ಜೋಗಿ ಪ್ರೇಮ್ ನಿರ್ದೇಶನದ ಹಾಗೂ ನಟ ಧ್ರುವ ಸರ್ಜಾ ಅಭಿನಯದ ‘ಕೆಡಿ’ ಸಿನಿಮಾದ ‘ಸರ್ಸೆ ಸರ್ಸೆ ನಿನ್ನ ಸೆರಗಾ ಸರ್ಸೆ’ ಹಾಡನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ.
ಲೋಕಸಭೆಯಲ್ಲಿ ಮಾತನಾಡಿದ ಕೇಂದ್ರ ಸಚಿವೆ ಅಶ್ವಿನಿ ವೈಷ್ಣವ್, ಸರ್ಕಾರ ಈ ಹಾಡಿನ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಭಾರತದಲ್ಲಿ ವಾಕ್ ಸ್ವಾತಂತ್ರ್ಯವು ಸಾಂವಿಧಾನಿಕ ಮಿತಿಗಳಿಗೆ ಒಳಪಟ್ಟಿರುತ್ತದೆ. ಸಂವಿಧಾನವು ಸೂಚಿಸಿರುವ ಸಮಂಜಸವಾದ ನಿರ್ಬಂಧಗಳ ವ್ಯಾಪ್ತಿಯಲ್ಲಿ ಅಭಿವ್ಯಕ್ತಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು. ಇದನ್ನೂ ಓದಿ: ʻಸರ್ಸೆ ಸರ್ಸೆ ಸೆರಗ ಸರ್ಸೆʼ ಹಾಡಿನ ವಿವಾದ – ಮಹಿಳಾ ಆಯೋಗದಿಂದ ಫಿಲ್ಮ್ ಚೇಂಬರ್‌ಗೆ ಪತ್ರ
ಹಾಡು ಬ್ಯಾನ್ ಆದ ಬೆನ್ನಲ್ಲೇ ನಿರ್ದೇಶಕ ಪ್ರೇಮ್‌ಗೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರು ಬುಲಾವ್ ನೀಡಿದ್ದಾರೆ. ಸರ್ಸೆ ಹಾಡಿನ ವಿವಾದದ ಬೆನ್ನಲ್ಲೇ ನಟ ಪ್ರೇಮ್, ಆನಂದ್ ಆಡಿಯೋದವರು ಹಾಗೂ ನಿರ್ಮಾಪಕರನ್ನು ಕರೆದಿದ್ದೇವೆ. ನೋಡೋಣ ಸಭೆಯಲ್ಲಿ ನಾನು ವಿರೋಧದ ಅಂಶದ ಬಗ್ಗೆ ಗಮನಕ್ಕೆ ತರುತ್ತೇನೆ ಎಂದು ತಿಳಿಸಿದ್ದಾರೆ.
ಜೋಗಿ ಪ್ರೇಮ್ (Jogi Prem) ನಿರ್ದೇಶನದ ಕೆಡಿ-ದ ಡೆವಿಲ್ (K.D The Devil) ಸಿನಿಮಾದ ಸರ್ಸೆ ಸರ್ಸೆ ಹಾಡಿನ ವಿವಾದಕ್ಕೆ ಸಂಬಂಧಿಸಿದಂತೆ ಫಿಲ್ಮ್ ಚೇಂಬರ್ (Film Chamber) ಅಧ್ಯಕ್ಷೆ ಜಯಮಾಲ ಅವರಿಗೆ ಮಹಿಳಾ ಆಯೋಗ (Women’s Commission) ಪತ್ರ ಬರೆದಿತ್ತು. ಸಿನಿಮಾದ ಈ ಹಾಡು ಅಶ್ಲೀಲವಾಗಿದೆ. ಮಹಿಳೆಯರ ಘನತೆಗೆ ಕುತ್ತು ಬರುತ್ತೆ ಎಂದು ಪತ್ರದಲ್ಲಿ ಆಕ್ಷೇಪ ವ್ಯಕ್ತಪಡಿಸಿತ್ತು. ಇದನ್ನೂ ಓದಿ: ಯುಗಾದಿಗೆ ಬಂಪರ್ ಆಫರ್ ಕೊಟ್ಟ ಮಹೇಶ್ ಬಾಬು ‘ಎಎಂಬಿ ಸಿನಿಮಾಸ್’

