ಬೆಂಗಳೂರು: ಸಾಕು ಕೋಳಿಗಳನ್ನು (Chicken) ತಿಂದು ಹಾಕಿವೆ ಎಂದು ಆರೋಪಿಸಿ ವ್ಯಕ್ತಿಯೋರ್ವ ಗುಂಡು ಹಾರಿಸಿ 2 ಬೀದಿ ನಾಯಿಗಳನ್ನು (Stray Dogs) ಕೊಲೆ ಮಾಡಿರುವ ಘಟನೆ ಬೆಂಗಳೂರಿನ (Bengaluru) ಅವಲಹಳ್ಳಿಯಲ್ಲಿ ನಡೆದಿದೆ.
ವೆಂಕಟೇಶ್ ಎಂಬವರ ಮೇಲೆ ಬೀದಿ ನಾಯಿಗಳನ್ನು ಕೊಲೆ ಮಾಡಿರುವ ಆರೋಪ ಹೊರಿಸಲಾಗಿದೆ. ಇಲ್ಲಿನ ಗುಂಡೂರಿನ ಬಳಿಯ ಪಾಶ್ಮಿನ ಬ್ರೂಕ್ವುಡ್ಸ್ ಅಪಾರ್ಟ್ಮೆಂಟ್ ಬಳಿ ಘಟನೆ ನಡೆದಿದೆ. ಸಾಕು ಕೋಳಿಗಳನ್ನು ಕೊಂದಿದೆ ಎಂದು ಆರೋಪಿಸಿ ವೆಂಕಟೇಶ್ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು – ರಾಹುಲ್ ಗಾಂಧಿ ಕೇರಳ ಪ್ರವಾಸ ರದ್ದು
ಸದ್ಯ ವೆಂಕಟೇಶ್ ಮೇಲೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲೈಸೆನ್ಸ್ ಇರುವ ಡಬ್ಬಲ್ ಬ್ಯಾರಲ್ ಗನ್ ಬಳಸಿ ಆರೋಪಿ ವೆಂಕಟೇಶ್ ನಾಯಿಗಳ ಮೇಲೆ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: 24 ಗಂಟೆ ಅಂತರದಲ್ಲಿ ದೆಹಲಿ ವಿಧಾನಸಭೆಗೆ ಮತ್ತೆ ಬಾಂಬ್ ಬೆದರಿಕೆ – 16 ಆರ್ಡಿಎಕ್ಸ್ ಐಇಡಿ ಇರಿಸಲಾಗಿದೆ ಎಂದು ಮೇಲ್

