Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮಧ್ಯಪ್ರಾಚ್ಯ ಸಂಘರ್ಷ –  ಕೈಗಾರಿಕೆಗಳಿಗೆ ಭಾರೀ ಹೊಡೆತ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮಧ್ಯಪ್ರಾಚ್ಯ ಸಂಘರ್ಷ –  ಕೈಗಾರಿಕೆಗಳಿಗೆ ಭಾರೀ ಹೊಡೆತ!

Latest

ಮಧ್ಯಪ್ರಾಚ್ಯ ಸಂಘರ್ಷ –  ಕೈಗಾರಿಕೆಗಳಿಗೆ ಭಾರೀ ಹೊಡೆತ!

Public TV
Last updated: March 15, 2026 11:38 pm
Public TV
Share
4 Min Read
iran and israel
SHARE

ಇರಾನ್ ಹಾಗೂ ಇಸ್ರೇಲ್, ಅಮೆರಿಕ ನಡುವಿನ ಜಂಟಿ ಯುದ್ಧ ತಾರಕಕ್ಕೇರಿದೆ. ದಿನೇ ದಿನೇ ಕಾದಾಟ ಜೋರಾಗುತ್ತಿದೆ. ಈ ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಭಾರತ ಸೇರಿ ವಿವಿಧ ದೇಶಗಳ ಮೇಲೆ ಪರಿಣಾಮ ಬೀರುತ್ತದೆ. ತೈಲ ಹಾಗೂ ಇಂಧನ ಸೇರಿದಂತೆ ಹಲವು ಕೈಗಾರಿಕೆಗಳಲ್ಲಿ ಅವ್ಯವಸ್ಥೆ ಉಂಟಾಗಿದ್ದು, ಸಮಸ್ಯೆ ಎದುರಿಸುವಂತಾಗಿದೆ. ಹೌದು.. ಭಾರತದ ಯಾವೆಲ್ಲಾ ಕೈಗಾರಿಕೆಗಳ ಮೇಲೆ ಪರಿಣಾಮ ಉಂಟಾಗಿದೆ? ಇದೆಲ್ಲದರ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಹೌದು, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ತೈಲ, ಇಂಧನ ಸೇರಿದಂತೆ ಜವಳಿ ಕೈಗಾರಿಕೆ, ಗಣಿಗಾರಿಕೆ, ಉಕ್ಕು ಸೇರಿದಂತೆ ಹಲವು ಕೈಗಾರಿಕೆಗಳ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಇದ್ದಷ್ಟು ಉತ್ಪನ್ನಗಳ ಬೆಲೆಯು ಗಗನಕ್ಕೇರಿದೆ. ಈಗಾಗಲೇ ಇಂಧನ, ಎಲ್ ಪಿಜಿ ಸಿಲಿಂಡರ್ ಬೆಲೆ ಎಲ್ಲವೂ ಹೆಚ್ಚಾಗಿದ್ದು, ಇದರ ಪರಿಣಾಮವು ಬೇರೆ ಕೈಗಾರಿಕೆಗಳ ಮೇಲೆ ಬೀರಿದೆ.

Iran Israel War 1

ಇರಾನ್ ಮತ್ತು ಇಸ್ರೇಲ್ ಯುದ್ಧ ಪ್ರಾರಂಭವಾದಾಗಿನಿಂದ ಭಾರತದ ಕೈಗಾರಿಕೆಗಳ ಮೇಲಿನ ಪರಿಣಾಮ ಕಾಣಿಸುತ್ತದೆ. ಭಾರತೀಯ ಕೈಗಾರಿಕೆಗಳು ಒತ್ತಡಕ್ಕೆ ಒಳಗಾಗುತ್ತಿವೆ. ಹಾರ್ಮುಜ್ ಜಲಸಂಧೀ ಬಂದ್ ಮಾಡುವ ಮೂಲಕ ಜಾಗತಿಕ ಮಟ್ಟದಲ್ಲಿ ಸಮಸ್ಯೆ ಉಂಟಾಗಿದೆ. 

