Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೆರೆ ಹೂಳೆತ್ತಲು ರಾಜ್ಯ ಸರ್ಕಾರ ಪ್ರತ್ಯೇಕ ಹಣ ಮೀಸಲಿಡಬೇಕು: ಬೊಮ್ಮಾಯಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಕೆರೆ ಹೂಳೆತ್ತಲು ರಾಜ್ಯ ಸರ್ಕಾರ ಪ್ರತ್ಯೇಕ ಹಣ ಮೀಸಲಿಡಬೇಕು: ಬೊಮ್ಮಾಯಿ

Districts

ಕೆರೆ ಹೂಳೆತ್ತಲು ರಾಜ್ಯ ಸರ್ಕಾರ ಪ್ರತ್ಯೇಕ ಹಣ ಮೀಸಲಿಡಬೇಕು: ಬೊಮ್ಮಾಯಿ

Public TV
Last updated: March 22, 2026 3:20 pm
Public TV
Share
3 Min Read
basavaraj bommai 1
SHARE

– ನಮ್ಮ ಹೊಲ, ನಮ್ಮ ಕೆರೆ ಭಾವನೆ ಬೆಳೆಸಿಕೊಂಡರೆ ಗ್ರಾಮ ಸುರಾಜ್ಯ

ಹಾವೇರಿ: ರಾಜ್ಯ ಸರ್ಕಾರಕ್ಕೆ ರೈತರನ್ನು ಉಳಿಸಿಕೊಳ್ಳಬೇಕೆಂಬ ಮನಸಿದ್ದರೆ ಕೆರೆಗಳನ್ನು (Lake) ಉಳಿಸಬೇಕು. ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಪ್ರವಾಹ ಆಗುವುದಿಲ್ಲ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕೆರೆ ಹೂಳು ತೆಗೆಯಲು 200 ಕೋಟಿ ರೂ. ಇಟ್ಟಿದ್ದರು. ಅದೇ ರೀತಿ ಕೆರೆ ಹೂಳು ತೆಗೆಯಲು ರಾಜ್ಯ ಸರ್ಕಾರ ಪ್ರತ್ಯೇಕ ಹಣ ಮೀಸಲಿಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಹಾವೇರಿಯಲ್ಲಿ (Haveri) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿಗ್ಗಾವಿ, ಸವಣೂರು ತಾಲೂಕುಗಳು ಕೆರೆಗಳಿಂದ ಕೂಡಿವೆ. ಸುಮಾರು ಐನೂರು ಕೆರೆಗಳಿವೆ. ಅವುಗಳಲ್ಲಿ ಕನಿಷ್ಟ 100 ದೊಡ್ಡ ಕೆರೆಗಳಿವೆ. 150ಕ್ಕಿಂತ ಹೆಚ್ಚು ದೊಡ್ಡ ಮತ್ತು ಸಣ್ಣ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು. 2015, 16, 17ರಲ್ಲಿ ಬರಗಾಲ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆರೆ ಹೂಳು ತೆಗೆಯುವ ಕೆಲಸ ಆಯಿತು. ಇಂತಹ ಭಗೀರಥ ಕೆಲಸಕ್ಕೆ ಭಾರತ ಸೇವಾ ಸಂಸ್ಥೆ ಕೆರೆಗಳ ಹೂಳು ತೆಗೆಯಲು ದೊಡ್ಡ ಸಹಾಯ ಮಾಡಿದೆ. ಎರಡು ಮೂರು ವರ್ಷದಿಂದ ಒಳ್ಳೆಯ ಮಳೆಯಾಗಿದೆ. ಆದ್ದರಿಂದ ಹೂಳು ತೆಗೆಯಲು ಆಗಿರಲಿಲ್ಲ. ಈ ವರ್ಷ ಬೇಸಿಗೆಗೆ ಕೆರೆ ಬತ್ತಿ ಹೋಗಿರುವುದರಿಂದ ಮತ್ತೆ ಹೂಳು ತೆಗೆಯುವ ಕೆಲಸ ಮಾಡಲು ಶ್ರೀಕಾಂತ ದುಂಡಿಗೌಡರು ಭಾರತ ಸೇವಾ ಸಂಸ್ಥೆ ವತಿಯಿಂದ ಹೂಳು ತೆಗೆಯುವ ಕೆಲಸ ಮಾಡಿದ್ದಾರೆ. ಪ್ರತಿಯೊಂದು ಜಿಲ್ಲಾ ಪಂಚಾಯತಿಯಲ್ಲಿ ಕನಿಷ್ಟ ಒಂದು ಕೆರೆ ಹೂಳೆತ್ತುವ ತೀರ್ಮಾನ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ಕೌಟುಂಬಿಕ ಕಲಹ – ಮಲಗಿದ್ದಾಗ ಗಂಡನ ಮರ್ಮಾಂಗಕ್ಕೆ ಒದ್ದ ಪತ್ನಿ!

