Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಿನ್ನದ ದರ ದಾಖಲೆಯ ಕುಸಿತ – ಏರಿದ್ದ ಚಿನ್ನದ ಬೆಲೆ ದಿಢೀರ್‌ ಇಳಿಕೆಗೆ ಕಾರಣ ಏನು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಚಿನ್ನದ ದರ ದಾಖಲೆಯ ಕುಸಿತ – ಏರಿದ್ದ ಚಿನ್ನದ ಬೆಲೆ ದಿಢೀರ್‌ ಇಳಿಕೆಗೆ ಕಾರಣ ಏನು?

Latest

ಚಿನ್ನದ ದರ ದಾಖಲೆಯ ಕುಸಿತ – ಏರಿದ್ದ ಚಿನ್ನದ ಬೆಲೆ ದಿಢೀರ್‌ ಇಳಿಕೆಗೆ ಕಾರಣ ಏನು?

Public TV
Last updated: March 23, 2026 8:16 pm
Public TV
Share
5 Min Read
gold silver price drop market crash
SHARE

ನವದೆಹಲಿ: ಮಧ್ಯಪ್ರಾಚ್ಯದಲ್ಲಿ(Middle East War) ಯುದ್ಧ ತೀವ್ರಗೊಂಡ ಬೆನ್ನಲ್ಲೇ ಚಿನ್ನ ಬೆಳ್ಳಿಯ (Gold, Silver) ಮಾರುಕಟ್ಟೆ ಭಾರೀ ಪತನಗೊಂಡಿದೆ.

ಇಂದು ಕೇವಲ 3 ಗಂಟೆಯಲ್ಲೊ ಲೋಹ ಮಾರಕಟ್ಟೆಯಲ್ಲಿ ಒಟ್ಟಾರೆಯಾಗಿ 2 ಟ್ರಿಲಿಯನ್ ಡಾಲರ್‌(ಅಂದಾಜು 167.6 ಲಕ್ಷ ಕೋಟಿ ರೂ.) ಹೂಡಿಕೆ ಕರಗಿದೆ ಎಂದು ದಿ ಕೊಬೈಸ್ಸಿ ಲೆಟರ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದೆ.

ಅಮೂಲ್ಯ ಲೋಹಗಳಲ್ಲಿ ಇದೀಗ ವಿಚಿತ್ರವಾದ ಸಂಗತಿಯೊಂದು ನಡೆಯುತ್ತಿದೆ. ಯಾರೋ ದೊಡ್ಡ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿದ್ದಾರೆ ಎಂದು ಅನುಮಾನವನ್ನು ವ್ಯಕ್ತಪಡಿಸಿದೆ.

Something very strange is happening in precious metals right now:

In just 3 hours, gold and silver just erased a combined -$2 TRILLION in market cap.

Meanwhile, oil prices have erased their gains on the day and US stock market futures are nearly green.

Since the Iran War… pic.twitter.com/zP43wSr9wE

— The Kobeissi Letter (@KobeissiLetter) March 23, 2026

ದಾಖಲೆ ಕುಸಿತವಾಗಿದ್ದು ಯಾಕೆ?
ಸಾಧಾರಣವಾಗಿ ಷೇರು ಮಾರುಕಟ್ಟೆ (Share Market) ಕುಸಿದರೆ ವಿಶ್ವಾದ್ಯಂತ ಹೂಡಿಕೆದಾರರು ಚಿನ್ನ, ಬೆಳ್ಳಿ ಸುರಕ್ಷಿತ ಎಂಬ ಕಾರಣಕ್ಕೆ ಹೂಡಿಕೆಯನ್ನು ಮಾಡುತ್ತಾರೆ. ಅಮೆರಿಕ-ಇರಾನ್‌ ಯುದ್ಧ ಆರಂಭಗೊಂಡ ಕೆಲ ವಾರ ಮಾರುಕಟ್ಟೆಯಲ್ಲಿ ಈ ರೀತಿಯ ವರ್ತನೆಯೇ ಕಂಡು ಬಂದಿತ್ತು. ಆದರೆ ಈಗ ವಿಶ್ವದ ಷೇರು ಮಾರುಕಟ್ಟೆಯಲ್ಲಿ ರಕ್ತಪಾತವಾಗುತ್ತಿದ್ದರೆ ಇನ್ನೊಂದು ಕಡೆ ಚಿನ್ನ, ಬೆಳ್ಳಿಯ ದರವೂ ದಾಖಲೆ ಮಟ್ಟದಲ್ಲಿ ಕುಸಿತ ಕಾಣುತ್ತಿದೆ.