ಯಾವೆಲ್ಲ ಕೈಗಾರಿಕೆಗಳ ಮೇಲೆ ಪರಿಣಾಮ ಬೀರಿದೆ?
ವರದಿಗಳ ಪ್ರಕಾರ, ರಾಸಾಯನಿಕ ಮತ್ತು ಜವಳಿ ಕಂಪನಿಗಳಿಗೆ ಅನಿಲ ಪೂರೈಕೆ ಕಡಿಮೆಯಾಗುತ್ತಿರುವುದರಿಂದ ಖರ್ಚು ಹೆಚ್ಚಾಗುತ್ತಿದೆ. ಹೀಗಾಗಿ ಉತ್ಪಾದನೆಯಲ್ಲಿ ಇಳಿಕೆಯಾಗುತ್ತಿದ್ದು, ವಸ್ತುಗಳ ಲಭ್ಯತೆ ಕಡಿಮೆಯಾಗುತ್ತದೆ. ಇದರಿಂದ ಗ್ರಾಹಕರಿಗೆ ಬೆಲೆಯಲ್ಲಿ ಏರಿಕೆಯಾಗುತ್ತದೆ. ಕೈಗಾರಿಕೆಗಳಲ್ಲಿ ಉತ್ಪಾದಕರು ಅನಿಲ ಅಗತ್ಯತೆಯ ಪೈಕಿ 40 ಶೇಕಡಾದಷ್ಟು ಮಾತ್ರ ಅನಿಲ ಸಿಗುತ್ತಿದ್ದು, ಸಮಸ್ಯೆ ಎದುರಾಗುತ್ತದೆ. ಅಲ್ಲದೆ ಕಲ್ಲಿದ್ದಲು, ಸಲ್ಫ್ಯೂರಿಕ್ ಆಸಿಡ್ ಸೇರಿದಂತೆ ವಿವಿಧ ರಾಸಾಯನಿಕಗಳ ಬೆಲೆಯೂ ಏರಿಕೆಯಾಗಿದೆ. 

ಗೊಬ್ಬರ;
ಭಾರತದಲ್ಲಿ ತಯಾರಾಗುವ ಹಾಗೂ ಬಳಸಲ್ಪಡುವ ಗೊಬ್ಬರಗಳಿಗೆ ಬೇಕಾಗುವ ಕೆಲವು ಕಚ್ಚಾ ವಸ್ತುಗಳು ಮಧ್ಯಪ್ರಾಚ್ಯ ದೇಶಗಳಿಂದ ಆಮದಾಗುತ್ತದೆ. ಅಮೋನಿಯಾ, ಯೂರಿಯಾ, ಫಾಸ್ಪೇಟ್ ಹಾಗೂ ಪೊಟ್ಯಾಶಿಯಂ ನಂತಹ ಕೆಲವು ರಾಸಾಯನಿಕಗಳು ಆಮದಾಗುತ್ತವೆ. ಸದ್ಯ ಯುದ್ಧದ ಕಾರಣದಿಂದಾಗಿ ಸಾಗಾಣೆ ಕಡಿಮೆಯಾಗಿ ಉತ್ಪಾದನೆ ಅಡಚಣೆಗೊಳದಾಗಿದೆ. ಇದರಿಂದ ಉತ್ಪಾದನೆಯಲ್ಲಿ ಕಡಿಮೆಯಾಗಿ ಗೊಬ್ಬರಗಳ ಮೇಲೆ ಪರಿಣಾಮ ಬೀರಿದೆ. 

MCS Aries Iran Israel–Hamas war 17 Indians on board Israeli linked vessel seized by Iran in Strait of Hormuz

ಹರ್ಮುಜ್ ಜಲಸಂದಿ ವಿಶ್ವದ ಪ್ರಮುಖ ಸಾಗಣೆ ಮಾರ್ಗಗಳಲ್ಲಿ ಒಂದಾಗಿದ್ದು, ಸದ್ಯ ಯುದ್ಧದ ಪರಿಣಾಮ ಸಾಗಾಣೆ ವಿಳಂಬವಾಗುತ್ತಿದೆ. ಭಾರತ ಸರ್ಕಾರ ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡಲು ಸಬ್ಸಿಡಿ ನೀಡುತ್ತಿದ್ದರು ಕೂಡ, ಆಮದು ಬೆಲೆ ಹೆಚ್ಚಾಗುವುದರಿಂದ ಸರ್ಕಾರಕ್ಕೆ ಹೆಚ್ಚಿನ ಖರ್ಚಾಗುತ್ತದೆ. ಹೀಗಾಗಿ ಇದರ ಮೇಲೆಯೂ ಪರಿಣಾಮ ಬೀರಿದೆ. ಗೊಬ್ಬರದಿಂದಾಗಿ ಉತ್ಪಾದನೆ ಮೇಲೆ ಪರಿಣಾಮ ಬೀರಿ, ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗುತ್ತದೆ ಮತ್ತು ರೈತರಿಗೆ ಲಾಭ ಕಡಿಮೆಯಾಗುತ್ತದೆ 

