ಹಾವೇರಿ: ಐತಿಹಾಸಿಕ ಮಲ್ಲೇಶ್ವರ ಗುಡ್ಡಕ್ಕೆ ಕಿಡಿಗೇಡಿಗಳು ಬೆಂಕಿಯಿಟ್ಟ ಪರಿಣಾಮ ಧಗದಗನೇ ಹೊತ್ತಿ ಉರಿದಿದೆ.
ಹಾವೇರಿ (Haveri) ಜಿಲ್ಲೆಯ ರಾಣೆಬೇನ್ನೂರು (Ranebennur) ತಾಲೂಕಿನ ಆರೇಮಲ್ಲಾಪುರ, ಐರಣಿ ಗ್ರಾಮಗಳ ಬಳಿಯಿರುವ ಮಲ್ಲೇಶ್ವರ ಅರಣ್ಯ ಪ್ರದೇಶಕ್ಕೆ ಬೆಂಕಿಯಿಟ್ಟಿದ್ದಾರೆ. ನಾಲ್ಕು ಗಂಟೆಗಳಿಂದ ಅರಣ್ಯ ಪ್ರದೇಶ ಬೆಂಕಿಯಿಂದ ಹೊತ್ತಿಉರಿದಿದ್ದು, ಪರಿಣಾಮ ಹಾನಿಗೀಡಾಗಿದೆ. ಇದನ್ನೂ ಓದಿ: ಭಾರತ – ಇರಾನ್‌ನದ್ದು 75 ವರ್ಷಗಳ ಸ್ನೇಹ – ಇವರು ಎಲ್ಲಾ ಹಾಳು ಮಾಡಿಟ್ಟಿದ್ದಾರೆ: ಕೇಂದ್ರದ ವಿರುದ್ಧ ಶಾಸಕ ಪೊನ್ನಣ್ಣ ಆಕ್ರೋಶ
ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ರಾಣೆಬೇನ್ನೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಪ್ರವಾಸಿ ತಾಣವಾಗಿ ಮಾರ್ಪಾಡು ಮಾಡಲು ಸರ್ಕಾರ ಇತ್ತೀಚಿಗೆ ಈ ಸ್ಥಳವನ್ನ ಆಯ್ಕೆ ಮಾಡಿತ್ತು ಈಗ ಅದೇ ಅರಣ್ಯಧಾಮಕ್ಕೆ ಬೆಂಕಿಯ ಜ್ವಾಲೆ ಆವರಿಸಿದೆ. ಸಂಪದ್ಭರಿತ ವನಸ್ಪತಿ ಗಿಡಮೂಲಿಕೆಗಳು ಈ ಗುಡ್ಡದಲ್ಲಿತ್ತು. ಕೃಷ್ಣಮೃಗ ಅಭಯಾರಣ್ಯ, ಪ್ರಾಣಿ ಪಕ್ಷಿಗಳು ಇರೋ ಅಭಯಾರಣ್ಯದಲ್ಲಿ ಈ ಘಟನೆ ನಡೆದಿದೆ.ಇದನ್ನೂ ಓದಿ: ಮುಸ್ಲಿಮರಿಗೆ ಮೋದಿ ಸುರಕ್ಷತೆ ನೀಡಿದ್ದಾರೆ, ಅದ್ಕೆ ಭಾರತದ ಧ್ವಜ ಇರೋ ಹಡಗುಗಳು ಬರುತ್ತಿವೆ – ಜನಾರ್ದನ ರೆಡ್ಡಿ