ಇದರಿಂದ ಪ್ರೇರಣೆ ಪಡೆದು ಇನ್ನಷ್ಟು ಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೂಳು ತೆಗೆಯುವ ಕೆಲಸ ಮಾಡಿದರೆ ನಮ್ಮ ಹೊಲ, ನಮ್ಮ ಮನೆ ಎನ್ನುವ ಭಾವನೆ ಇದೆ. ಅದೇ ರೀತಿ ನಮ್ಮ ಹೊಲ, ನಮ್ಮ ಮನೆ, ನಮ್ಮ ಕೆರೆ ನಮ್ಮ ಊರು ಎಂಬ ಭಾವನೆ ಬೆಳೆಸಿಕೊಂಡರೆ ಹಳ್ಳಿಗಳು ನಮಗೆ ಗ್ರಾಮ ಸ್ವರಾಜ್ಯ ಸಿಕ್ಕಿದೆ. ಸ್ವರಾಜ್ಯದಿಂದ ಸುರಾಜ್ಯ ಆಗುತ್ತವೆ. ಆ ನಿಟ್ಟಿನಲ್ಲಿ ಶ್ರೀಕಾಂತ ಅವರ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಕೆರೆಯಲ್ಲಿ ಮೂರು ಕಾಡಾನೆಗಳು ಪ್ರತ್ಯಕ್ಷ – ಗ್ರಾಮಸ್ಥರಲ್ಲಿ ಆತಂಕ

Basavaraj Bommai

ಕೆರೆ ಹೂಳೆತ್ತಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಏನು ಮಾಡಬೇಕೆಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಪ್ರಧಾನ ಮಂತ್ರಿ ಸಿಂಚಾಯಿ ಯೋಜನೆಯಲ್ಲಿ ಹಾವೇರಿ ಜಿಲ್ಲೆ ಸೇರಿದೆ. ಹಾವೇರಿಗೆ ಕ್ರಿಯಾ ಯೋಜನೆ ಆಗಿದೆ. ಆ ಯೋಜನೆ ಅಡಿಯಲ್ಲಿ ಪ್ರತಿ ತಾಲೂಕಿಗೂ ಕೆರೆ ಅಭಿವೃದ್ಧಿಗೆ ಹಣ ಬರುತ್ತದೆ. ರಾಜ್ಯ ಸರ್ಕಾರ ಯಡಿಯೂರಪ್ಪ ಮುಖ್ಯಮಂತ್ರಿ ಇದ್ದಾಗ 200 ಕೋಟಿ ರೂ. ಕೆರೆ ಹೂಳು ತೆಗೆಯಲು ಇಟ್ಟಿದ್ದರು. ಅದೇ ರೀತಿ ಕೆರೆ ಹೂಳು ತೆಗೆಯಲು ಹಣ ಇಡಬೇಕು, ಕೆರೆಗಳ ರಕ್ಷಣೆ ಮಾಡಿದರೆ ನಮ್ಮ ಭೂಮಿ ರಕ್ಷಣೆ ಆಗುತ್ತದೆ. ಅದು ನಿಸರ್ಗದತ್ತವಾಗಿರುವುದು. ಅದಕ್ಕೆ ಕೆರೆಗಳಿಗೆ ಫ್ಲಡ್ ಕ್ಯಾರಿಯರ್ಸ್ ಅನ್ನುತ್ತಾರೆ. ಕೆರೆಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಪ್ರವಾಹ ಆಗುವುದಿಲ್ಲ, ರಾಜ್ಯ ಸರ್ಕಾರಕ್ಕೆ ರೈತರನ್ನು ಉಳಿಸಿಕೊಳ್ಳಬೇಕೆಂಬ ಮನಸಿದ್ದರೆ ಕೆರೆಗಳನ್ನು ಉಳಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ಫ್ಲೆಕ್ಸ್‌ ವಿಚಾರದಲ್ಲಿ ಕೊನೆಗೂ ಎಚ್ಚೆತ್ತ ಮಂಡ್ಯ ಎಸ್ಪಿ

