್ತಾವರದ ಪಿಜಿಯೊಂದರಲ್ಲಿ ವಾಸವಾಗಿದ್ದ. ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆ ಸೂಪ್ರವೈಸರ್ ನಾಲೆಗೆ ಹಾರಿ ಆತ್ಮಹತ್ಯೆ
ನಾಳೆಯಿಂದ (ಮಾ.31) ಮೆಡಿಕಲ್ ಪರೀಕ್ಷೆ ಇತ್ತು. ಈಗ ಆತ್ಮಹತ್ಯೆಗೆ ಪರೀಕ್ಷೆ ಭಯವೋ? ಪ್ರೇಮ ವೈಫಲ್ಯವೋ ಎಂಬ ಶಂಕೆ ವ್ಯಕ್ತವಾಗುತ್ತಿದೆ. ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ. ಇದನ್ನೂ ಓದಿ: ಗೃಹಿಣಿ ಅನುಮಾನಾಸ್ಪದ ಸಾವು – ಪತಿ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ

