– ಮುಂದಿನ ಜೂನ್, ಜುಲೈ ವರೆಗೆ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ
ಮಂಡ್ಯ: ಹಳೆ ಮೈಸೂರು ಭಾಗದ ಜೀವನಾಡಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂನ (KRS Dam) ನೀರಿನ ಮಟ್ಟ ಇಂದು 110.44 ಅಡಿಗೆ ಕುಸಿದಿದೆ. ಹೀಗಿದ್ದರು ಸಹ ಮುಂದಿನ ಜೂನ್, ಜುಲೈ ತಿಂಗಳಿನವರೆಗೆ ಕುಡಿಯುವ ನೀರಿಗೆ ಯಾವ ಅಭಾವ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
124.80 ಗರಿಷ್ಠ ಅಡಿ ಮಟ್ಟದ ಕೆಆರ್‌ಎಸ್ ಡ್ಯಾಂನಲ್ಲಿ 110.44 ಅಡಿಯಷ್ಟು ನೀರಿದೆ. 32.167 ಟಿಎಂಸಿಯಷ್ಟು ಸದ್ಯ ನೀರಿದ್ದು, ಈ ನೀರು ಮುಂದಿನ ಜೂನ್, ಜುಲೈ ತಿಂಗಳಿನವರೆಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ. ಈ ವರ್ಷ ಕಳೆದ ವರ್ಷ ಉತ್ತಮ ಮಳೆ ಬಿದ್ದ ಪರಿಣಾಮ, ಕೆಆರ್‌ಎಸ್ ವರ್ಷದಲ್ಲಿ ಎರಡು ಬಾರಿ ಭರ್ತಿಯಾಗಿತ್ತು. ಜೊತೆಗೆ ಹಲವು ತಿಂಗಳು ಗರಿಷ್ಠ ಮಟ್ಟವನ್ನೇ ಕಾಯ್ದುಕೊಂಡಿತ್ತು. ಇದನ್ನೂ ಓದಿ: ಆಪ್ತ ಸಚಿವರಿಗೆ ಸಿದ್ದರಾಮಯ್ಯ ಇಂದು ಡಿನ್ನರ್ ಪಾರ್ಟಿ – ಕುರ್ಚಿ ಕದನಕ್ಕೆ ಟ್ವಿಸ್ಟ್ ಕೊಡ್ತಾರಾ ಸಿಎಂ?
ಹೀಗಾಗಿ, ಈಗಲೂ ಸಹ ಡ್ಯಾಂನಲ್ಲಿ ಇಷ್ಟು ಪ್ರಮಾಣದ ನೀರು ಸಂಗ್ರಹವಾಗಿದೆ. ಕುಡಿಯುವ ನೀರಿನ ಜೊತೆಗೆ ಮಂಡ್ಯ ಜಿಲ್ಲೆಯ ರೈತರ ಬೇಸಿಗೆ ಬೆಳೆಗಳಿಗೂ ಸಹ ನೀರನ್ನು ಕಟ್ಟು ಪದ್ಧತಿಯಲ್ಲಿ ಪೂರೈಸಲಾಗುತ್ತಿದೆ. ಸದ್ಯ ಈ ವರ್ಷ ಮೈಸೂರು, ಮಂಡ್ಯ, ಬೆಂಗಳೂರಿಗೆ ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