 

ಈ ಕಾರಣಕ್ಕೆ ದಿ ಕೊಬೈಸ್ಸಿ ಲೆಟರ್‌ ಮಾರುಕಟ್ಟೆಯಲ್ಲಿ ವಿಚಿತ್ರವಾದ ವಿದ್ಯಮಾನ ನಡೆಯುತ್ತಿದೆ ಎಂದು ಪೋಸ್ಟ್‌ ಮಾಡಿದೆ. ಈ ಕುಸಿತಕ್ಕೆ ಈಗ ನಾವು ಹಲವು ಕಾರಣಗಳನ್ನು ನೀಡಬಹುದು. ಒಂದನೇಯದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿ ತೆರೆಯದಿದ್ದರೆ ನಿಮ್ಮ ವಿದ್ಯುತ್‌ ಸ್ಥಾವರ ನಾಶ ಮಾಡುವುದಾಗಿ ಇರಾನಿಗೆ ಬೆದರಿಕೆ ಹಾಕಿದ್ದರು. ಇದನ್ನೂ ಓದಿ: ಟ್ರಂಪ್‌ ಹೇಳಿಕೆಯಿಂದ ಕಚ್ಚಾ ತೈಲದ ಬೆಲೆ ದಿಢೀರ್‌ ಭಾರೀ ಇಳಿಕೆ – ಈಗ ಮತ್ತೆ ಏರಿಕೆ

ಟ್ರಂಪ್‌ ಹೇಳಿಕೆಯಿಂದ ವಿಶ್ವದ ಷೇರು ಮಾರುಕಟ್ಟೆ ಭಾರೀ ಕುಸಿತವಾಗತೊಡಗಿದ್ದು ಹೂಡಿಕೆದಾರರು ಹೂಡಿಕೆಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನೊಂದು ಕಡೆ ಅಮೆರಿಕದ ಫೆಡರಲ್‌ ರಿಸರ್ವ್‌ ಬಡ್ಡಿದರವನ್ನು ಯಥಾಸ್ಥಿತಿಯಲ್ಲಿ ಉಳಿಸಿಕೊಳ್ಳುವ ನಿರ್ಧಾರವನ್ನು ಕೈಗೊಂಡಿದೆ. ಈ ನಿರ್ಧಾರದಿಂದ ಅಮೆರಿಕದ ಬಾಂಡ್‌ ಬಡ್ಡಿ ದರ ಏರಿಕೆ ಕಾಣುತ್ತಿದ್ದು 10 ವರ್ಷದ ಬಾಂಡ್‌ ಇಳುವರಿ 4.44% ಏರಿಕೆಯಾಗಿದೆ. ಪರಿಣಾಮ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದ ಹೂಡಿಕೆದಾರರು ಅಮೆರಿಕದ ಬಾಂಡ್‌ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

ಎರಡನೇಯದ್ದು ಮುಖ್ಯ ಕಾರಣ ಮೊದಲೇ ಹೇಳಿದಂತೆ ಯಾರೋ ದೊಡ್ಡ ಹೂಡಿಕೆದಾರರು ಭಾರೀ ಪ್ರಮಾಣದಲ್ಲಿ ಲಾಭ ಮಾಡಿದ ಬಳಿಕ ಚಿನ್ನದ ಮೇಲೆ ಹೂಡಿಕೆಯನ್ನು ಮಾಡುತ್ತಿರುವ ಸಾಧ್ಯತೆಯಿದೆ. ಕೋವಿಡ್‌ ಬಳಿಕ ಭಾರತವೂ ಸೇರಿದಂತೆ ಹಲವು ದೇಶಗಳ ಕೇಂದ್ರೀಯ ಬ್ಯಾಂಕ್‌ಗಳು ಭಾರೀ ಪ್ರಮಾಣದಲ್ಲಿ ಚಿನ್ನವನ್ನು ಖರೀದಿಸುತ್ತಿದ್ದವು. ಇದರಿಂದಾಗಿ ಬೇಡಿಕೆ ಜಾಸ್ತಿಯಾಗಿ ಚಿನ್ನದ ದರ ಏರಿಕೆಯಾಗತೊಡಗಿತು.

