– ನ್ಯೂಕ್ಲಿಯರ್ ಪವರ್‌ನಿಂದ ಸಂಪೂರ್ಣ ಹಿಂದೆ ಸರಿಯಬೇಕೆಂದು ಷರತ್ತು
– ಟ್ರಂಪ್ ಪ್ರಸ್ತಾಪ ತಿರಸ್ಕಾರ; ʻಪಂಚʼ ಬೇಡಿಕೆ ಮುಂದಿಟ್ಟ ಇರಾನ್
ವಾಷಿಂಗ್ಟನ್: ಮಧ್ಯಪ್ರಾಚ್ಯದ ಯುದ್ಧ ಆರಂಭವಾಗಿ 26 ದಿನಗಳಾಗಿವೆ. ಜಿದ್ದಿಗೆ ಬಿದ್ದಿರುವ ಮೂರು ರಾಷ್ಟ್ರಗಳು ಯುದ್ಧ ಮುಂದುವರಿಸಿವೆ. ಈ ನಡುವೆ ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) 15 ಅಂಶಗಳ ಶಾಂತಿ ಸಂಧಾನದ ಪ್ರಸ್ತಾಪವಿಟ್ಟಿದ್ದಾರೆ.
ಇರಾನ್ ಎದುರು 15 ಅಂಶಗಳ ಸಂಧಾನ ಸೂತ್ರವನ್ನ ಟ್ರಂಪ್ ತೆರೆದಿಟ್ಟಿದ್ದಾರೆ. ಈ ಪ್ರಸ್ತಾವನೆಯನ್ನು ಇರಾನ್ (Iran) ತಿರಸ್ಕಾರ ಮಾಡಿದೆ ಎಂದು ಇಬ್ಬರು ಪಾಕಿಸ್ತಾನಿ ಅಧಿಕಾರಿಗಳು ತಿಳಿಸಿದ್ದಾರೆ.
ಪಶ್ಚಿಮ ಏಷ್ಯಾಕ್ಕೆ 1,000 ಹೆಚ್ಚುವರಿ ಸೈನಿಕರನ್ನು ನಿಯೋಜಿಸಲು ಅಮೆರಿಕ ಸೇನೆ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲೇ ಈ ಬೆಳವಣಿಗೆ ಕಂಡುಬಂದಿದೆ. ವರದಿಗಳ ಪ್ರಕಾರ, ಅಮೆರಿಕ ಪಾಕಿಸ್ತಾನದಲ್ಲಿರುವ ಮಧ್ಯವರ್ತಿಗಳ ಪ್ರಕಾರ ಈ ಪ್ರಸ್ತಾವನೆಯನ್ನ ಇರಾನ್ ಮುಂದಿಡಲಾಗಿದೆ. ಆದ್ರೆ ಟ್ರಂಪ್ ಸಂಧಾನ ಪ್ರಸ್ತಾವನೆಯನ್ನ ಸಂಪೂರ್ಣವಾಗಿ ತಿರಸ್ಕಾರ ಮಾಡಿರುವ ಇರಾನ್ ʻಪಂಚʼ ಷರತ್ತುಗಳನ್ನ ಮುಂದಿಟ್ಟಿದೆ.

ಟ್ರಂಪ್ ಪ್ರಸ್ತಾಪಿಸಿದ ಪ್ರಮುಖ ಅಂಶಗಳು ಯಾವುದು?
* 1 ತಿಂಗಳ ಕಾಲ ಕದನ ವಿರಾಮ.
* ಇರಾನ್ ಅಭಿವೃದ್ಧಿಪಡಿಸಿರುವ ಅಣ್ವಸ್ತ್ರ ನಾಶ ಮಾಡ್ಬೇಕು
* ಎಂದಿಗೂ ಅಣ್ವಸ್ತ್ರ ಹೊಂದಲ್ಲ ಅಂತ ಒಪ್ಪಂದ ಮಾಡ್ಬೇಕು
* ಯುರೇನಿಯಂ ಸಂಗ್ರಹವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು
* ಒಪ್ಪಿದ ವೇಳಾಪಟ್ಟಿಯ ಅಡಿಯಲ್ಲಿ ಎಲ್ಲಾ ಸಂಗ್ರಹಿತ ಅಣ್ವಸ್ತ್ರ ವಸ್ತುಗಳನ್ನು ಐಎಇಎಗೆ ವರ್ಗಾಯಿಸಬೇಕು
* ನಟಾಂಜ್, ಇಸ್ಫಹಾನ್ ಮತ್ತು ಫೋರ್ಡೋ ಸೌಲಭ್ಯಗಳನ್ನು ಸ್ಥಗಿತಗೊಳಿಸಿ, ನಾಶಪಡಿಸಬೇಕು
* ಇರಾನ್‌ನೊಳಗಿನ ಎಲ್ಲಾ ಸಂಬಂಧಿತ ಮಾಹಿತಿಗಳಿಗೆ ಐಎಇಎಗೆ ಅನಿಯಂತ್ರಿತ ಪ್ರವೇಶ ನೀಡಬೇಕು
* ಇರಾನ್ ಈ ಪ್ರದೇಶದಲ್ಲಿ ತನ್ನ ಪ್ರಾಕ್ಸಿ ಆಧಾರಿತ ಕಾರ್ಯತಂತ್ರವನ್ನು ಕೊನೆಗೊಳಿಸುತ್ತಿದೆ.
