ನವದೆಹಲಿ: ಯುಎಇಯಿಂದ (UAE) ಹೊರಟಿರುವ 81 ಸಾವಿರ ಟನ್ ಕಚ್ಚಾ ತೈಲ(Crude oil) ನಾಳೆ ಭಾರತಕ್ಕೆ (India) ಬರಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಂದರು, ಹಡಗು ಮತ್ತು ಜಲಮಾರ್ಗ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿನ್ಹಾ ಯುಎಇಯಿಂದ ಭಾರತೀಯ ಧ್ವಜ ಹೊತ್ತ ಹಡಗು ಭಾರತಕ್ಕೆ ಬರುವ ಮಾರ್ಗದಲ್ಲಿದೆ ಎಂದು ತಿಳಿಸಿದರು.
ಮಾರ್ಚ್ 14 ರಂದು ಯುಎಇಯಿಂದ ಹೊರಟ ಭಾರತೀಯ ಧ್ವಜದ ಹಡಗು ಜಗ್ ಲಾಡ್ಕಿ ಸುಮಾರು 81,000 ಟನ್ ಮುರ್ಬನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಭಾರತದತ್ತ ಬರುತ್ತಿದೆ. ಹಡಗು ಮತ್ತು ಅದರಲ್ಲಿರುವ ಎಲ್ಲಾ ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ. ಅವರು ನಾಳೆ ಮುಂದ್ರಾ ಬಂದರು ತಲುಪಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಕೊಲ್ಲಿ ಯುದ್ಧದ ಬಳಿಕ 2.20 ಲಕ್ಷ ಮಂದಿ ಭಾರತಕ್ಕೆ ರಿಟರ್ನ್: ಕೇಂದ್ರ ಸರ್ಕಾರ
ಎಲ್‌ಪಿಜಿಯನ್ನು ಹೊತ್ತುಕೊಂಡು ಪರ್ಷಿಯನ್ ಕೊಲ್ಲಿಯಿಂದ ಹೊರಟು ಹಾರ್ಮುಜ್ ಜಲಸಂಧಿಯನ್ನು (Strait of Hormuz) ದಾಟಿ ಭಾರತಕ್ಕೆ ಆಗಮಿಸಿದ ಶಿವಾಲಿಕ್ (Shivalik) ಹಡಗಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈ ಹಡಗಿನಿಂದ ಸರಕು ಸಾಗಣೆಯಲ್ಲಿ ಯಾವುದೇ ವಿಳಂಬವಾಗದಂತೆ ಬಂದರಿನಲ್ಲಿ ದಾಖಲೆಗಳು, ಆದ್ಯತೆಯ ಬರ್ತಿಂಗ್ ಮತ್ತು ಎಲ್ಲವನ್ನೂ ವ್ಯವಸ್ಥೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಇರಾನ್ ಹೊಸ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಗೆ ರಷ್ಯಾದಲ್ಲಿ ಚಿಕಿತ್ಸೆ!