ಈಗ ಇರಾನ್‌ ಯುದ್ಧದಿಂದಾಗಿ ಕಚ್ಚಾ ತೈಲ ದರಗಳು ಭಾರೀ ಏರಿಕೆ ಕಾಣತೊಡಗಿದೆ. ಮಾ.10 ರ ಬಳಿಕ ಸುಮಾರು 95 ದೇಶಗಳು ಪೆಟ್ರೋಲ್‌ ದರವನ್ನು ಏರಿಕೆ ಮಾಡಿವೆ. ಬೆಲೆ ಏರಿಕೆ ನಿಯಂತ್ರಿಸಲು ಹಲವು ದೇಶಗಳು ಭಾರೀ ಪ್ರಯತ್ನ ನಡೆಸುತ್ತಿದ್ದು ಈಗ ಬಂದಿರುವ ಮಾಹಿತಿ ಪ್ರಕಾರ ಕೆಲ ದೇಶಗಳು ತಮ್ಮಲ್ಲಿರುವ ಚಿನ್ನವನ್ನು ಮಾರಾಟ ಮಾಡಲು ಮುಂದಾಗಿವೆ.

ಚಿನ್ನ, ಬೆಳ್ಳಿಯ ಪ್ರಮುಖ ಮಾರುಕಟ್ಟೆ ಮಧ್ಯಪ್ರಾಚ್ಯ ದೇಶಗಳು. ಯುದ್ಧದ ಕಾರಣದಿಂದ ಮಧ್ಯಪ್ರಾಚ್ಯ ದೇಶಗಳಲ್ಲಿ ವಿಮಾನ ಸೇವೆಯೇ ಬಂದ್‌ ಆಗಿದೆ. ಪರಿಣಾಮ ಪ್ರವಾಸೋದ್ಯಮ ಕ್ಷೇತ್ರ, ರಿಯಲ್‌ ಎಸ್ಟೇಟ್‌, ಹೋಟೆಲ್‌ ಉದ್ಯಮಕ್ಕೆ ಭಾರೀ ಪೆಟ್ಟು ಬಿದ್ದಿದೆ. ಚಿನ್ನ ಖರೀದಿಯೇ ಕಡಿಮೆಯಾಗುತ್ತಿರುವ ಕಾರಣ ಬೆಲೆ ಸಹ ಇಳಿಕೆಯಾಗುತ್ತಿದೆ.

 

ಸಾಮಾನ್ಯವಾಗಿ ಪ್ರಯಾಣಿಕ ವಿಮಾನಗಳ ಸರಕು ವಿಭಾಗಗಳಲ್ಲಿ ಚಿನ್ನವನ್ನು ಸಾಗಿಸಲಾಗುತ್ತದೆ. ಯುಎಇ ವಿಮಾನಗಳಿಗೆ ನಿರ್ಬಂಧ ಹೇರಿದ ಕಾರಣ ವ್ಯಾಪಾರಿಗಳು ಮತ್ತು ಲಾಜಿಸ್ಟಿಕ್ಸ್ ಪೂರೈಕೆದಾರರು ಸೌದಿ ಅರೇಬಿಯಾ ಅಥವಾ ಓಮನ್‌ನಂತಹ ನೆರೆಯ ರಾಷ್ಟ್ರಗಳಿಗೆ ರಸ್ತೆಗಳ ಮೂಲಕ ಬೆಳ್ಳಿ ಮತ್ತು ಚಿನ್ನವನ್ನು ಸಾಗಿಸಲು ಹಿಂಜರಿಯುತ್ತಿದ್ದಾರೆ. ವಿಶೇಷವಾಗಿ ಭೂ ಗಡಿಗಳನ್ನು ದಾಟುವಾಗ ಅಪಾಯ ಜಾಸ್ತಿ. ಈ ಕಾರಣಕ್ಕೆ ದುಬೈಯ ಕೆಲ ವ್ಯಾಪಾರಿಗಳು ಮೂಲ ದರಕ್ಕಿಂತಲೂ ಕಡಿಮೆ ದರದಲ್ಲಿ ಚಿನ್ನ ಮಾರಾಟ ಮಾಡಲು ಡಿಸ್ಕೌಂಟ್‌ ಪ್ರಕಟಿಸಿದರೂ ಮೊದಲಿನಂತೆ ಖರೀದಿ ನಡೆಯುತ್ತಿಲ್ಲ. ಡಾಲರ್‌ ದರ ಏರಿಕೆ ಇನ್ನೊಂದು ಕಡೆ ಚಿನ್ನದ ಬೇಡಿಕೆ ಕಡಿಯಾಗುತ್ತಿರುವ ಈಗ ಚಿನ್ನದ ದರ ಭಾರೀ ಇಳಿಕೆ ಕಂಡಿದೆ.