ಮಾವಿನ ಹಣ್ಣು:
ಭಾರತ ದೇಶದಲ್ಲಿ ಬೆಳೆಯುವ ಮಾವಿನ ಹಣ್ಣು ಅದರಲ್ಲಿ ಒಂದಾಗಿರುವ ಪಲ್ಪ್ ಮಾವಿನ ಹಣ್ಣು ಖರೀದಿಸುವ ಮಾರುಕಟ್ಟೆಗಳ ಪೈಕಿ ಮಧ್ಯ ಪ್ರಾಚ್ಯ ದೇಶಗಳು ಕೂಡ ಒಂದು. ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಶೇಕಡ 60 ರಿಂದ 70ರಷ್ಟು ಮಾವಿನ ಹಣ್ಣನ್ನು ರಫ್ತು ಮಾಡುತ್ತದೆ.   ಅವಶ್ಯಕತೆಗೆ ಅನುಗುಣವಾಗಿ ಮಹಾರಾಷ್ಟ್ರದಲ್ಲಿ ಪ್ರತಿ ವರ್ಷ ಸುಮಾರು 1.7 ಲಕ್ಷ ಮೆಟ್ರಿಕ್ ಟನ್ ಮಾವಿನ ಹಣ್ಣುಗಳನ್ನು ಉತ್ಪಾದಿಸಲಾಗುತ್ತದೆ. ಈ ಪೈಕಿ ಸುಮಾರು 20 ಸಾವಿರದಿಂದ 25,000 ಮೆಟ್ರಿಟನ್ ಗಳನ್ನು ವಿದೇಶಕ್ಕೆ ಕಳುಹಿಸಲಾಗುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ ಹೆಚ್ಚು ಆಮದು ಮಾಡಿಕೊಳ್ಳುತ್ತಿದ್ದರೆ, ಜೊತೆಗೆ ಯುನೈಟೆಡ್ ಸ್ಟೇಟ್ಸ್, ಜಪಾನ್, ದಕ್ಷಿಣ ಕೋರಿಯಾ ಹಾಗೂ ಹಲವಾರು ಯುರೋಪಿಯನ್ ರಾಷ್ಟ್ರಗಳು ಆಮದು ಮಾಡಿಕೊಳ್ಳುತ್ತವೆ. ಸಾಧ್ಯ ಯುದ್ಧದ ಪರಿಸ್ಥಿತಿಯಿಂದಾಗಿ ಮಾವುಗಳ ಸಾಗಣೆ ವಿಳಂಬವಾಗುತ್ತಿದೆ. ಕಾಂಟೇನರ್ಗಳು ಬಂದರುಗಳಲ್ಲಿ ನಿಂತ ಪರಿಣಾಮ ಈ ಸಮಸ್ಯೆ ಎದುರಾಗಿದೆ. ಜೊತೆಗೆ ಇದರಿಂದ ರಫ್ತು ಮತ್ತು ಆದಾಯ ಕುಸಿದು, ವಿದೇಶಿ ಆರ್ಡರ್ಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಇದರಿಂದ ಕೊನೆಗೆ ಆದಾಯ ಕಡಿಮೆಯಾಗಿ ರೈತರು ಮತ್ತು ಕಾರ್ಖಾನೆಗಳ ಮೇಲೆಯೂ ಆರ್ಥಿಕ ಸಮಸ್ಯೆ ಎದುರಾಗುತ್ತದೆ.

ಆಭರಣಗಳು:
ಭಾರತದ ವಜ್ರ ಮತ್ತು ಚಿನ್ನದ ಆಭರಣಗಳ ದೊಡ್ಡ ಮಾರುಕಟ್ಟೆ ಎಂದರೆ ಅದು ಮಧ್ಯಪ್ರಾಚ್ಯ ದೇಶಗಳು. ಯುಎಇ, ಸೌದಿ ಅರೇಬಿಯಾ, ಕತಾರ್ ಹಾಗೂ ಕುವೈತ್ ದೇಶಗಳಿಗೆ ಭಾರತೀಯ ವಜ್ರ ಮತ್ತು ಚಿನ್ನದ ಆಭರಣಗಳು ದೊಡ್ಡ ಪ್ರಮಾಣದಲ್ಲಿ ರಫ್ತಾಗುತ್ತದೆ. ವಿಮಾನ ಹಾಗೂ ಹಡಗುಗಳ ಸಂಚಾರದಲ್ಲಿ ಅಡಚಣೆ ಉಂಟಾಗಿ ಸಾಗಾಣಿ ಸಮಯ ಹೆಚ್ಚಾಗುತ್ತದೆ. ಇದರಿಂದ ವೆಚ್ಚವು ಹೆಚ್ಚಾಗುತ್ತದೆ. ಆರ್ಡರ್ಗಳು ಕಡಿಮೆಯಾಗಿ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ಇದರಿಂದ ಚಿನ್ನದ ಬೆಲೆಯು ಹೆಚ್ಚಾಗುವ ಸಾಧ್ಯತೆ ಇದೆ. ಭಾರತದ ಸೂರತ್, ಮುಂಬೈ ಹಾಗೂ ಜೈಪುರ ದಂತಹ ಮುಂತಾದ ನಗರಗಳಲ್ಲಿ ವಜ್ರ ಹಾಗೂ  ಆಭರಣದ ಉದ್ಯಮವಿದೆ.