ಎರಡೂ ಕ್ಷೇತ್ರದಲ್ಲಿ ಜಯ:
ಉಪ ಚುನಾವಣೆಯ ಕುರಿತು ಮಾತನಾಡಿ, ನಾವು ಬಹಳ ಲೆಕ್ಕಾಚಾರ ಹಾಕಿ ದಾವಣಗೆರೆಯಲ್ಲಿ ಟಿಕೆಟ್ ನೀಡಿದ್ದೇವೆ. ಬರುವಂತಹ ದಿನಗಳಲ್ಲಿ ಬಡವರು, ಎಸ್ಸಿ ಎಸ್ಟಿ ಜನರಿಂದ ದೊಡ್ಡ ಪ್ರಮಾಣದಲ್ಲಿ ಬೆಂಬಲ ಸಿಗುತ್ತದೆ. ಆಶ್ಚರ್ಯಕರ ಫಲಿತಾಂಶ ದಾವಣಗೆರೆಯಲ್ಲಿ ದೊರೆಯುತ್ತದೆ. ಬಾಗಲಕೋಟೆಯಲ್ಲಿ ವಿಜಯ ಪಥದಲ್ಲಿ ನಾವು ಹೋಗುತ್ತಿದ್ದೇವೆ. ಕಳೆದ ಬಾರಿ ಕಾಂಗ್ರೆಸ್ ಸೇರಿದ್ದ ಅನೇಕ ಮುಖಂಡರು ಬಿಜೆಪಿಗೆ ಸೇರುತ್ತಿದ್ದಾರೆ. ಹೀಗಾಗಿ ಬಾಗಲಕೋಟೆಯಲ್ಲಿ ದೊಡ್ಡ ಪ್ರಮಾಣದ ಅಂತರದಲ್ಲಿ ಗೆಲ್ಲುತ್ತೇವೆ. ದಾವಣಗೆರೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಬಾವುಟ ಹಾರಿಸುತ್ತೇವೆ ಎಂದರು. ಇದನ್ನೂ ಓದಿ: 8,931 ದಿನಗಳ ಆಡಳಿತ; ಸಿಎಂ, ಪಿಎಂ ಆಗಿ ಮೋದಿ ಐತಿಹಾಸಿಕ ದಾಖಲೆ

ಇದೇ ವೇಳೆ, ಶ್ರೀಕಾಂತ ದುಂಡಿಗೌಡರ್ ಅವರನ್ನು ಪಕದಿಂದ ಉಚ್ಚಾಟಿಸಲಾಗಿದ್ದು, ಅವರನ್ನು ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳುವ ಕುರಿತು ಕೇಳಿದ ಪ್ರಶ್ನೆಗೆ ಈ ಕುರಿತು ಪಕ್ಷದಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಕುಟುಂಬಸ್ಥರಿಂದಲೇ ಪಾಕ್‌ನ ಲಷ್ಕರ್‌ ಭಯೋತ್ಪಾದಕ ಬಿಲಾಲ್ ಆರಿಫ್‌ಗೆ ಚಾಕುವಿನಿಂದ ಇರಿದು, ಗುಂಡಿಕ್ಕಿ ಹತ್ಯೆ