ಒಂದು ಕಡೆ ಎಐ ಕ್ರಾಂತಿ, ಇನ್ನೊಂದು ಕಡೆ ಯುದ್ಧ ಭೀತಿಯಿದೆ. ಒಂದು ವೇಳೆ ಕಚ್ಚಾ ತೈಲದ ಒಂದು ಬ್ಯಾರೆಲ್‌ಗೆ 150 ಡಾಲರ್‌ ಗಡಿ ದಾಟಿದರೆ ಹಲವು ದೇಶಗಳ ಆರ್ಥಿಕತೆ ನೆಲಕಚ್ಚುವ ಸಾಧ್ಯತೆಯಿದೆ. ಈ ಕಾರಣಕ್ಕೆ ಹೂಡಿಕೆದಾರರು ಚಿನ್ನ ಬೆಳ್ಳಿಯ ಮೇಲೆ ಹೂಡಿಕೆಗಿಂತಲೂ ಅಮೆರಿಕದ ಡಾಲರ್‌ ಬಾಂಡ್‌ ಮೇಲೆ ಹೂಡಿಕೆ ಮಾಡುತ್ತಿದ್ದಾರೆ.

ಭಾರತದಲ್ಲಿ ಚಿನ್ನ, ಬೆಳ್ಳಿಯ ವ್ಯವಹಾರಗಳು ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್‌ ಆಫ್‌ ಇಂಡಿಯಾದಲ್ಲಿ ನಡೆಯುತ್ತಿದೆ. ಇಲ್ಲಿ ಹೂಡಿಕೆದಾರರು ಚಿನ್ನ, ಬೆಳ್ಳಿಯನ್ನು ನೇರವಾಗಿ ಖರೀದಿ ಮಾಡದೇ ಡಿಜಿಟಲ್‌ ರೂಪದಲ್ಲಿ ಮುಂದೆ ದರ ಇಷ್ಟು ಏರಿಕೆಯಾಗಬಹುದು ಎಂದು ಊಹಿಸಿ ಹಣವನ್ನು ಹೂಡಿಕೆ ಮಾಡುತ್ತಾರೆ. ಪ್ರತಿ ತಿಂಗಳ ಐದರಂದು ಈ ಹೂಡಿಕೆ ಎಕ್ಸ್‌ಪೈರಿ ಆಗುತ್ತದೆ. ಕಳೆದ ಶುಕ್ರವಾರ(ಮಾ.20) 10 ಗ್ರಾಂ ಚಿನ್ನದ ಫ್ಯೂಚರ್‌ 1,44,492 ರೂ.ನಲ್ಲಿ ವ್ಯವಹಾರ ಮುಗಿಸಿತ್ತು. ಇಂದು 14,897 ರೂ.(10.3%) ಇಳಿಕೆಯಾಗಿ 1,29,595 ರೂ.ನಲ್ಲಿ ವ್ಯವಹಾರ ಮುಗಿಸಿದೆ. ಆದರೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ದರ ಕುಸಿದ ಸುದ್ದಿ ಪ್ರಕಟವಾದ ಬೆನ್ನಲ್ಲೇ ಇಲ್ಲೂ ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆಯನ್ನು ಮಾರಾಟ ಮಾಡಿದ್ದಾರೆ. ಇದನ್ನೂ ಓದಿ: ಇರಾನ್‌ ಯುದ್ಧ – ಚಿನ್ನ, ಬೆಳ್ಳಿ ದರ ಭಾರೀ ಇಳಿಕೆ

ಚಿನ್ನ, ಬೆಳ್ಳಿ ಫ್ಯೂಚರ್‌ ದರ ಕಡಿಮೆಯಾದ ಬೆನ್ನಲ್ಲೇ ಎಂಸಿಎಕ್ಸ್‌ ಷೇರು ಮೌಲ್ಯ ಇಂದು ಒಂದು ದಿನ 100.10 ರೂ.(4.15%) ಇಳಿಕೆಯಾಗಿದೆ. ಶುಕ್ರವಾರ(ಮಾ.20) 2414.50 ರಲ್ಲಿ ವ್ಯವಹಾರ ಮುಗಿಸಿದ ಎಂಸಿಎಕ್ಸ್‌ ಒಂದು ಷೇರು ಇಂದು 2,314.40 ರೂ. ನಲ್ಲಿ ವ್ಯವಹಾರ ಮುಗಿಸಿದೆ. ಈ ಎಂಸಿಎಕ್ಸ್‌ ಚಿನ್ನದ ಬೆಲೆ ಭಾರತ ಆಭರಣ ಅಂಗಡಿಯಲ್ಲಿರುವ ಚಿನ್ನದ ಬೆಲೆಯನ್ನು ಪ್ರತಿಬಿಂಬಿಸುವುದಿಲ್ಲ. ಆದರೆ MCX ಚಿನ್ನದ ಬೆಲೆಯು ಭಾರತದಲ್ಲಿ ಚಿನ್ನದ ಬೆಲೆಗಳಿಗೆ ಅತ್ಯಂತ ನಿರ್ಣಾಯಕ ಸೂಚಕಗಳಲ್ಲಿ ಒಂದಾಗಿದೆ.
TAGGED:donald trumpgoldIran WarShare Marketsilverಇರಾನ್‌ ಯುದ್ಧಚಿನ್ನಡೊನಾಲ್ಡ್ ಟ್ರಂಪ್ಬೆಳ್ಳಿಭಾರತಷೇರು ಮಾರುಕಟ್ಟೆ
Share This Article
Facebook Whatsapp Whatsapp Telegram

