ನಾನ್‍ವೆಜ್ ತಿನ್ನೋರಿಗೆ ಏನಾದ್ರೂ ಹೊಸ ರೀತಿ ರೆಸಿಪಿ ತಿನ್ನಬೇಕು ಅಂತ ಅನ್ನಿಸುತ್ತಲೇ ಇರುತ್ತೆ. ಆಗ ವಿಭಿನ್ನವಾಗಿ ಮಾಡ್ಬೋದು ಚಿಕನ್ ಲೆಗ್ ಫ್ರೈ. ಒಮ್ಮೆ ತಿಂದ್ರೆ ನಿಜಕ್ಕೂ ಮತ್ತೆ ಸವಿಯಬೇಕು ಅಂತ ಅನಿಸುತ್ತೆ. ಅಷ್ಟು ಚೆನ್ನಾಗಿರುತ್ತೆ ಚಿಕನ್ ಲೆಗ್ ಫ್ರೈ

ಬೇಕಾಗಿರುವ ಸಾಮಾಗ್ರಿಗಳು:
ಚಿಕನ್
ಮೈದಾ
ಕರಿಮೆಣಸು ಪುಡಿ
*ಚಾಟ್ ಮಸಾಲಾ
*ಜೀರಿಗೆ ಪುಡಿ
*ಗರಂ ಮಸಾಲಾ
ಮೊಟ್ಟೆ
ಅರಿಶಿನ ಪುಡಿ
ಉಪ್ಪು
ಎಣ್ಣೆ
ಕಡಲೆ ಹಿಟ್ಟು
ಸೋಯಾ ಸಾಸ್
ಶುಂಠಿ, ಬೆಳ್ಳುಳ್ಳಿ ಪೇಸ್ಟ್
ಹಸಿರು ಮೆಣಸಿನಕಾಯಿ
ಕೆಂಪು ಖಾರದ ಪುಡಿ

ಮಾಡುವ ವಿಧಾನ:
ಮೊದಲಿಗೆ ಒಂದು ಬೌಲ್‌ನಲ್ಲಿ ಚೆನ್ನಾಗಿ ತೊಳೆದಿರುವ ಚಿಕನ್ ಹಾಕಿಕೊಳ್ಳಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಕೆಂಪು ಖಾರದ ಪುಡಿ, ಕರಿಮೆಣಸಿನ ಪುಡಿ, ಗರಂ ಮಸಾಲ, ಜೀರಿಗೆ ಪುಡಿ, ಸಣ್ಣದಾಗಿ ಹೆಚ್ಚಿದ ಮೆಣಸಿನಕಾಯಿ, ಅರಿಶಿನ ಪುಡಿ, ಚಾಟ್ ಮಸಾಲ, ಸೋಯಾ ಸಾಸ್, ಬಳಿಕ ಅದಕ್ಕೆ ಒಂದು ಮೊಟ್ಟೆ ಒಡೆದುಕೊಳ್ಳಿ ಮತ್ತು ರುಚಿಗೆ ತಕ್ಕಂತೆ ಉಪ್ಪು ಸೇರಿಸಿ, ಚೆನ್ನಾಗಿ ಕಲಸಿಕೊಳ್ಳಿ. ಬಳಿಕ ಕಡ್ಲೆ ಹಿಟ್ಟು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, 30 ನಿಮಿಷಗಳ ಕಾಲ ಬಿಡಿ.

ಒಂದು ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ. ನಂತರ ಎಣ್ಣೆಗೆ ಒಂದೊಂದಾಗಿ ಮ್ಯಾರಿನೇಟ್ ಮಾಡಿಕೊಂಡ ಚಿಕನ್ ಹಾಕಿ ಫ್ರೈ ಮಾಡಿ. ಸುಮಾರು 10-12 ನಿಮಿಷಗಳ ಕಾಲ ಫ್ರೈ ಮಾಡಿ. ಇಷ್ಟಾದರೇ ರುಚಿಕರವಾದ ಚಿಕನ್ ಲೆಗ್ ಫ್ರೈ ರೆಡಿ.

