ವಾಷಿಂಗ್ಟನ್/ಜೆರುಸಲೆಂ: ಮಧ್ಯಪ್ರಾಚ್ಯ ಭೀಕರ ಯುದ್ಧ 28ನೇ ದಿನಕ್ಕೆ ಕಾಲಿಟ್ಟಿದೆ. ಇವತ್ತೂ ಇಸ್ರೇಲ್-ಇರಾನ್ ವಾರ್ ಮುಂದುವರಿದಿದೆ. ಇರಾನ್‌ನ ಕೋಮ್ ನಗರದಲ್ಲಿ ಇಸ್ರೇಲ್-ಅಮೆರಿಕ ಜಂಟಿ ದಾಳಿ (US Israel Joint Strikes) ನಡೆಸಿವೆ. ವಸತಿ ಪ್ರದೇಶದ ಮೇಲೆ ವಾಯುದಾಳಿ (Air Strikes) ನಡೆಸಿದ್ದು, 6 ಜನರು ಹತ್ಯೆಯಾಗಿದ್ದಾರೆ.
3 ವಸತಿ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಮತ್ತೊಂದೆಡೆ, ಹೆಜ್ಬೊಲ್ಲಾ ಹುಟ್ಟಡಗಿಸಲು ಪಣತೊಟ್ಟಿರುವ ಇಸ್ರೇಲ್, ಲೆಬನಾನ್ ಮೇಲೆ ನಿರಂತರ ದಾಳಿ ನಡೆಸಿದೆ. ಇಸ್ರೇಲ್ ದಾಳಿಯಲ್ಲಿ 13 ಮಂದಿ ಬಲಿಯಾಗಿದ್ದಾರೆ. ಇದನ್ನೂ ಓದಿ: ಗುಜರಾತ್‌ಗೆ ಬಂತು 47,600 ಮೆಟ್ರಿಕ್ ಟನ್ LPG ಹೊತ್ತ `ಜಗ್ ವಸಂತ್’ ಹಡಗು

ಇತ್ತ ಪ್ರತಿಯಾಗಿ ದಾಳಿ ನಡೆಸಿರುವ ಇರಾನ್, ಇಸ್ರೇಲ್ ಮೇಲೆ ಅಟ್ಯಾಕ್ ಮಾಡಿದೆ. ಟೆಲ್ ಅವಿವ್ ಮೇಲೆ ಇರಾನ್ ಡ್ರೋನ್ ಮತ್ತು ಕ್ಷಿಪಣಿ ದಾಳಿ ನಡೆಸಲಾಗಿದೆ.
ಇನ್ನೂ 10 ದಿನ ಕದನ ವಿರಾಮವನ್ನ ಟ್ರಂಪ್ (Donald Trump) ಮುಂದುವರಿಸಿದ್ದು, 10 ದಿನ ಇಂಧನ ಸ್ಥಾವರಗಳ ಮೇಲೆ ದಾಳಿ ಮಾಡಲ್ಲ. ಇರಾನ್ ಮನವಿ ಮೇರೆಗೆ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಅಂತಾ ತಿಳಿಸಿದ್ದಾರೆ. ಇದನ್ನೂ ಓದಿ: ಶತ್ರುಗಳಿಗೆ ಹಾರ್ಮುಜ್ ಜಲಸಂಧಿ ನಿರ್ಬಂಧಿಸುವುದು ಇರಾನ್‌ನ ಕಾನೂನುಬದ್ಧ ಹಕ್ಕು: ವಿಶ್ವಸಂಸ್ಥೆಯಲ್ಲಿ ಅರಘ್ಚಿ ಮಾತು