Cinema news

Vijay Deverakonda Rashmika Mandanna
ಮದ್ವೆ ಬಳಿಕ ಬಳಿಕ ಒಟ್ಟಿಗೆ ಶೂಟಿಂಗ್‌ಗೆ ತೆರಳಿದ ವಿರೋಶ್ ಜೋಡಿಗೆ ಅದ್ಧೂರಿ ಸ್ವಾಗತ
Cinema Latest Sandalwood South cinema Top Stories
Amita Singh Tomar
ಕೌನ್ ಬನೇಗಾ ಕರೋಡ್ ಪತಿಯಲ್ಲಿ 50 ಲಕ್ಷ ಗೆದ್ದಿದ್ದ ತಹಶೀಲ್ದಾರ್ ಅರೆಸ್ಟ್‌!
Cinema Crime Latest National Top Stories TV Shows
Dhurandhar 2 2
ಒಂದೇ ವಾರದಲ್ಲಿ 1000 ಕೋಟಿ ಕ್ಲಬ್ ಸೇರಿದ `ಧುರಂಧರ್ 2′
Bollywood Cinema Latest Top Stories
Rashmika Vijay 5
ಹನಿಮೂನ್ ಅಲ್ಲ ಬಡ್ಡೀಮೂನ್ – ರಶ್ಮಿಕಾ, ವಿಜಯ್ ಹೊಸ ಟ್ರೆಂಡ್
Cinema Latest South cinema Top Stories

You Might Also Like

Hoskote Container Car Accident 1
Bengaluru City

ಕಂಟೇನರ್ ಲಾರಿ, ಕಾರು ನಡುವೆ ಭೀಕರ ಅಪಘಾತ – ಧಗಧಗನೆ ಹೊತ್ತಿ ಉರಿದ ಕಾರು

Public TV
By Public TV
8 minutes ago
Volodymyr Zelenskyy 2
Latest

ಇರಾನ್‌ ದಾಳಿಗೂ ಮುನ್ನ ರಷ್ಯಾ ಹಿಂದೂ ಮಹಾಸಾಗರದ ಮಿಲಿಟರಿ ಕೇಂದ್ರದ ಉಪಗ್ರಹ ಚಿತ್ರ ತೆಗೆದುಕೊಂಡಿತ್ತು: ಝೆಲೆನ್ಸ್ಕಿ

Public TV
By Public TV
10 minutes ago
Cicada Virus
Explainer

Explainer | ಅಮೆರಿಕದ 25ಕ್ಕೂ ಅಧಿಕ ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿದ ಕೋವಿಡ್‌ ರೂಪಾಂತರಿ – ಸಿಕಾಡಾ ಎಷ್ಟು ಡೇಂಜರ್?‌ ಲಕ್ಷಣಗಳೇನು?

Public TV
By Public TV
33 minutes ago
Anekal Family Suicide
Bengaluru City

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ – ಇಬ್ಬರು ಸಾವು

Public TV
By Public TV
44 minutes ago
chinnaswamy stadium
Bengaluru City

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳ್ಳರ ಕೈಚಳಕ – 15 ಕ್ಕೂ ಹೆಚ್ಚು ಮೊಬೈಲ್ ಕಳ್ಳತನ ಕೇಸ್ ದಾಖಲು

Public TV
By Public TV
54 minutes ago
egg manchuri 2
Food

ಟೇಸ್ಟಿಯಾದ ಎಗ್ ಮಂಚೂರಿ ಹೀಗೆ ಮಾಡಿ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?