ಬೆಂಗಳೂರು: ಹಾಡಹಗಲೇ ಜನನಿಡ ಪ್ರದೇಶದಲ್ಲಿ ಆಟೋದಲ್ಲಿ (Auto) ಬಂದ ಮೂರ್ನಾಲ್ಕು ಪುಂಡರು ಯುವಕನೊಬ್ಬನನ್ನ ಕಿಡ್ನ್ಯಾಪ್ (Kidnap) ಮಾಡಿ ಹಲ್ಲೆ ಮಾಡಿರುವ ಘಟನೆ ಬ್ಯಾಡರಹಳ್ಳಿಯ (Byadarahalli) ನಾಗರಹೊಳೆ ಸರ್ಕಲ್ನಲ್ಲಿ ನಡೆದಿದೆ.
ಬೆಂಗಳೂರು ನಗರದಲ್ಲಿ ಪುಂಡರ ಅಟ್ಟಹಾಸ ಮಿತಿಮೀರಿದ್ದು, ಪೊಲೀಸರ ಭಯವಿಲ್ಲದಂತಾಗಿದೆ. ಹಾಡಹಗಲೇ ನಡುರಸ್ತೆಯಲ್ಲಿ ಯುವಕನೊಬ್ಬನನ್ನು ಪುಂಡರ ಗ್ಯಾಂಗ್ ಆಟೋದಲ್ಲಿ ಕಿಡ್ನ್ಯಾಪರ್ಸ್ ಮಾಡಿದೆ. ಬ್ಯಾಡರಹಳ್ಳಿಯ ನಾಗರಹೊಳೆ ಸರ್ಕಲ್ನಲ್ಲಿ ಘಟನೆ ನಡೆದಿದ್ದು, ನಟರಾಜ @ ನಟ ಎಂಬಾತನನ್ನು ಅಪಹರಿಸಲು ಬಂದಿದ್ದ ಗ್ಯಾಂಗ್, ಆತನ ಬದಲು ಸ್ನೇಹಿತನೊಂದಿಗೆ ಟೀ ಕುಡಿಯುತ್ತಿದ್ದ ಶರತ್ ಎಂಬ ಯುವಕನನ್ನು ಕಿಡ್ನ್ಯಾಪ್ ಮಾಡಿದ್ದಾರೆ. ಆತ ತಾನಲ್ಲ ಎಂದು ಹೇಳಿದರೂ ಕೇಳದೆ ಥಳಿಸಿ ಆಟೋಗೆ ತುಂಬಿಕೊಂಡು ಕಿಡ್ನ್ಯಾಪ್ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿ ಏರ್ಪೋರ್ಟ್ನಲ್ಲಿ ಇಂಡಿಗೋ ವಿಮಾನ ಎಮರ್ಜೆನ್ಸಿ ಲ್ಯಾಂಡಿಂಗ್
ಕಿಡ್ನ್ಯಾಪ್ ನಂತರ, ದುಷ್ಕರ್ಮಿಗಳ ಗ್ಯಾಂಗ್ ಶರತ್ನ ಅಕ್ಕನಿಗೆ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿದೆ. ಸ್ವಲ್ಪ ಸಮಯದ ನಂತರ ಈ ಕಿಡ್ನ್ಯಾಪರ್ಸ್ ಶರತ್ನ ಫೋನ್ ಪರಿಶೀಲಿಸಿದಾಗ, ತಾವು ಹುಡುಕುತ್ತಿದ್ದ ವ್ಯಕ್ತಿ ಇವನಲ್ಲ ಎಂದು ಅರ್ಧದಾರಿಯಲ್ಲೇ ಆತನನ್ನು ಬಿಟ್ಟು ಹೋಗಿದ್ದಾರೆ. ಈ ಘಟನೆಯಿಂದ ಯುವಕ ಶರತ್ ತೀವ್ರ ಆಘಾತಕ್ಕೊಳಗಾಗಿದ್ದಾನೆ. ಇದನ್ನೂ ಓದಿ: ವಿದ್ಯಾರ್ಥಿಗೆ ಭಯೋತ್ಪಾದಕ ಪಟ್ಟ ಕಟ್ಟಿದ ಆರೋಪ – ಪಿಇಎಸ್ ವಿವಿ ಉಪನ್ಯಾಸಕ ಅಮಾನತು
ತನ್ನನ್ನು ಅಪಹರಿಸಿದ್ದ ಖದೀಮರ ಬಗ್ಗೆ ಶರತ್ ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಕಿಡ್ನ್ಯಾಪ್ ಗ್ಯಾಂಗ್ಗಾಗಿ ಶೋಧ ನಡೆಸುತ್ತಿದ್ದಾರೆ. ಇದನ್ನೂ ಓದಿ: ಮೋದಿ ಇಸ್ರೇಲ್ಗೆ ಹೋಗಿಬಂದ ಮರುದಿನವೇ ಯುದ್ಧ ಶುರುವಾಯ್ತು: ಎಂ.ಬಿ ಪಾಟೀಲ್