MCS Aries

ಸ್ಟೀಲ್:
ಭಾರತದ ಸ್ಟೀಲ್ ಉತ್ಪನ್ನಗಳಿಗೆ ಮಧ್ಯಪ್ರಾಚ್ಯ ದೇಶಗಳು ಪ್ರಮುಖ ಮಾರುಕಟ್ಟೆಯಾಗಿದೆ. ಯುಎಇ, ಸೌದಿ ಅರೇಬಿಯಾ, ಕತಾರ್ ಹಾಗೂ ಒಮಾನ್‌ ದೇಶಗಳಲ್ಲಿ  ನಿರ್ಮಾಣ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಭಾರತೀಯ ಸ್ಟೀಲ್ ಬಳಸಲಾಗುತ್ತದೆ. ಸದ್ಯ ಈ ಯುದ್ಧದಿಂದ  ರಫ್ತು ಕಡಿಮೆಯಾಗಿದೆ. ಸ್ಟೀಲ್ ಉತ್ಪಾದನೆಗೆ ಬೇಕಾದ ತೈಲ, ಕಲ್ಲಿದ್ದಲು ಮತ್ತು ಕಚ್ಚಾ ವಸ್ತುಗಳ ಬೆಲೆ ಸದ್ಯ ಜಾಗತಿಕವಾಗಿ ಏರಿಕೆಯಾಗುತ್ತಿದೆ. ಇದರಿಂದಾಗಿ ಸುಮಾರು 0.6 ಮಿಲಿಯನ್ ಟನ್‌ಗಳಷ್ಟು ಉತ್ಪಾದನೆ ಸ್ಥಗಿತಗೊಂಡಿದೆ. 

ಸೆರಾಮಿಕ್ ಟೈಲ್ಸ್: 
ಆಭರಣ , ಉಕ್ಕಿನಂತೆ ಸೆರಾಮಿಕ್ ಟೈಲ್ಸ್ ಗೂ ಕೂಡ ಮಧ್ಯಪ್ರಾಚದ ದೇಶಗಳು ಅತಿ ದೊಡ್ಡ ಮಾರುಕಟ್ಟೆ. ಸೆರಾಮಿಕ್ ಮತ್ತು ಟೈಲ್ಸ್ ತಯಾರಿಕೆಗೆ ಗ್ಯಾಸ್ ಮತ್ತು ಇಂಧನ ಅತ್ಯಗತ್ಯ. ಈ ಯುದ್ಧದಿಂದಾಗಿ ತೈಲ ಮತ್ತು ಗ್ಯಾಸ್ ಬೆಲೆ ಏರಿದರೆ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ. ಮತ್ತು ಇದರಿಂದ ಉತ್ಪಾದನೆಯು ಕಡಿಮೆಯಾಗಿ ಸಮಸ್ಯೆ ಎದುರಾಗುತ್ತದೆ. ಮತ್ತು ಸಾಗಾಣಿಯು ಕಡಿಮೆಯಾಗಿ ಆದಾಯವು ಕುಸಿಯುತ್ತದೆ

Israel US Strikes on Iran

ಯುದ್ಧದಿಂದ ಭಾರತದ ಮೇಲೆ ಹೆಚ್ಚಿನ ಸಮಸ್ಯೆ ಯಾಕೆ?
ಶೇಕಡ 50ರಷ್ಟು ಕಚ್ಚಾ ತೈಲ, ಶೇಕಡ 50 ರಿಂದ 55ರಷ್ಟು ಎಲ್ ಏನ್ ಜಿ, ಸೇರಿದಂತೆ ಹಲವು ವಸ್ತುಗಳ ಆಮದುಗಳಿಗೆ ಮಧ್ಯ ಪ್ರಾಚ್ಯ ದೇಶಗಳು ಅವಲಂಬಿಸಿದ್ದು, ಇದು ಭಾರತದ ಮೇಲೆ ಪರಿಣಾಮ ಬೀರುತ್ತದೆ.

