ಬೆಂಗಳೂರು: ಇಲ್ಲಿನ ಸ್ಯಾಂಕಿ ಕೆರೆಯ ಮುಂಭಾಗದಲ್ಲಿರುವ ಟ್ರಯಾಂಗಲ್ ಪಾರ್ಕ್‌ನಲ್ಲಿ ದಿ.ಪುನೀತ್ ರಾಜ್‌ಕುಮಾರ್ ಅವರ 800 ಕೆ.ಜಿ ತೂಕದ ಕಂಚಿನ ಪ್ರತಿಮೆಯನ್ನು ಶಾಸಕ ಅಶ್ವಥ್ ನಾರಾಯಣ್ (Ashwath Narayan) ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅನಾವರಣಗೊಳಿಸಿದರು.
ಪುತ್ಥಳಿ ಅನಾವರಣದ ಬಳಿಕ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ಪುನೀತ್ ರಾಜ್‌ಕುಮಾರ್ ಸದಾಶಿವನಗರದಲ್ಲಿ ಹುಟ್ಟಿ ಬೆಳೆದವರಾಗಿದ್ದರಿಂದ ಅವರ ಪ್ರತಿಮೆ ಮಾಡಬೇಕು ಎಂದು ಒತ್ತಾಯಿಸಿದ್ದರು. ಹಾಗಾಗಿ ಪುನೀತ್ ಅಭಿಮಾನಿಗಳ ಆಸೆಯಂತೆ ಪ್ರತಿಮೆ ಅನಾವರಣ ಗೊಳಿಸಲಾಗಿದೆ. ಪುತ್ಥಳಿ ಅನಾವರಣ ಮಾಡುವುದಕ್ಕೆ ಜಿಬಿಎ ಪಶ್ಚಿಮ ವಿಭಾಗದ ಅಧಿಕಾರಿಗಳು ಹಾಗೂ ಸರ್ಕಾರದ ಸಹಕಾರದೊಂದಿಗೆ ಪ್ರತಿಮೆ ಅನಾವರಣ ಮಾಡಲಾಗಿದೆ. ಸರ್ಕಾರಕ್ಕೆ ಹಾಗೂ ಜಿಬಿಎ ಪಶ್ಚಿಮ ವಲಯದ ಅಧಿಕಾರಿಗಳಿಗೆ ಧನ್ಯವಾದಗಳು ಹೇಳುತ್ತೇನೆ ಎಂದಿದ್ದಾರೆ.ಇದನ್ನೂ ಓದಿ:ಮದ್ಯ ಮಾರಾಟ ಬಂದ್ ಮಾಡುವಂತೆ ಶರಣು ಸಲಗರ್ ಮುಂದೆ ಮಹಿಳೆಯರ ಕಣ್ಣೀರು
ಸ್ಯಾಂಕಿ ಕೆರೆ ಮುಖ್ಯದ್ವಾರದ ಮುಂಭಾಗದಲ್ಲಿರುವ ಸದಾಶಿವನಗರದ ತ್ರಿಕೋನ ಉದ್ಯಾನದಲ್ಲಿ ನಿರ್ಮಿಸಲಾದ “ಸ್ಫೂರ್ತಿಯ ಪ್ರತಿಮೆ” (Statue of Inspiration) — ಕರ್ನಾಟಕ ರತ್ನ, ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ಅವರ 10 ಅಡಿ ಎತ್ತರದ ಪುತ್ಥಳಿಯನ್ನು ಶ್ರೀಮತಿ @Ashwini_PRK ಹಾಗೂ ಖ್ಯಾತ ಚಲನಚಿತ್ರ ನಿರ್ದೇಶಕರಾದ ಡಾ. ರಾಜೇಂದ್ರ ಸಿಂಗ್… pic.twitter.com/ZaSOreBlZp
— Dr. C.N. Ashwath Narayan (@drashwathcn) March 20, 2026
ನಟ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಮಾತನಾಡಿ, ಅಶ್ವತ್ ನಾರಾಯಣ್ ಅವರಿಗೆ ಧನ್ಯವಾದಗಳು, ಪ್ರತಿಮೆ ಚೆನ್ನಾಗಿದೆ ಎಂದರು.

