ಕಾಬೂಲ್: ಅಮೆರಿಕ-ಇರಾನ್(US-Iran War) ಮಧ್ಯೆ ಯುದ್ಧ ನಡೆಯುತ್ತಿದ್ದರೆ ಇನ್ನೊಂದು ಕಡೆ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ (Pakistan-Afghanistan) ಮಧ್ಯೆ ನಡೆಯುತ್ತಿರುವ ಕಾದಾಟ ತೀವ್ರಗೊಳ್ಳುವ ಸಾಧ್ಯತೆಯಿದೆ.
ಇಂದು ಬೆಳಗ್ಗೆ ಕಾಬೂಲ್, ಕಂದಹಾರ್, ಪಕ್ತಿಯಾ, ಪಕ್ತಿಕಾ ಸೇರಿದಂತೆ ಇತರೇ ಪ್ರದೇಶಗಳ ಮೇಲೆ ಮತ್ತೆ ಪಾಕಿಸ್ತಾನ ಏರ್‌ಸ್ಟ್ರೈಕ್ ಮಾಡಿದೆ. ಕಂದಹಾರ್ ವಿಮಾನ ನಿಲ್ದಾಣದ(Kandahar Airport) ಬಳಿ ಇಂಧನ ಡಿಪೋ ಮೇಲೆ ದಾಳಿ ನಡೆಸಿದೆ ಎಂದು ತಾಲಿಬಾನ್ ವಕ್ತಾರ ಆರೋಪಿಸಿದ್ದಾರೆ.
ಕಂದಹಾರ್ ವಿಮಾನ ನಿಲ್ದಾಣದ ಬಳಿ ಖಾಸಗಿ ವಿಮಾನಯಾನ ಸಂಸ್ಥೆ ಕಾಮ್ ಏರ್‌ಗೆ ಸೇರಿದ ಇಂಧನ ಸಂಗ್ರಹಣಾ ಸೌಲಭ್ಯವನ್ನು ಪಾಕಿಸ್ತಾನದ ಮಿಲಿಟರಿ ವಿಮಾನಗಳು ಹೊಡೆದಿವೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಆರೋಪಿಸಿದ್ದಾರೆ.
The spokesperson for the Islamic Emirate says that, continuing its previous acts of aggression and attacks, Pakistan’s military regime has once again bombed Kabul, Kandahar, Paktia, Paktika, and several other areas.
In a statement, Zabihullah Mujahid said that Pakistani military… pic.twitter.com/Lb7JxfHbD7
— TOLOnews English (@TOLONewsEnglish) March 13, 2026
ಪಾಕಿಸ್ತಾನದ ಮಿಲಿಟರಿ ಪಡೆಗಳು ಕೆಲವು ಪ್ರದೇಶಗಳಲ್ಲಿ ನಾಗರಿಕರ ಮನೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿ ಮಹಿಳೆಯರು ಮತ್ತು ಮಕ್ಕಳನ್ನು ಹತ್ಯೆ ಮಾಡಿದೆ. ಪವಿತ್ರ ರಂಜಾನ್ ತಿಂಗಳ ಅಂತಿಮ ದಿನಗಳಲ್ಲಿ ಮತ್ತು ಈದ್ ಮುನ್ನಾದಿನದಂದು ಇಂತಹ ಕ್ರೂರ ಆಕ್ರಮಣಕಾರಿ ಕೃತ್ಯ ಪಾಕಿಸ್ತಾನ ಯಾವುದೇ ಮಾನವ ತತ್ವಗಳು ಅಥವಾ ನೈತಿಕ ಮೌಲ್ಯಗಳಿಗೆ ಬದ್ಧವಾದ ದೇಶವಲ್ಲ ಎನ್ನುವುದನ್ನು ತೋರಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾಬೂಲ್‌ನಲ್ಲಿ ಮನೆಗಳ ಮೇಲೆ ಬಾಂಬ್ ದಾಳಿ ನಡೆದಿದ್ದರಿಂದ ನಾಲ್ಕು ಜನರು ಸಾವನ್ನಪ್ಪಿ, 15 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ಖಾಲಿದ್ ಜದ್ರಾನ್ ಪೋಸ್ಟ್ ಮಾಡಿ ತಿಳಿಸಿದ್ದಾರೆ.