TAGGED:americaindiairanIsraelStrait of Hormuzಅಮೆರಿಕಇರಾನ್ಇಸ್ರೇಲ್ಭಾರತಹರ್ಮುಜ್ ಜಲಸಂಧಿ
Share This Article
Facebook Whatsapp Whatsapp Telegram

Cinema news

chandanavana film critics academy awards
ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ – ಅತಿ ಹೆಚ್ಚು ನಾಮನಿರ್ದೇಶಿತರು ಯಾರು?
Cinema Latest Sandalwood Top Stories
Aamir Khan birthday
ಗರ್ಲ್‌ಫ್ರೆಂಡ್‌, ಮಾಜಿ ಪತ್ನಿಯರ ಜೊತೆ ಸೇರಿ ಹುಟ್ಟುಹಬ್ಬ ಆಚರಿಸಿಕೊಂಡ ಆಮೀರ್‌ ಖಾನ್‌
Bollywood Cinema Latest Top Stories
vijay thalapathy
ಕರೂರ್‌ ಕಾಲ್ತುಳಿತ ಕೇಸ್‌ – CBI ಮುಂದೆ ವಿಚಾರಣೆಗೆ ಹಾಜರಾದ ವಿಜಯ್‌
Cinema Latest Main Post South cinema
Anushka Shetty
ಸ್ವೀಟಿ ಅನುಷ್ಕಾಗೆ ಕಂಕಣ ಭಾಗ್ಯ – ಬೆಂಗಳೂರು ಮೂಲದ ಉದ್ಯಮಿ ಜೊತೆ ಮದ್ವೆ?
Cinema Latest South cinema

You Might Also Like

Woman murdered by sugarcane plantation Athani Belagavi
Belgaum

ಆಸ್ತಿಗಾಗಿ ಸ್ನೇಹಿತನಿಂದಲೇ ಕಬ್ಬಿನ ತೋಟದಲ್ಲಿ ಮಹಿಳೆಯ ಕೊಲೆ

Public TV
By Public TV
8 hours ago
israel pm benjamin netanyahu releases cafe video to debunk viral death rumours
Latest

ʻನಾನು ಸತ್ತಿದ್ದೇನೆʼ – ಕಾಫಿ ಕುಡಿಯುತ್ತಾ ವಿರೋಧಿಗಳನ್ನು ಟ್ರೋಲ್‌ ಮಾಡಿದ ನೆತನ್ಯಾಹು

Public TV
By Public TV
8 hours ago
Tumakuru Congress
Districts

ನೂರಕ್ಕೂ ಹೆಚ್ಚು ನಕಲಿ ಮತಪತ್ರ ಬ್ಯಾಲೆಟ್‌ಗೆ ಹಾಕಲು ಮುಂದಾದ ಕಾಂಗ್ರೆಸ್‌ ಕಾರ್ಯಕರ್ತರು – ಸಹಕಾರಿ ಸಂಘದ ಚುನಾವಣೆಯೇ ರದ್ದು

Public TV
By Public TV
8 hours ago
Prasanna Aurasanga
Bagalkot

ಉಪಚುನಾವಣೆ ಹೊತ್ತಲ್ಲೇ ಬಾಗಲಕೋಟೆ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ

Public TV
By Public TV
9 hours ago
Epstein network plotting 9 11 style attack to blame Iran security chief claims
Latest

9/11 ರೀತಿ ದಾಳಿ ನಡೆಸಿ ನಮ್ಮ ಮೇಲೆ ಆರೋಪ ಹೊರಿಸಲು ಎಪ್ಸ್ಟೀನ್ ಜಾಲ ಪ್ಲ್ಯಾನ್‌: ಇರಾನ್ ಆರೋಪ

Public TV
By Public TV
10 hours ago
TVK Vijay
Latest

ಎನ್‌ಡಿಎ ಗೆದ್ದರೆ ವಿಜಯ್‌ಗೆ ಡಿಸಿಎಂ ಹುದ್ದೆ- ಟಿವಿಕೆಗೆ ಬಿಜೆಪಿ ಆಫರ್‌

Public TV
By Public TV
10 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?