ತಿರುವನಂತಪುರಂ: ಚುನಾವಣೆ ಹೊಸ್ತಿಲಲ್ಲಿರುವ ಕೇರಳದಲ್ಲಿ ಸರ್ಕಾರದ ನಿಲುವುಗಳಲ್ಲಿ ಯೂಟರ್ನ್ ಹೊಡೆದಿದೆ. ಮಹಿಳೆಯರು ಶಬರಿಮಲೆ ದೇವಾಲಯ ಪ್ರವೇಶ ವಿಷಯದಲ್ಲಿ ತನ್ನ ಹಿಂದಿನ ನಿಲುವನ್ನು ಕಮ್ಯುನಿಸ್ಟ್ ಸರ್ಕಾರ ಬದಲಾಯಿಸಿಕೊಂಡಿದೆ.
50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇವಾಲಯಕ್ಕೆ ಪ್ರವೇಶಕ್ಕೆ ಸಂಬಂಧಿಸಿದಂತೆ ಸಾಂಪ್ರದಾಯಿಕ ನಿರ್ಬಂಧ ಮುಂದುವರಿಸುವಿಕೆಗೆ ಬೆಂಬಲಿಸುವುದಾಗಿ ಘೋಷಿಸಿದೆ. ಶಬರಿಮಲೆ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಾಚೀನ ಸಂಪ್ರದಾಯ ಮತ್ತು ಪದ್ಧತಿಯನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ಕೇರಳದ ಎಲ್‌ಡಿಎಫ್ ಸರ್ಕಾರ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದೆ. ಇದು ತಿರುವಾಂಕೂರು ದೇವಸ್ವಂ ಮಂಡಳಿಯ ನಿಲುವಿಗೆ ಅನುಸಾರವಾಗಿದ್ದು, ತನ್ನ ಹಿಂದಿನ ನಿಲುವಿನಿಂದ ಸರ್ಕಾರ ಹಿಂದೆ ಸರಿದಿದೆ.
ಪವಿತ್ರ ಮಂದಿರಕ್ಕೆ ಮಹಿಳೆಯರ ಪ್ರವೇಶವನ್ನು ಈ ಹಿಂದೆ ಕೇರಳ ಸರ್ಕಾರ ಬೆಂಬಲಿಸಿತ್ತು. ಇದೀಗ ಕೇರಳ ಸರ್ಕಾರದ ಬದಲಾವಣೆಯನ್ನು ಬಿಜೆಪಿ ಟೀಕಿಸಿದೆ. 2018ರ ತೀರ್ಪನ್ನು ಪ್ರಶ್ನಿಸುವ ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 7ರಿಂದ ಪ್ರಾರಂಭಿಸಲಿದೆ.

