ಚಿಕ್ಕಮಗಳೂರು: ಮಲೆನಾಡಲ್ಲಿ ಭಾರಿ ಗಾಳಿ (Rain) ಮಳೆಯಾಗುತ್ತಿದ್ದು, ಕಣತಿ ಗ್ರಾಮದ ಬಳಿಯ ಚಿಕ್ಕಮಗಳೂರು – ಶೃಂಗೇರಿ (Chikkamagaluru -Sringeri) ಹೈವೆಯಲ್ಲಿ ಬೃಹತ್ ಮರ ಧರೆಗುರುಳಿದೆ.
ಮರ ಧರೆಗುರುಳಿದ ಪರಿಣಾಮ ಗಂಟೆಗಟ್ಟಲೇ ಸುಮಾರು 4-5 ಕಿ.ಮೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಮಳೆ ಮಧ್ಯೆ ನಿಂತಲ್ಲೇ ನಿಂತ ವಾಹನಗಳಿಂದ ವಾಹನ ಸವಾರರು ಪರದಾಡಿದ್ದಾರೆ. ಇದನ್ನೂ ಓದಿ: ಧಾರವಾಡ | ಜೋಶಿ ಭಾಷಣದ ವೇಳೆಯೇ ಅಬ್ಬರಿಸಿದ ಮಳೆರಾಯ – ಕುಸ್ತಿ ಪಂದ್ಯ ರದ್ದು
ಚಿಕ್ಕಮಗಳೂರು ನಗರದಲ್ಲೂ ಮಳೆ ಅಬ್ಬರಿಸಿದೆ. ಇದರಿಂದ ವಾಹನ ಸವಾರರು ಪರದಾಡಿದ್ದಾರೆ. ಇನ್ನೂ ಎರಡು ದಿನ ನಗರದ ಸುತ್ತಮುತ್ತ ಮಳೆಯಾಗುವ ಸಾಧ್ಯತೆ ಇದೆ. ಇದನ್ನೂ ಓದಿ: ಬಿಡದಿ ರೆಸಾರ್ಟ್‌ನಲ್ಲಿ ಒಡಿಶಾ ಕಾಂಗ್ರೆಸ್ ಶಾಸಕರ ಆಪರೇಷನ್‌ಗೆ ಬಿಜೆಪಿ ಯತ್ನ – ಚೆಕ್ ಸಮೇತ ಇಬ್ಬರು ವಶ