* ಪ್ರಾಕ್ಸಿ ಗುಂಪುಗಳಿಗೆ ಹಣಕಾಸು, ಶಸ್ತ್ರಾಸ್ತ್ರಗಳನ್ನು ಪೂರೈಕೆಗೆ ಪೂರ್ಣ ವಿರಾಮ ಹಾಕಬೇಕು
* ಹೊರ್ಮುಜ್ ಜಲಸಂಧಿಯು ಉಚಿತ ಸಮುದ್ರ ಸಂಚಾರಕ್ಕಾಗಿ ಮುಕ್ತವಾಗಿರುವುದನ್ನು ಖಾತರಿಪಡಿಸುವುದು.
* ಕ್ಷಿಪಣಿ ವ್ಯಾಪ್ತಿ, ದಾಸ್ತಾನುಗಳ ಮೇಲೆ ಮಿತಿ ಹೇರಿಕೆಗೆ ಒಪ್ಪಬೇಕು
* ಮಿಲಿಟರಿ ಸಾಮರ್ಥ್ಯಗಳನ್ನು ರಕ್ಷಣಾತ್ಮಕ ಉದ್ದೇಶಗಳಿಗೆ ಮಾತ್ರ ಸೀಮಿತಗೊಳಿಸಬೇಕು
* ಇರಾನ್ ಮೇಲೆ ವಿಧಿಸಲಾದ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುವುದು.
* ಬುಶರ್‌ನಲ್ಲಿ ವಿದ್ಯುತ್ ಉತ್ಪಾದನೆಗಾಗಿ ನಾಗರಿಕ ಪರಮಾಣು ಇಂಧನ ಕಾರ್ಯಕ್ರಮ ಅಭಿವೃದ್ಧಿಪಡಿಸಲು ಬೆಂಬಲ.
* ಸ್ವಯಂಚಾಲಿತವಾಗಿ ನಿರ್ಬಂಧಗಳನ್ನು ಮರು ಹೇರಲು ಸ್ನ್ಯಾಪ್‌ಬ್ಯಾಕ್ ನಿಬಂಧನೆಯನ್ನು ತೆಗೆದುಹಾಕುವುದು.

ಈ ಎಲ್ಲಾ ಷರುತ್ತಗಳನ್ನು ಒಪ್ಪಿದ್ರೆ. ಇಸ್ರೇಲ್ ಕೂಡ ರಣಕಣದಿಂದ ಹಿಂದೆ ಸರಿಯಲಿದೆ ಅಂತ ಒಟ್ಟು 15 ಅಂಶಗಳ ಸಂಧಾನದ ಪ್ರಸ್ತಾಪವನ್ನು ಟ್ರಂಪ್ ಇರಾನ್ ಮುಂದೆ ಇಟ್ಟಿದ್ದಾರೆ. ಆದ್ರೆ ಟ್ರಂಪ್ ಪ್ರಸ್ತಾವನೆಯನ್ನ ತಿರಸ್ಕಾರ ಮಾಡಿರುವ ಇರಾನ್, ಪಂಚ ಬೇಡಿಕೆಗಳನ್ನ ಅಮೆರಿಕ ಮುಂದಿಟ್ಟಿದೆ.
ಇರಾನ್ ಷರತ್ತುಗಳೇನು?
* ಅಮೆರಿಕ ತಕ್ಷಣವೇ ಯುದ್ಧ ನಿಲ್ಲಿಸಬೇಕು
* ಅಮೆರಿಕವು ಭವಿಷ್ಯದಲ್ಲಿ ಮಿಲಿಟರಿ ದಾಳಿಗಳನ್ನ ನಡೆಸುವುದಿಲ್ಲ ಎಂದು ಖಾತ್ರಿಪಡಿಸಬೇಕು
* ಸಂಘರ್ಷದ ಸಮಯದಲ್ಲಿ ಅನುಭವಿಸಿದ ಹಾನಿ ಮತ್ತು ನಷ್ಟಗಳಿಗೆ ಆರ್ಥಿಕ ಪರಿಹಾರ ನೀಡಬೇಕು
* ಹಾರ್ಮುಜ್ ಜಲಸಂಧಿಯ ಮೇಲೆ ಔಪಚಾರಿಕ ನಿಯಂತ್ರಣ
* ಇರಾನ್‌ನ ಬ್ಯಾಲಿಸ್ಟಿಕ್ ಕ್ಷಿಪಣಿ ಕಾರ್ಯಕ್ರಮದ ಕುರಿತು ಯಾವುದೇ ಮಾತುಕತೆಗಳು ಅಥವಾ ನಿರ್ಬಂಧಗಳು ಹೇರದೇ ಇರುವುದು.

