ಬೆಂಗಳೂರು: ಈಜಲು ತೆರಳಿದ್ದ ವೇಳೆ ಕೃಷಿ ಹೊಂಡದಲ್ಲಿ (Agricultural Pit) ಮುಳುಗಿ ಇಬ್ಬರು ಯುವಕರು (Youths) ಮೃತಪಟ್ಟಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಭೂಸಂದ್ರ ಗ್ರಾಮದಲ್ಲಿ ನಡೆದಿದೆ.
ಸುರೇಶ್ (21), ನರಸೇಗೌಡ (22) ಮೃತ ಯುವಕರು. ನಾಲ್ಕು ಮಂದಿ ಯುವಕರು ಈಜಲು ತೆರಳಿದ್ದರು. ಈ ವೇಳೆ ಕೃಷಿ ಹೊಂಡದಲ್ಲಿ ಸಿಲುಕಿ ಇಬ್ಬರು ಮೃತಪಟ್ಟಿದ್ದು, ಮತ್ತಿಬ್ಬರನ್ನು ರಕ್ಷಿಸಲಾಗಿದೆ. ಇದನ್ನೂ ಓದಿ: ಬೆಂಗಳೂರಲ್ಲಿ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ
ಸದ್ಯ ಮೃತದೇಹಗಳನ್ನು ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಸ್ತೆಯಲ್ಲಿ ಕಾಳಿಂಗ ಅಡ್ಡ ಬಂದಿದ್ದಕ್ಕೆ ಕಕ್ಕಾಬಿಕ್ಕಿಯಾದ ಚಾಲಕ – ಅಡಿಕೆ ಸಾಗಿಸುತ್ತಿದ್ದ ಲಾರಿ ಪಲ್ಟಿ