TAGGED:Basavaraj Bommaibjpcongresshaverilakeಕಾಂಗ್ರೆಸ್ಕೆರೆಬಸವರಾಜ್ ಬೊಮ್ಮಾಯಿಬಿಜೆಪಿಹಾವೇರಿ
Share This Article
Facebook Whatsapp Whatsapp Telegram

Cinema news

Dhurandhar 2 1
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ
Bollywood Cinema Latest Top Stories
Dhurandhar 2
ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ‘ಧುರಂಧರ್‌ 2’ – ಮೂರೇ ದಿನದಲ್ಲಿ ವಿಶ್ವಾದ್ಯಂತ 500 ಕೋಟಿ ಕಲೆಕ್ಷನ್‌
Bollywood Cinema Latest Top Stories
Puneeth Rajakumar
800 ಕೆ.ಜಿ ಕಂಚಿನ ಅಪ್ಪು ಪುತ್ಥಳಿ ಅನಾವರಣ
Bengaluru City Cinema Districts Karnataka Latest Sandalwood Top Stories
Moogathi Malli
ಮೂಗುತಿ ಮಲ್ಲಿ: ಚೂಟಿ ಹುಡುಗಿ, ಘಾಟಿ ಬೆಡಗಿ!
Cinema Latest Sandalwood Top Stories

You Might Also Like

gold silver 1
Latest

ಇರಾನ್‌ ಯುದ್ಧ – ಚಿನ್ನ, ಬೆಳ್ಳಿ ದರ ಭಾರೀ ಇರಿಕೆ

Public TV
By Public TV
4 seconds ago
Samarth Shamanur
Davanagere

ಕುಟುಂಬ ರಾಜಕಾರಣ ಬೆಂಬಲಿಸಲ್ಲ, ಗೆಲ್ಲುವ ಅಭ್ಯರ್ಥಿಗೆ ಟಿಕೆಟ್ – ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ ಬಳಿಕ ಸಿಎಂ ಮಾತು

Public TV
By Public TV
7 minutes ago
Toll
Latest

ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ದರ ಏರಿಕೆ – ಏ.1ರಿಂದ ಪ್ರಯಾಣ ದುಬಾರಿ

Public TV
By Public TV
8 minutes ago
NS Boseraju World Water Day 2026
Bengaluru City

ಕೆರೆಗಳ ಪುನರುಜ್ಜೀವನದ ಜೊತೆಯಲ್ಲಿ ರಾಜ್ಯದ ಜಲ ಸುಸ್ಥಿರತೆಗೆ ಸರ್ಕಾರ ಬದ್ಧ: ಎನ್‌ಎಸ್ ಬೋಸರಾಜು

Public TV
By Public TV
33 minutes ago
tiger found in bheemanabeedu
Chamarajanagar

ಚಾ.ನಗರ| ಭೀಮನಬೀಡು ಗ್ರಾಮದಲ್ಲಿ ಮತ್ತೆ ಹುಲಿ ಪ್ರತ್ಯಕ್ಷ – ಗ್ರಾಮಸ್ಥರಲ್ಲಿ ಆತಂಕ

Public TV
By Public TV
34 minutes ago
Gas Cylinder Theft
Bidar

ಗ್ಯಾಸ್ ಅಭಾವದ ಮಧ್ಯೆ ಬೀದರ್‌ನ ಸರ್ಕಾರಿ ಶಾಲೆಯ 6 ಸಿಲಿಂಡರ್ ಕಳ್ಳತನ

Public TV
By Public TV
44 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?