ಹೈದರಾಬಾದ್: ಮದುವೆಯಾಗಲು (Marriage) ನಿರಾಕರಿಸಿದ ಯುವತಿಗೆ ಯುವಕನೊಬ್ಬ ಹೆಚ್‌ಐವಿ ಪಾಸಿಟಿವ್ ಇಂಜೆಕ್ಷನ್ (HIV Positive Injection) ನೀಡಿದ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ.
ಮೆಡ್ಚಲ್ ಪ್ರದೇಶದ ನಿವಾಸಿಯಾಗಿರುವ ಮನೋಹರ್ ಎಂಬ ಯುವಕನೊಂದಿಗೆ ಯುವತಿಯ ಮದುವೆ ನಿಶ್ಚಯಿಸಲಾಗಿತ್ತು. ಆದರೆ ಯುವಕನಿಗೆ ಹೆಚ್‌ಐವಿ ಪಾಸಿಟಿವ್ ಇರುವುದನ್ನು ತಿಳಿದ ಬಳಿಕ ಯುವತಿ ಮದುವೆಗೆ ನಿರಾಕರಿಸಿದ್ಧಾಳೆ. ಮಾರ್ಚ್ 11 ರಂದು ತನ್ನನ್ನ ಮದುವೆಯಾಗುವುಂತೆ ಮನೋಹರ್ ಒತ್ತಾಯಿಸಿದ್ದಾನೆ. ಆದರೆ ಆಕೆ ನಿರಾಕರಿಸಿದಾಗ ಯುವತಿಗೆ ಬಲವಂತವಾಗಿ ಹೆಚ್‌ಐವಿ ಪಾಸಿಟಿವ್ ಇಂಜೆಕ್ಷನ್ ನೀಡಿದ್ದಾನೆ. ಇದನ್ನೂ ಓದಿ: ಉಡುಪಿ ಕೃಷ್ಣ ಮಠಕ್ಕೆ ತಿರುವನಂತಪುರಂ ಬಿಜೆಪಿ ಉಪಮೇಯರ್ ಭೇಟಿ
ಇಂಜೆಕ್ಷನ್ ನೀಡಿದ ಪರಿಣಾಮ ಯುವತಿಗೆ ತೀವ್ರ ಜ್ವರ ಶುರುವಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಈ ವೇಳೆ ಯುವತಿ ನಡೆದ ಘಟನೆಯನ್ನು ಮನೆಯವರಿಗೆ ತಿಳಿಸಿದ್ದಾಳೆ. ಸದ್ಯ ಯುವತಿ ದೂರಿನ ಆಧಾರದ ಮೇಲೆ ಆರೋಪಿ ಮನೋಹರ್‌ನನ್ನ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಯುಎಇಯಲ್ಲಿ ಇರಾನ್ ದಾಳಿ ವೀಡಿಯೋ ಮಾಡಿದ್ರೆ ಅರೆಸ್ಟ್ – ಇಲ್ಲಿವರೆಗೂ 45 ಮಂದಿ ಅಂದರ್

