ನವದೆಹಲಿ: ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ವಿತರಣೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಎಲ್‌ಪಿಜಿ (LPG) ಉತ್ಪಾದನೆಯು ಶೇ. 40 ರಷ್ಟು ಹೆಚ್ಚಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶಾದ್ಯಂತದ ಇರುವ ಸಂಸ್ಕರಣಾಗಾರಗಳು (Refineries) ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತಮ್ಮ ಅತ್ಯುನ್ನತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ಇಲ್ಲಿಯವರೆಗೆ ಸುಮಾರು 11,300 ಟನ್ ಎಲ್‌ಪಿಜಿಯನ್ನು ಗ್ರಾಹಕರಿಗೆ ಪೂರೈಸಲಾಗಿದೆ. ಪ್ರಮುಖ 15 ಭೌಗೋಳಿಕ ಪ್ರದೇಶಗಳಲ್ಲಿ ಸುಮಾರು 13,700 ಪೈಪ್ಡ್ ನೈಸರ್ಗಿಕ ಅನಿಲ (PNG) ಸಂಪರ್ಕಗಳನ್ನು ಒದಗಿಸಲಾಗಿದೆ. ಆನ್‌ಲೈನ್ ಎಲ್‌ಪಿಜಿ ಬುಕ್ಕಿಂಗ್ ಶೇ.93ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.
Refineries are operating at peak capacity with adequate crude and LPG stocks, ensuring stable supply and normal deliveries despite high booking levels. Nearly 93% of bookings are online with authenticated delivery. Consumers are being encouraged to shift towards PNG, with over… pic.twitter.com/FnubMcSWv3
— PIB India (@PIB_India) March 20, 2026
ಸಿಲಿಂಡರ್‌ಗಳ ಅಕ್ರಮ ಮಾರಾಟ ತಡೆಯಲು ಮತ್ತು ನ್ಯಾಯಯುತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಗುರುವಾರ ಭಾರತದಾದ್ಯಂತ ಸುಮಾರು 4,500 ದಾಳಿಗಳನ್ನು ನಡೆಸಿದ್ದಾರೆ ಎಂದು ಶರ್ಮಾ ಹೇಳಿದರು. ಇದನ್ನೂ ಓದಿ: ಜಾಗತಿಕ ತೈಲ, ಅನಿಲ ಬಿಕ್ಕಟ್ಟು; ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಜಾರಿಗೊಳಿಸಿದ ಸರ್ಕಾರ
𝐈𝐧𝐭𝐞𝐫-𝐌𝐢𝐧𝐢𝐬𝐭𝐞𝐫𝐢𝐚𝐥 𝐁𝐫𝐢𝐞𝐟𝐢𝐧𝐠 𝐨𝐧 𝐑𝐞𝐜𝐞𝐧𝐭 𝐃𝐞𝐯𝐞𝐥𝐨𝐩𝐦𝐞𝐧𝐭𝐬 𝐢𝐧 𝐖𝐞𝐬𝐭 𝐀𝐬𝐢𝐚 –
No increase in regular petrol prices; only premium petrol rates have been raised: Sujata Sharma, Joint Secretary, Ministry of Petroleum and Natural Gas… pic.twitter.com/xtt0IaTdT2
— SansadTV (@sansad_tv) March 20, 2026
ಶಿಪ್ಪಿಂಗ್ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಸಿನ್ಹಾ, ಹಾರ್ಮುಜ್ ಜಲಸಂಧಿಯ (Hormuz Strait) ಪಶ್ಚಿಮದಲ್ಲಿರುವ ಎಲ್ಲಾ 22 ಹಡಗುಗಳು ಸುರಕ್ಷಿತವಾಗಿವೆ. ಕಳೆದ 24 ಗಂಟೆಗಳಲ್ಲಿ 25 ನಾವಿಕರು ಭಾರತಕ್ಕೆ ಮರಳಿದ್ದಾರೆ ಮತ್ತು ಯಾವುದೇ ಬಂದರುಗಳಲ್ಲಿ ಯಾವುದೇ ದಟ್ಟಣೆ ವರದಿಯಾಗಿಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: ಇಸ್ರೇಲ್, ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಇರಾನ್ ಟಾಪ್ ಕಮಾಂಡರ್ ಬಲಿ

