ಬೆಳಗಾವಿ: ನಾಲ್ಕೈದು ದಿನ ಪೆಟ್ರೋಲ್ (Petrol) ಸಿಗುವುದಿಲ್ಲ ಎಂಬ ಫೇಕ್ ಮೆಸೇಜ್ (Fake Message) ನೋಡಿದ ಜನತೆ ತಮ್ಮ ವಾಹನಗಳಿಗೆ ಪೆಟ್ರೋಲ್ ತುಂಬಿಸಲು ಮುಗಿಬಿದ್ದ ಘಟನೆ ಬೆಳಗಾವಿಯಲ್ಲಿ (Belagavi) ನಡೆದಿದೆ.
ಸೋಮವಾರ ರಾತ್ರಿ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಜನರು ಸರತಿ ಸಾಲಿನಲ್ಲಿ ವಾಹನ ನಿಲ್ಲಿಸಿದ್ದರು. ಅಜಮ್ ನಗರ, ವೈಭವ್ ನಗರ, ಕೊಲ್ಲಾಪುರ ಸರ್ಕಲ್, ನೆಹರು ನಗರ, ಸೇಠ್ ಪೆಟ್ರೋಲ್ ಬಂಕ್, ವೈಭವ ನಗರ ಗಾಂಧಿ ನಗರ, ಚೆನ್ನಮ್ಮ ಸರ್ಕಲ್ ಹೀಗೆ ನಗರದಲ್ಲಿ ಬೈಕ್, ಕಾರುಗಳಿಗೆ ಪೆಟ್ರೋಲ್ ಹಾಕಿಸಿದ್ದಾರೆ. ಇದನ್ನೂ ಓದಿ: ಪಾನಿಪೂರಿ ವ್ಯಾಪಾರಕ್ಕೂ ತಟ್ಟಿದ ಗ್ಯಾಸ್ ಬಿಸಿ
ಕೆಲವರು ನೀರಿನ ಬಾಟಲಿಗಳಲ್ಲಿ ಪೆಟ್ರೋಲ್ ತುಂಬಿಸಿದ್ದಾರೆ. ದಿಢೀರ್ ದಟ್ಟಣೆಯಿಂದ ಪರಿಸ್ಥಿತಿ ನಿಯಂತ್ರಣ ಮಾಡಲು ಬಂಕ್ ಸಿಬ್ಬಂದಿಯೂ ಪರದಾಟ ನಡೆಸಿದರು.
ಭಾರತದಲ್ಲಿ ಪೆಟ್ರೋಲ್, ಡೀಸೆಲ್ ವಿತರಣೆಗೆ ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ. ಜನರು ಯಾವುದೇ ಸುಳ್ಳು ವದಂತಿಯನ್ನು ನಂಬುವ ಅಗತ್ಯವಿಲ್ಲ.

